ಮೊಬೈಲ್ ತಯಾರಕ ಕಂಪೆನಿಯಾಗಿರುವಂತಹ ಒನ್ಪ್ಲಸ್ ತನ್ನ ಪ್ರಮುಖ ಸ್ಮಾರ್ಟ್ಫೋನ್ ಒನ್ಪ್ಲಸ್ 11 5G ಅನ್ನು ಭಾರತದಲ್ಲಿ ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದೆ. ಕಂಪನಿಯು ತನ್ನ ಹೊಸ ಪ್ರೀಮಿಯಂ ಹ್ಯಾಂಡ್ಸೆಟ್ ಅನ್ನು ಫೆಬ್ರವರಿ 7 ರಂದು ಬಿಡುಗಡೆ ಮಾಡಲಿದೆ. ಮಾಹಿತಿಯ ಪ್ರಕಾರ, ಒನ್ಪ್ಲಸ್ ದೇಶದಲ್ಲಿ ಒನ್ಪ್ಲಸ್ 11 ಅನ್ನು ಬಿಡುಗಡೆ ಮಾಡಿದ ನಂತರ ಶೀಘ್ರದಲ್ಲೇ ಒನ್ಪ್ಲಸ್ 11ಆರ್ 5ಜಿ ಯನ್ನು ಬಿಡುಗಡೆ ಮಾಡುತ್ತದೆ. ಮುಂಬರುವ ಈ ಫೋನ್ನ ವಿಶೇಷಣಗಳು ಈಗಾಗಲೇ ಸೋರಿಕೆಯಾಗಿವೆ. ಇದೇ ವೇಳೆ ಫೋನ್ನ ಬೆಲೆ ಕೂಡ ಲೀಕ್ ಆಗಿದೆ.
ಟಿಪ್ಸ್ಟರ್ ಮುಕುಲ್ ಶರ್ಮಾ ವರದಿಯ ಪ್ರಕಾರ, ಒನ್ಪ್ಲಸ್ 11ಆರ್ ಅನ್ನು ಎರಡು ರ್ಯಾಮ್ ಮಾದರಿಗಳಲ್ಲಿ ಪರಿಚಯಿಸುವ ಸಾಧ್ಯತೆಯಿದೆ. ಇದರ ಮೂಲ ಮಾದರಿಯು 8ಜಿಬಿ ರ್ಯಾಮ್ ಜೊತೆಗೆ 128ಜಿಬಿ ಸ್ಟೋರೇಜ್ ಅನ್ನು ಹೊಂದಿರಬಹುದು. ಇದರ ಬೆಲೆ 35,000 ರಿಂದ 40,000 ರೂಪಾಯಿ ಎಂದು ಅಂದಾಜಿಸಲಾಗಿದೆ. ಇದರ ಎರಡನೇ ಮಾದರಿಯಲ್ಲಿ, 16ಜಿಬಿ ರ್ಯಾಮ್ ಮತ್ತು 512ಜಿಬಿ ಸ್ಟೋರೇಜ್ ಅನ್ನು ಹೊಂದಿರಬಹುದು ಈ ಮಾದರಿಯ ಸ್ಮಾರ್ಟ್ಫೋನ್ನ ಬೆಲೆ 40,000 ರಿಂದ 45,000 ರೂಪಾಯಿ ಇರಬಹುದು ಎಂದು ಅಂದಾಜಿಸಲಾಗಿದೆ.
ಒನ್ಪ್ಲಸ್ 11ಆರ್ ಅನ್ನು ಕ್ವಾಲ್ಕಮ್ ಸ್ನಾಪ್ಡ್ರಾಗನ್+ ಜೆನ್ 1 ಪ್ರೊಸೆಸರ್ನಿಂದ ರನ್ ಆಗುತ್ತದೆ. ಇದು 3GHz ವೇಗವನ್ನು ಹೊಂದಿದೆ. ಇದರ ಮಾದರಿ ಸಂಖ್ಯೆ- CPH2487 ಆಗಿರಬಹುದು. ಹ್ಯಾಂಡ್ಸೆಟ್ 2,772×1,240 ಪಿಕ್ಸೆಲ್ ರೆಸಲ್ಯೂಶನ್ನೊಂದಿಗೆ 6.7-ಇಂಚಿನ ಅಮೋಲ್ಡ್ ಡಿಸ್ಪ್ಲೇಯೊಂದಿಗೆ ಬರುತ್ತದೆ ಎಂದು ವರದಿಗಳು ತಿಳಿಸಿವೆ.. ಇದರ ರಿಫ್ರೆಶ್ ದರ 120Hz ಆಗಿರಬಹುದು ಎಂದು ಅಂದಾಜಿಸಲಾಗಿದೆ.
ಒನ್ಪ್ಲಸ್ 11ಆರ್ ಆಂಡ್ರಾಯ್ಡ್13 ಆಧಾರಿತ OxygenOS 13.1 ನಲ್ಲಿ ಕಾರ್ಯನಿರ್ವಹಿಸುತ್ತದೆ. ಇನ್ನು ಇದರ ಕ್ಯಾಮೆರಾ ಫೀಚರ್ಸ್ ಬಗ್ಗೆ ಹೇಳುವುದಾದರೆ, ಈ ಸ್ಮಾರ್ಟ್ಫೋನ್ ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾ ಸೆಟಪ್ನೊಂದಿಗೆ ಬರಲಿದೆ. ಇದು 12ಎಮ್ಪಿ ಸೆಕೆಂಡರಿ ಕ್ಯಾಮೆರಾ ಮತ್ತು 2ಎಮ್ಪಿ ಮೂರನೇ ಕ್ಯಾಮೆರಾ ಮತ್ತು 50ಎಮ್ಪಿ ಮುಖ್ಯ ಕ್ಯಾಮೆರಾ ಹೊಂದಬಹುದು. ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ ಈ ಸ್ಮಾರ್ಟ್ಫೋನ್ 16-ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ.