ಈ ಬಲ್ಬ್ನ ಅಡಿಯಲ್ಲಿ ಮೀನಿನ ಕಣ್ಣಿನಂತೆ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಈ ಕ್ಯಾಮೆರಾ 360 ಡಿಗ್ರಿಯಲ್ಲಿ ತಿರುಗಹುದು. ಇದು ಸಿಸಿಟಿವಿಯಂತೆಯೇ ಕೆಲಸ ಮಾಡುತ್ತದೆ. ಆದರೆ ಕಳ್ಳರಿಗೆ ಇದು ಬಲ್ಬ್ನಂತೆ ಕಾಣುತ್ತದೆ. ಆದರೆ ಇದು ಕ್ಯಾಮೆರಾವನ್ನು ಹೊಂದಿದೆ ಎಂದು ಯಾರಿಗೂ ಗೊತ್ತಾಗಲ್ಲ. ಇನ್ನು ಇದರಲ್ಲಿರುವ ಕ್ಯಾಮೆರಾವನ್ನು ವೈಫೈ ಮೂಲಕ ಕನೆಕ್ಟ್ ಮಾಡಬಹುದು. ಜೊತೆಗೆ ಇದರಲ್ಲಿರುವ ಲೈಟ್ ಅನ್ನು ಆನ್, ಆಫ್ ಸಹ ಮಾಡ್ಬಹುದು.
ಈ ಹೋಮ್ ಸೆಕ್ಯುರಿಟಿ ಕ್ಯಾಮೆರಾ 1 ವರ್ಷದ ವ್ಯಾರಂಟಿಯನ್ನು ಸಹ ಹೊಂದಿದೆ. ಈ ಕ್ಯಾಮೆರಾ ಮೋಷನ್ ಸೆನ್ಸಾರ್ ಸ್ಮಾರ್ಟ್ ತಂತ್ರಜ್ಞಾನವನ್ನು ಒಳಗೊಂಡಿದೆ. ಆದ್ದರಿಂದ ಇದು ಮಾನವ ಚಲನವಲನಗಳನ್ನು ಪತ್ತೆ ಮಾಡುತ್ತದೆ. ಅದರಲ್ಲಿ ಏನಾದರೂ ವ್ಯತ್ಯಾಸ ಕಂಡು ಬಂದರೆ ತಕ್ಷಣ ನಿಮ್ಮ ಮೊಬೈಲ್ ಗೆ ಎಚ್ಚರಿಕೆಯ ಮೆಸೇಜ್ ಅನ್ನು ಕಳುಹಿಸುತ್ತದೆ. ಅದರೊಂದಿಗೆ ಮನೆ ಅಥವಾ ಕಚೇರಿಯಲ್ಲಾಗುವಂತಹ ಯಾವುದೇ ದರೋಡೆಯನ್ನು ಗಮನಿಸಬಹುದು.
ಈ ಬಲ್ಬ್ ಅನ್ನು ನಿಮ್ಮ ಮನೆಯ ರೂಮ್ನ ಮೇಲೆ ಅಳವಡಿಸಿದ್ರೆ, ಯಾವುದೇ ತೊಂದರೆಯಿಲ್ಲದೆ ವಿಡಿಯೋ ರೆಕಾರ್ಡ್ ಮಾಡಬಹುದು. ಜೊತೆಗೆ ನೀವು ಜೂಮ್ ಇನ್ ಮತ್ತು ಜೂಮ್ ಔಟ್ ಕೂಡ ಮಾಡಬಹುದು. ಇದು 7 ರೀತಿಯ ವೀಕ್ಷಣೆ ವಿಧಾನಗಳನ್ನು ಹೊಂದಿದೆ. ನಿಮಗೆ ಬೇಕಾದ ವೀಕ್ಷಣೆಯನ್ನು ನೀವು ಇದರಲ್ಲಿ ಆಯ್ಕೆ ಮಾಡಬಹುದು. ಈ 1 ಬಲ್ಬ್ ಕ್ಯಾಮೆರಾ 4 ಸಿಸಿಟಿವಿ ಕ್ಯಾಮೆರಾಗಳಿಗಿಂತ ಉತ್ತಮವಾಗಿದೆ ಎಂದು ಹೇಳಲಾಗುತ್ತದೆ.