ಕಳೆದ ಕೆಲವು ವರ್ಷಗಳಿಂದ, ಯೂಟ್ಯೂಬ್ನಲ್ಲಿ ವಿಡಿಯೋಗಳನ್ನು ಅಪ್ಲೋಡ್ ಮಾಡುವ ಹವ್ಯಾಸ ಹೆಚ್ಚಾಗಿದೆ. ನೀವು ಎಲ್ಲಾ ರೀತಿಯವಿಡಿಯೋಗಳನ್ನು ಉಚಿತವಾಗಿ ವೀಕ್ಷಿಸುವ ವೇದಿಕೆಯೆಂದರೆ ಅದು ಯೂಟ್ಯೂಬ್ ಅಂತಾನೇ ಹೇಳ್ಬಹುದು. ಈ ವೇದಿಕೆಯಲ್ಲಿ ಯಾರಾದರೂ ತಮ್ಮದೇ ಆದ ಚಾನಲ್ ಅನ್ನು ಕ್ರಿಯೇಟ್ ಮಾಡಬಹುದು ಮತ್ತು ವಿಡಿಯೋಗಳನ್ನು ಅಪ್ಲೋಡ್ ಮಾಡಬಹುದು. ನಿಮಗೂ ಆಸಕ್ತಿ ಇದ್ದರೆ ನೀವು ಯೂಟ್ಯೂಬ್ನಲ್ಲಿ ವಿಡಿಯೋಗಳನ್ನು ಅಪ್ಲೋಡ್ ಮಾಡಬಹುದು ಮತ್ತು ಪ್ರತಿ ತಿಂಗಳು ಲಕ್ಷ ರೂಪಾಯಿಗಳನ್ನು ಗಳಿಸಬಹುದು.
ಕುಟುಂಬದ ಸಾಲದ ಹೊರೆಯನ್ನು ಕಡಿಮೆ ಮಾಡಲು ಅರ್ಜುನ್ ಆರಂಭದಲ್ಲಿ ಕೆಲಸ ಮಾಡಲು ಆರಂಭಿಸಿದರು. ಆದರೆ ಆ ವೃತ್ತಿಯಲ್ಲಿ ಅವರಿಗೆ ತೃಪ್ತಿ ಸಿಗಲಿಲ್ಲ. ವಿಶೇಷವಾಗಿ ಅವರು ವಿಡಿಯೋಗಳನ್ನು ಸ್ವತಃ ಕ್ರಿಯೇಟ್ ಮಾಡುವಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದರು. ನಂತರ ಅದಕ್ಕಾಗಿ ಒಂದು ಯೂಟ್ಯೂಬ್ ಚಾನೆಲ್ ಅನ್ನು ರಚಿಸಿ ಅದರಲ್ಲಿ ನಿರಂತರವಾಗಿ ವಿಡಿಯೋಗಳನ್ನು ಮಾಡಿ ಅಪ್ಲೋಡ್ ಮಾಡಲು ಪ್ರಾರಂಭಿಸಿದರು.