ರೆಸಾರ್ಟ್ ಬುಕ್ ಮಾಡುವ ಅವಶ್ಯಕತೆಯಿಲ್ಲ!; ಏಕೆಂದರೆ ಈ ಕಾರಲ್ಲೇ ಇದೆ ಎಲ್ಲಾ ಸೌಲಭ್ಯ!
mercedes benz; ನಾಲ್ವರು ಈ ಕಾರನ್ನು ಬಳಸಬಹುದು. ಇದರಲ್ಲಿ ಹಾಸಿಗೆ, ಸ್ನಾನಗೃಹ, ಅಡುಗೆಮನೆ ಇದರಲಿದೆ. ಹಾಗಾಗಿ ಕುಟುಂಬಸ್ಥರಿಗೆ, ದೀರ್ಘ ಪ್ರಯಾಣ ಬೆಳಸುವವರಿಗೆ ಈ ಕಾರು ಹೇಳಿಮಾಡಿಸಿದಂತಿದೆ ಎಂದರು.
ಕಾರು ಉತ್ಪಾದಕ ಕಂಪೆನಿಗಳು ವಿಶಿಷ್ಟ ಫೀಚರ್ಗಳನ್ನು ಒಳಗೊಂಡ ಕಾರುಗಳನ್ನು ಉತ್ಪಾದನೆ ಮಾಡುತ್ತಿವೆ. ಅದರಂತೆ ಬೆಂಜ್ ಕಂಪೆನಿ ಗ್ರಾಹಕರಿಗೆ ಅನುಕೂಲವಾಗುವಂತಹ ಮತ್ತು ಪ್ರಯಾಣಕ್ಕೆ ಹೇಳಿ ಮಾಡಿಸಿದಂತಹ ಕಾರೊಂದನ್ನು ಉತ್ಪಾದಿಸಿದೆ.
2/ 16
ಇತ್ತೀಚೆಗೆ ಗ್ರೇಟರ್ ನೋಯ್ಡಾದಲ್ಲಿ ಆರು ದಿನಗಳ ಕಾಲ ಆಟೋ ಎಕ್ಸ್ ಪೋ ಕಾರ್ಯಕ್ರಮ ನಡೆದಿತ್ತು. ಈ ಕಾರ್ಯಕ್ರಮದಲ್ಲಿ ಬಹುತೇಕ ಕಂಪೆನಿಗಳು ಎಲೆಕ್ಟ್ರಾನಿಕ್ ವಾಹನಗಳನ್ನು ಉತ್ಪಾದಿಸಿ ಪರಿಚಯಿಸಿದೆ.
3/ 16
ಕೆಲವು ಕಂಪನಿಗಳು ಗ್ರಾಹಕರಿಗೆಂದೇ ಅತ್ಯಾಧುನಿಕ ಸೌಲಭ್ಯಗಳ ಅಳವಡಿಸಿರುವ ಕಾರುಗಳನ್ನು ಪರಿಚಯಿಸಿದೆ. ಇನ್ನು ಕೆಲವು ಪ್ರತಿಷ್ಠಿತ ಕಂಪೆನಿಗಳು ಮುಂದಿನ ದಿನಗಳನ್ನು ಗುರಿಯಾಗಿಸಿಕೊಂಡು ಎಲೆಕ್ಟ್ರಿಕ್ ವಾಹನ ಉತ್ಪಾದನೆಯತ್ತ ತಮ್ಮ ಚಿತ್ತ ಹರಿಸಿದೆ.
4/ 16
ಮರ್ಸಿಡಿಸ್ ಬೆಂಜ್ ಕಂಪನಿ ಕುಟುಂಬಸ್ಥರನ್ನು ಗುರಿಯಾಗಿಸಿಕೊಂಡು ಎಸ್ಯುವಿ ಹೆಸರಿನ ಮಾರ್ಕೊ ಪೋಲೊ ಎಂಬ ದೊಡ್ಡ ಗಾತ್ರದ ಕಾರನ್ನು ಉತ್ಪಾದಿಸಿದೆ.
5/ 16
ಮರ್ಸಿಡಿಸ್ ಬೆಂಜ್ ಮಾರ್ಕೊ ಪೋಲೊ ಕ್ಯಾಂಪರ್ನ ಮಾರಾಟ ಕಾರ್ಯನಿರ್ವಾಹಕ ಎಸ್. ರಿಕೇಶ್ ಮಾತನಾಡಿ, ಮಾರ್ಕೊ ಪೊಲೊ ಕಾರು ಕುಟುಂಬಸ್ಥರು ಸುದೀರ್ಘ ಪ್ರವಾಣ ಬೆಳಸಲು ನೆರವಾಗುವಂತೆ ಸಿದ್ಧಪಡಿಸಲಾಗಿದೆ ಎಂದು ಹೇಳಿದ್ದಾರೆ.
6/ 16
ನಾಲ್ವರು ಈ ಕಾರನ್ನು ಬಳಸಬಹುದು. ಇದರಲ್ಲಿ ಹಾಸಿಗೆ, ಸ್ನಾನಗೃಹ, ಅಡುಗೆಮನೆ ಇರಲಿದೆ. ಹಾಗಾಗಿ ಕುಟುಂಬಸ್ಥರಿಗೆ, ದೀರ್ಘ ಪ್ರಯಾಣ ಬೆಳಸುವವರಿಗೆ ಈ ಕಾರು ಹೇಳಿಮಾಡಿಸಿದಂತಿದೆ.
7/ 16
ಈ ಕಾರಿನಲ್ಲಿ ಕುರ್ಚಿಗಳು, ಡೇರೆಗಳನ್ನು ಇರಿಸಿಕೊಳ್ಳಬಹುದು. ಮಾತ್ರವಲ್ಲದೆ ಇದರ ಒಳಗೆ ಮಲಗುವಂತೆ ವಿನ್ಯಾಸ ಮಾಡಲಾಗಿದೆ.
8/ 16
ಮಾರ್ಕೊ ಪೋಲೊ ಕ್ಯಾಂಪರ್ ಕಾರು ಡೀಸೆಲ್ ರೂಪಾಂತರವಾಗಿದೆ. 6.8 ಲೀಟರ್ ಡೀಸೆಲ್ ಟ್ಯಾಂಕ್ ಹೊಂದಿದೆ. ಮಾತ್ರವಲ್ಲದೆ ಕಾರಿನ ಒಳಭಾಗದಲ್ಲಿ ನೀರು ಸಂಗ್ರಹಕ್ಕೆ ಬೇಕಾಗಿ ಟ್ಯಾಂಕ್ ನೀಡಲಾಗಿದೆ.
9/ 16
ಇನ್ನು ಈ ಕಾರು 163 ಎಚ್ಪಿ ಹಾಗೂ 380 ನ್ಯೂಟನ್ ಮೀಟರ್ ಟಾರ್ಕ್ ಉತ್ಪಾದಿಸುತ್ತದೆ. ಗ್ರಾಹಕರಿಗೆ ಈ ಕಾರು 1.46 ಕೋಟಿಗೆ ಸಿಗಲಿದೆ.