ಉದಾಹರಣೆಗೆ, ಮೂರು ತಿಂಗಳ ಯೋಜನೆಯನ್ನು ರೀಚಾರ್ಜ್ ಮಾಡಿದರೆ ಹೆಚ್ಚುವರಿ 7 ದಿನಗಳ ಚಂದಾದಾರಿಕೆ ನೀಡುತ್ತಿದೆ. ಹಾಗೆಯೇ 6 ತಿಂಗಳ ರಿಚಾರ್ಜ್ ಮೇಲೆ 15 ದಿನಗಳ ಚಂದಾದಾರಿಕೆಯನ್ನು ಉಚಿತವಾಗಿ ಒದಗಿಸುತ್ತಿದೆ. ಇನ್ನು 11 ತಿಂಗಳ ಚಂದಾದಾರಿಕೆಯ ರಿಚಾರ್ಜ್ ಮಾಡಿಕೊಂಡರೆ ಗ್ರಾಹಕರಿಗೆ 30 ದಿನಗಳ ಹೆಚ್ಚುವರಿ ಸೇವೆಯನ್ನು ನೀಡಲಾಗುತ್ತದೆ. 22 ತಿಂಗಳ ಯೋಜನೆಯನ್ನು ತೆಗೆದುಕೊಂಡರೆ, 60 ದಿನಗಳ ಚಂದಾದಾರಿಕೆಯನ್ನು ಉಚಿತವಾಗಿ ನೀಡಲಾಗುತ್ತಿದೆ. ಇಷ್ಟೇ ಅಲ್ಲದೆ 33 ತಿಂಗಳ ಚಂದಾದಾರಿಕೆಯಲ್ಲಿ ಹೆಚ್ಚುವರಿ 90 ದಿನಗಳು ಮತ್ತು 44 ತಿಂಗಳ ಚಂದಾದಾರಿಕೆಯಲ್ಲಿ 120 ದಿನಗಳನ್ನು ಉಚಿತವಾಗಿ ಪಡೆಯಬಹುದು.