ಇತ್ತೀಚೆಗೆ ಹಲವಾರು ಸ್ಮಾರ್ಟ್ಫೋನ್ಗಳು ಬಿಡುಗಡೆಯಾಗಿದೆ. ಆದರೆ ಈ ವರ್ಷ 5ಜಿ ಸೇವೆ ಅರಂಭವಾಗಿದ್ದರಿಂದ ಮೊಬೈಲ್ ಕಂಪನಿಗಳು ಈ ಬಾರಿ ಹೆಚ್ಚಾಗಿ 5ಜಿ ಸ್ಮಾರ್ಟ್ಫೋನ್ಗಳನ್ನೇ ಬಿಡುಗಡೆ ಮಾಡಿದೆ. ಆದರೆ ಎಲ್ಲವೂ ಪ್ರೀಮಿಯಂ ಸ್ಮಾರ್ಟ್ಫೋನ್ಗಳೇ ಹೆಚ್ಚು ಬಿಡುಗಡೆಯಾಗುತ್ತಿತ್ತು. ಇದೀಗ ಮೊಟೊರೊಲಾ ಕಂಪನಿ ಕಡಿಮೆ ಬಜೆಟ್ನ 5ಜಿ ಮೊಬೈಲ್ ಅನ್ನು ಬಿಡುಗಡೆ ಮಾಡಿದೆ.
ಫೀಚರ್ಸ್: ಬಜೆಟ್ ಶ್ರೇಣಿಯ ಮೊಟೊ ಜಿ53 ಸ್ಮಾರ್ಟ್ಫೋನ್ 6.5-ಇಂಚಿನ ಎಲ್ಸಿಡಿ ಡಿಸ್ಪ್ಲೇ ಜೊತೆಗೆ 720p ರೆಸಲ್ಯೂಶನ್, 120Hz ರಿಫ್ರೆಶ್ ರೇಟ್ನೊಂದಿಗೆ ಲಭ್ಯವಿರುತ್ತದೆ. ಇದು 240Hz ಟಚ್ ಸ್ಯಾಂಪ್ಲಿಂಗ್ ರೇಟ್ನೊಂದಿಗೆ ಮಾರುಕಟ್ಟೆಗೆ ಬರಲಿದೆ. ಇನ್ನು ಈ ಸ್ಮಾರ್ಟ್ಫೋನ್ ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ ಚಿಪ್ಸೆಟ್ನಲ್ಲಿ ಕಾರ್ಯನಿರ್ವಹಿಸುತ್ತದೆ. ಆಂಡ್ರಾಯ್ಡ್ 13 ಆಧಾರಿತ MyUI 5.0 ನೊಂದಿಗೆ ಈ ಮೊಟೊ ಸ್ಮಾರ್ಟ್ಫೋನ್ ಕಾರ್ಯನಿರ್ವಹಿಸುತ್ತದೆ.
ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್: ಈ ಮೊಟೊ ಸ್ಮಾರ್ಟ್ಫೋನ್ನ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ನೀಡಲಾಗಿದೆ. ಇದು 50MP ಮುಖ್ಯ ಕ್ಯಾಮೆರಾ ಮತ್ತು 2MP ವೈಡ್ ಕ್ಯಾಮೆರಾ ಹೊಂದಿದೆ. ಹಿಂದಿನ ಮಾದರಿ ಅಂದರೆ ಮೊಟೊ ಜಿ52 ಟ್ರಿಪಲ್ ಹಿಂಬದಿಯ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಅದರೆ ಮೊಟೊ ಜಿ53 ಮುಂಭಾಗದಲ್ಲಿ 8MP ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.
ಸೈಡ್-ಮೌಂಟೆಡ್ ಫಿಂಗರ್ಪ್ರಿಂಟ್ ಸ್ಕ್ಯಾನರ್: ಈ ಹ್ಯಾಂಡ್ಸೆಟ್ 5,000mAh ಬ್ಯಾಟರಿಯನ್ನು ಹೊಂದಿದ್ದು ಅದು 18W ವೇಗದ ಚಾರ್ಜಿಂಗ್ ಅನ್ನು ಬೆಂಬಲವನ್ನು ಒಳಗೊಂಡಿದೆ. ಇದು ಮೊಬೈಲ್ನ ಸೇಫ್ಟಿಗಾಗಿ ಸೈಡ್-ಮೌಂಟೆಡ್ ಫಿಂಗರ್ಪ್ರಿಂಟ್ ಸ್ಕ್ಯಾನರ್ ಅನ್ನು ಹೊಂದಿದೆ. ಇನ್ನು ಇದರಲ್ಲಿ ಆಡಿಯೋಗಾಗಿ 3.5mm ಹೆಡ್ಫೋನ್ ಜ್ಯಾಕ್, ಚಾರ್ಜಿಂಗ್ ಮತ್ತು ಡೇಟಾ ವರ್ಗಾವಣೆ ಉದ್ದೇಶಗಳಿಗಾಗಿ ಯುಎಸ್ಬಿ ಟೈಪ್-ಸಿ ಪೋರ್ಟ್ ಅನ್ನು ಹೊಂದಿದೆ.
ಮೊಟೊ ಜಿ53 ಸ್ಮಾರ್ಟ್ಫೋನ್ ಬೆಲೆ: ಮೊಟೊ ಜಿ53 ಸ್ಮಾರ್ಟ್ಫೋನ್ ಅನ್ನು ಎರಡು ವಿಧಗಳಲ್ಲಿ ಬಿಡುಗಡೆ ಮಾಡಲಾಗಿದೆ. ಮೂಲ ವೇರಿಯಂಟ್ 4 GB RAM+ 128GB ಯದ್ದಾಗಿದೆ ಇದನ್ನು ಚೀನೀ ಕರೆನ್ಸಿಯಲ್ಲಿ CNY 899 ಅಂದರೆ ಭಾರತದಲ್ಲಿ ಸುಮಾರು ರೂ. 10,600 ಆಗಿರುತ್ತದೆ. ಮತ್ತೊಂದು ರೂಪಾಂತರವು 8GB RAM + 128 GB CNY 1099 ಅಂದರೆ ಭಾರತದಲ್ಲಿ ಸುಮಾರು ರೂ. 13,000 ಆಗಿದೆ.