ಇನ್ನು ಈ ಸ್ಮಾರ್ಟ್ಟಿವಿಯ ಫೀಚರ್ಸ್ ಬಗ್ಗೆ ಹೇಳುವುದಾದರೆ ಇದು 3 ಜಿಬಿ ರ್ಯಾಮ್, 32 ಜಿಬಿ ಮೆಮೊರಿ, ಬ್ಲೂಟೂತ್, ಗೂಗಲ್ ಡಿಯೋ, ಗೇಮ್ ಮಾಸ್ಟರ್ನಂತಹ ವೈಶಿಷ್ಟ್ಯಗಳು ಸಹ ಇವೆ. ಟಿಸಿಎಲ್ ಸ್ಮಾರ್ಟ್ ಟಿವಿ UI, 2 ಯುಎಸ್ಬಿ ಪೋರ್ಟ್ಗಳು, LAN ಪೋರ್ಟ್, 4 ಹೆಚ್ಡಿಎಮ್ಐ ಪೋರ್ಟ್ಗಳು, ಹೆಡ್ಫೋನ್ ಜ್ಯಾಕ್, ಡಿಜಿಟಲ್ ಆಡಿಯೋ ಔಟ್ಪುಟ್ ಕೂಡ ವಿಶೇಷ ವೈಶಿಷ್ಟ್ಯಗಳನ್ನು ಹೊಂದಿದೆ.
ಇದಲ್ಲದೇ ಈ ಸ್ಮಾರ್ಟ್ ಟಿವಿಯಲ್ಲಿ ಇಎಂಐ ಆಯ್ಕೆಗಳೂ ಇವೆ. ತಿಂಗಳಿಗೆ 3394 ರೂಪಾಯಿಯಿಂದ ಇಎಮ್ಐ ಪ್ರಾರಂಭವಾಗುತ್ತದೆ. ಇದು 24 ತಿಂಗಳವರೆಗೆ ವ್ಯಾಲಿಡಿಟಿಯನ್ನು ಹೊಂದಿರುತ್ತದೆ. 18 ತಿಂಗಳ ಅವಧಿಗೆ ಆದರೆ ತಿಂಗಳಿಗೆ ರೂ. 4367 ಪಾವತಿಸಬೇಕು. ತಿಂಗಳಿಗೆ 12 ತಿಂಗಳ ಇಎಮ್ಐ ರೂ. 6285 ಪಾವತಿಸಬೇಕಾಗುತ್ತದೆ.ಇನ್ನು ಈ ಇಎಮ್ಐ ಬೆಲೆ ನಿಮ್ಮ ಬ್ಯಾಂಕ್ ಮತ್ತು ಅವಧಿಗೆ ಅನುಗುಣವಾಗಿ ನಿರ್ಧಾರವಾಗುತ್ತದೆ.