ಸ್ಮಾರ್ಟ್‌ಫೋನ್ ಖರೀದಿಸ್ಬೇಕಾದ್ರೆ ಹೆಚ್ಚಿನ ಜನರು ಬೆಲೆ ನೋಡುವ ಮೊದಲು ಅದರ ಫೀಚರ್ಸ್ಗಳನ್ನು ನೋಡಿಕೊಳ್ತಾರೆ. ಅದೇ ರೀತಿ ಕೆಲವರು ಮೊಬೈಲ್ಗಳ ಡಿಸೈನ್ಗೆ ಆಕರ್ಷಿತರಾದ್ರೆ ಇನ್ನೂ ಕೆಲವರು ಸ್ಮಾರ್ಟ್ಫೋನ್ಗಳ ಕ್ಯಾಮೆರಾವನ್ನೇ ನೋಡಿ ಖರೀದಿ ಮಾಡ್ತಾರೆ. ಹಾಗಿದ್ರೆ ಮಾರುಲಕಟ್ಟೆಯಲ್ಲಿ ಲಭ್ಯವಿರುವ ಉತ್ತಮ ಕ್ಯಾಮೆರಾ ಹೊಂದಿದ ಸ್ಮಾರ್ಟ್ಫೋನ್ಗಳು ಯಾವುದೆಂದು ಈ ಲೇಖನದ ಮೂಲಕ ತಿಳಿಯಿರಿ.
ಸ್ಯಾಮ್‌ಸಂಗ್ ಗ್ಯಾಲಕ್ಸಿ S23 ಅಲ್ಟ್ರಾ: ಈ ಸ್ಮಾರ್ಟ್ಫೋಣ್ ಅತ್ಯುತ್ತಮ ಕ್ಯಾಮೆರಾ ಕೇಂದ್ರಿತ ಫೀಚರ್ಸ್ ಸ್ಮಾರ್ಟ್‌ಫೋನ್‌ಗಳಲ್ಲಿ ಒಂದಾಗಿದೆ. ಈ ಸ್ಮಾರ್ಟ್‌ಫೋನ್ ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 200 ಮೆಗಾಪಿಕ್ಸೆಲ್ ಸೆನ್ಸಾರ್ ಅನ್ನು ಹೊಂದಿದ್ದು, 85 ಡಿಗ್ರಿ ಫೀಲ್ಡ್ ಆಫ್ ವ್ಯೂ ಅನ್ನು ಸಹ ಬೆಂಬಲಿಸುತ್ತದೆ..