ದೇಶದೆಲ್ಲೆಡೆ ವಜಾ ಪ್ರಕ್ರಿಯೆ ಇನ್ನೂ ಮುಂದುವರಿಯುತ್ತಲೇ ಇದೆ. ಗೂಗಲ್ 12,000 ಉದ್ಯೋಗಿಗಳನ್ನು ವಜಾ ಮಾಡಿದೆ ಎಂದು ಇದೀಗ ತಿಳಿದುಬಂದಿದೆ. ಈ ವಜಾ ಆದವರಲ್ಲಿ ಒಬ್ಬರು ಹರ್ಷ ವಿಜಯ್ ವಾರಿಗ್ಯಾ. ಇವರು ಶನಿವಾರ ಗೂಗಲ್ ಕಾರ್ಯಾಚರಣೆ ಕೇಂದ್ರದಿಂದ ಇಮೇಲ್ ನಾಟಿಫಿಕೇಶನ್ ಸ್ವೀಕರಿಸಿದ್ದಾರೆ. ಅದನದನು ನೋಡಿ ವಿಜಯ್ ಅವರು ಶಾಕ್ ಆಗಿದ್ದಾರೆ.- ಈ ಮೇಲ್ನಲ್ಲಿ ಹೈದರಾಬಾದ್‌ನ ಗೂಗಲ್ ಕೇಂದ್ರದಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಯನ್ನು ವಜಾ ಮಾಡಲಾಗುತ್ತಿದೆ ಎಂದು ಬರೆಯಲಾಗಿತ್ತು.
ಆದರೆ ಹರ್ಷ್ ವಿಜಯ್ ವಾರಿಗ್ಯಾ ಅವರನ್ನು ತಿಂಗಳ ಸ್ಟಾರ್ ಪರ್ಫಾರ್ಮರ್ ಆಗಿ ಆಯ್ಕೆ ಮಾಡಿದ ಗೂಗಲ್ ಇದೀಗ ಅವರನ್ನು ಕೆಲಸದಿಂದ ವಜಾಗೊಳಿಸುವ ಮೂಲಕ ಅಚ್ಚರಿ ಮೂಡಿಸಿದೆ. ಇನ್ನು ಈ ಕುರಿತಾಗಿ "ನಾನು ಇನ್ನೂ ತಿಂಗಳ ಸ್ಟಾರ್ ಪರ್ಫಾರ್ಮರ್ ಆಗಿರುವಾಗ ನನ್ನನ್ನು ಏಕೆ ವಜಾಗೊಳಿಸಲಾಯಿತು ಎಂಬುದು ನನ್ನ ಮೊದಲ ಪ್ರಶ್ನೆ" ಎಂದು ಅವರು ಲಿಂಕ್ಡ್‌ಇನ್‌ನ ಪೋಸ್ಟ್‌ನಲ್ಲಿ ಬರೆದಿದ್ದಾರೆ.
ಇನ್ನು ಇಂತಹ ಪರಿಸ್ಥಿತಿ ಹರ್ಷ ವಿಜಯ್ ವಾರಿಗ್ಯಾಗೆ ಮಾತ್ರ ಅಲ್ಲ. ಅನೇಕ ಉದ್ಯೋಗಿಗಳು ಇದೇ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಗುರ್ಗಾಂವ್‌ನಲ್ಲಿರುವ ಗೂಗಲ್ ಕ್ಲೌಡ್ ಪ್ರೋಗ್ರಾಂ ಮ್ಯಾನೇಜರ್, ಒಬ್ಬರ ತಾಯಿ ಆಗಿರುವ ಉಖ್ತರ್ ವಾಲಿಯಾ ಅವರನ್ನು ಇತ್ತೀಚೆಗೆ ವಜಾ ಮಾಡಲಾಗಿದೆ. ಕೆಲವೇ ದಿನಗಳ ಹಿಂದೆ ಗೂಗಲ್ ನಲ್ಲಿ ಐದು ವರ್ಷ ಪೂರೈಸಿದ್ದೇನೆ ಎಂದು ತಮ್ಮ ಅನುಭವ ಹಂಚಿಕೊಂಡಿದ್ದರು. ಆದರೆ ಇದೀಗ ಅವರನ್ನು ಗೂಗಲ್ ವಜಾ ಮಾಡಿದೆ..