ಐಪಿಎಲ್ ಅಬ್ಬರ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಬೇಸಿಗೆಯುದ್ದಕ್ಕೂ ಐಪಿಎಲ್ನದ್ದೇ ಹವಾ. ಇತ್ತೀಚೆಗೆ ಹೆಚ್ಚಿನ ಜನರು ಸ್ಮಾರ್ಟ್ಫೋನ್ಗಳಲ್ಲೇ ಐಪಿಎಲ್ ಮ್ಯಾಚ್ಗಳನ್ನು ನೋಡುತ್ತಿದ್ದಾರೆ. ಆದರೆ ಕೆಲವೊಂದು ಬಾರಿ ನೋಡ ನೋಡುತ್ತಿದ್ದಂತೆಯೇ ಡೇಟಾ ಪ್ಯಾಕ್ ಖಾಲಿಯಾಗುತ್ತದೆ. ಇದಕ್ಕಾಗಿ ಜಿಯೋ ಇದೀಗ ಕ್ರಿಕೆಟ್ ಪ್ರಿಯರಿಗೆ ಹೊಸ ರೀಚಾರ್ಜ್ ಪ್ಲ್ಯಾನ್ಗಳನ್ನು ಬಿಡುಗಡೆ ಮಾಡಿದೆ.
ಜಿಯೋ ರೂ 999 ಯೋಜನೆ: ಜಿಯೋ ರೂ 999 ರೀಚಾರ್ಜ್ ಪ್ಲ್ಯಾನ್ 84 ದಿನಗಳ ಮಾನ್ಯತೆಯನ್ನು ಹೊಂದಿದೆ. ಈ ಯೋಜನೆಯಲ್ಲಿ ಪ್ರತಿದಿನ 3GB ಡೇಟಾವನ್ನು ಬಳಸಬಹುದು. ದಿನಕ್ಕೆ 3GB ದರದಲ್ಲಿ 84 ದಿನಕ್ಕೆ 252GB ಡೇಟಾ ಲಭ್ಯವಿದೆ. ಹೆಚ್ಚುವರಿಯಾಗಿ, ಈ ಯೋಜನೆಯಲ್ಲಿ 40GB ಡೇಟಾ ಲಭ್ಯವಿದೆ. ಒಟ್ಟು 292GB ಡೇಟಾವನ್ನು 84 ದಿನಗಳಲ್ಲಿ ಬಳಸಬಹುದು. ಅನಿಯಮಿತ ಕರೆಗಳು ಉಚಿತ. ಪ್ರತಿದಿನ 100 ಎಸ್ಎಮ್ಎಸ್ ಸೌಲಭ್ಯ ಪಡೆಯಿರಿ. ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಸೆಕ್ಯುರಿಟಿ, ಜಿಯೋ ಕ್ಲೌಡ್ ಅಪ್ಲಿಕೇಶನ್‌ಗಳ ಚಂದಾದಾರಿಕೆ ಉಚಿತವಾಗಿದೆ. 5G ನೆಟ್‌ವರ್ಕ್ ಹೊಂದಿರುವವರಿಗೆ ಅನಿಯಮಿತ 5G ಡೇಟಾ ಲಭ್ಯವಿದೆ.
ಜಿಯೋ ರೂ 399 ಯೋಜನೆ: ಜಿಯೋ ರೂ 399 ರೀಚಾರ್ಜ್ ಪ್ಲ್ಯಾನ್ 28 ದಿನಗಳ ಮಾನ್ಯತೆಯನ್ನು ಪಡೆಯುತ್ತದೆ. ಪ್ರತಿದಿನ 3GB ಡೇಟಾವನ್ನು ಬಳಸಬಹುದು. ದಿನಕ್ಕೆ 3GB ದರದಲ್ಲಿ 84GB ಡೇಟಾ ಲಭ್ಯವಿದೆ. ಹೆಚ್ಚುವರಿಯಾಗಿ, 6GB ಡೇಟಾ ಲಭ್ಯವಿದೆ. ಒಟ್ಟು 90GB ಡೇಟಾವನ್ನು 28 ದಿನಗಳಲ್ಲಿ ಬಳಸಬಹುದು. ಅನಿಯಮಿತ ಕರೆಗಳು ಉಚಿತ. ಪ್ರತಿದಿನ 100 sms ಪಡೆಯಿರಿ. ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಸೆಕ್ಯುರಿಟಿ, ಜಿಯೋ ಕ್ಲೌಡ್ ಅಪ್ಲಿಕೇಶನ್‌ಗಳ ಚಂದಾದಾರಿಕೆ ಉಚಿತವಾಗಿದೆ. ಜೊತೆಗೆ 5G ನೆಟ್‌ವರ್ಕ್ ಲಭ್ಯತೆ ಹೊಂದಿರುವವರಿಗೆ ಅನಿಯಮಿತ 5G ಡೇಟಾ ಲಭ್ಯವಿದೆ.
ಜಿಯೋ ರೂ 219 ಯೋಜನೆ: ಜಿಯೋ ರೂ 219 ರೀಚಾರ್ಜ್ ಪ್ಲ್ಯಾನ್ ಒಟ್ಟು 14 ದಿನಗಳ ಮಾನ್ಯತೆಯನ್ನು ಹೊಂದಿದೆ. ಈ ಯೋಜನೆಯಲ್ಲಿ ಪ್ರತಿದಿನ 3GB ಡೇಟಾವನ್ನು ಬಳಸಬಹುದು. ದಿನಕ್ಕೆ 3GB ದರದಲ್ಲಿ 42GB ಡೇಟಾ ಲಭ್ಯವಿದೆ. ಹೆಚ್ಚುವರಿಯಾಗಿ ಈ ಪ್ಲ್ಯಾನ್ನಲ್ಲಿ 2GB ಡೇಟಾ ಲಭ್ಯವಿದೆ. ಒಟ್ಟು 44GB ಡೇಟಾವನ್ನು 28 ದಿನಗಳಲ್ಲಿ ಬಳಸಬಹುದು. ಜೊತೆಗೆ ಅನಿಯಮಿತ ಕರೆಗಳು ಉಚಿತ. ಪ್ರತಿದಿನ 100 ಎಸ್ಎಮ್ಎಸ್ ಮಾಡುವ ಸೌಲಭ್ಯ ಲಭ್ಯವಿದೆ. ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಸೆಕ್ಯುರಿಟಿ, ಜಿಯೋ ಕ್ಲೌಡ್ ಅಪ್ಲಿಕೇಶನ್‌ಗಳ ಚಂದಾದಾರಿಕೆ ಉಚಿತವಾಗಿದೆ. 5G ನೆಟ್‌ವರ್ಕ್ ಲಭ್ಯತೆ ಹೊಂದಿರುವವರಿಗೆ ಅನಿಯಮಿತ 5G ಡೇಟಾ ಲಭ್ಯವಿದೆ.