ಡಿಸ್‌ಪ್ಲೇ ವಿನ್ಯಾಸ: ಒಪ್ಪೋ ಫೈಂಡ್ N2 ಫ್ಲಿಪ್ ಸ್ಮಾರ್ಟ್‌ಫೋನ್ 6.8 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಪ್ರೈಮೆರಿ ಡಿಸ್‌ಪ್ಲೇ ಹೊಂದಿದೆ. ಇದು 1,080x2,520 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದಿದೆ. ಇನ್ನು ಈ ಡಿಸ್‌ಪ್ಲೇ HDR10+ ಬೆಂಬಲಿಸಲಿದ್ದು, 240Hz ಟಚ್ ಸ್ಯಾಂಪ್ಲಿಂಗ್ ರೇಟ್ ಅನ್ನು ಒಳಗೊಂಡಿದೆ. ಈ ಡಿಸ್‌ಪ್ಲೇ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ಪ್ರೊಟೆಕ್ಷನ್ ಅನ್ನು ಹೊಂದಿದೆ.
ಪ್ರೊಸೆಸರ್ ಸಾಮರ್ಥ್ಯ: ಒಪ್ಪೋ ಫೈಂಡ್ N2 ಫ್ಲಿಪ್ ಫೋಲ್ಡಬಲ್ ಸ್ಮಾರ್ಟ್‌ಫೋನ್ ಮೀಡಿಯಾಟೆಕ್ ಡೈಮೆನ್ಸಿಟಿ 9000+ SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದು ಆಂಡ್ರಾಯ್ಡ್ 13 ಆಧಾರಿತ ಕಲರ್ ಒಎಸ್ 13.0 ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೇ 8GB RAM ಮತ್ತು 256GB ಮತ್ತು 16GB RAM ಮತ್ತು 512GB ಇಂಟರ್ ಸ್ಟೋರೇಜ್ ಸಾಮರ್ಥ್ಯದ ಎರಡು ವೇರಿಯೆಂಟ್ ಆಯ್ಕೆಗಳಲ್ಲಿ ಲಭ್ಯವಾಗಲಿದೆ.
ಬೆಲೆ ಮತ್ತು ಲಭ್ಯತೆ: ಒಪ್ಪೋ ಫೈಂಡ್ N2 ಫ್ಲಿಪ್ ಸ್ಮಾರ್ಟ್‌ಫೋನ್ 8ಜಿಬಿ ರ್‍ಯಾಮ್ ಮತ್ತು 256ಜಿಬಿ ಸ್ಟೋರೇಜ್ ಆಯ್ಕೆಗೆ ಯುಕೆಯಲ್ಲಿ GBP 849 ಅಂದರೆ ಭಾರತದಲ್ಲಿ ಸುಮಾರು 84,300ರೂಪಾಯಿ ಬೆಲೆಯನ್ನು ಹೊಂದಿದೆ. ಇದನ್ನು ಆಸ್ಟ್ರಲ್ ಬ್ಲ್ಯಾಕ್ ಮತ್ತು ಮೂನ್‌ಲೈಟ್ ಪರ್ಪಲ್ ಶೇಡ್‌ಗಳಲ್ಲಿ ನೀಡಲಾಗುತ್ತದೆ. ಇನ್ನು ಈ ಸ್ಮಾರ್ಟ್‌ಫೋನ್ ಭಾರತದಲ್ಲಿ ಯಾವಾಗ ಬಿಡುಗಡೆಯಾಗಲಿದೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ.