ಡಿಸ್ಪ್ಲೇ ಫೀಚರ್ಸ್: ರಿಯಲ್‌ಮಿ ಜಿಟಿ3 ಫೋನ್ 6.74 ಇಂಚಿನ ಡಿಸ್‌ಪ್ಲೇ ಹೊಂದಿದ್ದು, 2772 x 1240 ನ ಪಿಕ್ಸೆಲ್ ರೆಸಲ್ಯೂಶನ್ ಹೊಂದಿದೆ. ಇದರಲ್ಲಿನ 144Hz ರಿಫ್ರೆಶ್ ರೇಟ್ ಆಯ್ಕೆ ಮಾತ್ರ ರೋಮಾಂಚನಗೊಳಿಸುವಂತಹುದು, ಯಾಕೆಂದರೆ ಆಟೋಮ್ಯಾಟಿಕ್ ಆಗಿ ಸಂದರ್ಭಕ್ಕೆ ತಕ್ಕಂತೆ ರಿಫ್ರೆಶ್ ರೇಟ್ ಬದಲಾಗಲಿದೆ. ಇದರೊಂದಿಗೆ 1,400nits ನ ಬ್ರೈಟ್‌ನೆಸ್ ಆಯ್ಕೆಯನ್ನು ಸಹ ಈ ಡಿಸ್‌ಪ್ಲೇ ಹೊಂದಿದೆ.
ಕ್ಯಾಮೆರಾ ಸೆಟಪ್: ಈ ಹೊಸ ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದ್ದು, ಇದರಲ್ಲಿ 50 ಮೆಗಾಪಿಕ್ಸೆಲ್ ಸೋನಿ IMX890 ಸೆನ್ಸಾರ್, 8 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಆ್ಯಂಗಲ್ ಲೆನ್ಸ್ ಮತ್ತು 2 ಮೆಗಾಪಿಕ್ಸೆಲ್ ಸೆನ್ಸಾರ್ ಆಯ್ಕೆಯನ್ನು ಹೊಂದಿದೆ. ಜೊತೆಗೆ ಸೆಲ್ಫಿಗಾಗಿ ಮತ್ತು ವಿಡಿಯೋ ಕಾಲ್ಗಾಗಿ 16 ಮೆಗಾಪಿಕ್ಸೆಲ್ ಸಾಮರ್ಥ್ಯದ ಕ್ಯಾಮೆರಾ ಆಯ್ಕೆ ಇದ್ದು, ಸೆಲ್ಫಿ ಪ್ರಿಯರಿಗೆ ಈ ಫೋನ್ ಉತ್ತಮ ಆಯ್ಕೆಯಾಗಿರಲಿದೆ.
ಪ್ರೊಸೆಸರ್ ಸಾಮರ್ಥ್ಯ: ರಿಯಲ್‌ಮಿ ಜಿಟಿ3 ಸ್ಮಾರ್ಟ್‌ಫೋನ್ ಕ್ವಾಲ್ಕಮ್ ಸ್ನಾಪ್‌ಡ್ರಾಗನ್ 8+ ಜನ್ 1 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, ಇದು ಫೋನ್‌ನ ಎಂತಹುದೇ ಒತ್ತಡವನ್ನು ತಡೆದುಕೊಂಡು ಉತ್ತಮ ಕಾರ್ಯಕ್ಷಮತೆ ನೀಡಲಿದೆ. ಇದರೊಂದಿಗೆ 8ಜಿಬಿ ರ್‍ಯಾಮ್ ಹಾಗೂ 128ಜಿಬಿ ಮತ್ತು 16ಜಿಬಿ ರ್‍ಯಾಮ್ ಹಾಗೂ 1ಟಿಬಿ ಇಂಟರ್ನಲ್ ಸ್ಟೋರೇಜ್ ಸೇರಿದಂತೆ ಐದು ವೇರಿಯಂಟ್‌ನಲ್ಲಿ ಇದು ಬಿಡುಗಡೆಯಾಗಿದೆ.
ಬೆಲೆ ಮತ್ತು ಲಭ್ಯತೆ: ರಿಯಲ್‌ಮಿ ಜಿಟಿ 3 ಸ್ಮಾರ್ಟ್ಫೋನ್ನ 8ಜಿಬಿ ರ್‍ಯಾಮ್ ಮತ್ತು 128ಜಿಬಿ ಮಾದರಿಗೆ $649 ಅಂದರೆ ಭಾರತದಲ್ಲಿ 53,700 ರೂ. ಗಳು ಆಗಿರುತ್ತದೆ, ಇದು ಈ ಸ್ಮಾರ್ಟ್ಫೋನ್ನ ಆರಂಭಿಕ ಬೆಲೆಯಾಗಿರಲಿದೆ. ಇದರೊಂದಿಗೆ ಈ ಫೋನ್ ಪಲ್ಸ್ ವೈಟ್ ಮತ್ತು ಬೂಸ್ಟರ್ ಬ್ಲ್ಯಾಕ್ ಬಣ್ಣದಲ್ಲಿ ಕಾಣಿಸಿಕೊಂಡಿದೆ. ಜಾಗತಿಕವಾಗಿ ಲಾಂಚ್ ಆದರೂ ಭಾರತದಲ್ಲಿ ಈ ಸ್ಮಾರ್ಟ್‌ಫೋನ್ ಎಂದಿನಿಂದ ಬಳಕೆದಾರರಿಗೆ ಲಭ್ಯ ಎಂಬುದರ ಮಾಹಿತಿಯನ್ನು ಕಂಪೆನಿ ಇನ್ನೂ ಬಹಿರಂಗಪಡಿಸಿಲ್ಲ. ಆದರೂ ಶೀಘ್ರದಲ್ಲೇ ಭಾರತದಲ್ಲಿ ಖರೀದಿಗೆ ವ್ಯವಸ್ಥೆ ಮಾಡಲಾಗುತ್ತದೆ ಎನ್ನುವ ಮಾತುಗಳು ಸಹ ಕೇಳಿಬರುತ್ತಿವೆ.