ಇದು 6.78ಇಂಚಿನ ಹೆಚ್‌ಡಿ ಡಿಸ್‌ಪ್ಲೇ ಹೊಂದಿದೆ. ಮೀಡಿಯಾಟೆಕ್ ಡೈಮೆನ್ಸಿಟಿ 9000 SoC ಪ್ರೊಸೆಸರ್ ಬಲವನ್ನು ಈ ಸ್ಮಾರ್ಟ್ಫೋನ್ನಲ್ಲಿ ನೀಡಲಾಗಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೋನಿ IMX866 RGBW ಸೆನ್ಸಾರ್ ಹೊಂದಿದೆ. ಜೊತೆಗೆ 4,500mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದ್ದು, ಈ ಬ್ಯಾಟರಿಯು 80W ಫ್ಲ್ಯಾಶ್ ವೇಗದ ಚಾರ್ಜಿಂಗ್ ತಂತ್ರಜ್ಞಾನವನ್ನು ಬೆಂಬಲಿಸುತ್ತದೆ.
ಈ ಐಕ್ಯೂ 9ಟಿ ಫೋನ್ 6.78 ಇಂಚಿನ ಫುಲ್ ಹೆಚ್‌ಡಿ+ ಡಿಸ್‌ಪ್ಲೇ ಹೊಂದಿದೆ. ಇದು ಸ್ನಾಪ್‌ಡ್ರಾಗನ್ 8+ Gen 1 SoC ಪ್ರೊಸೆಸರ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಅನ್ನು ಬೆಂಬಲಿಸುವ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಸಹ ಇದೆ. ಐಕ್ಯೂ 9T ಸ್ಮಾರ್ಟ್‌ಫೋನ್ 4,700mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 120W ವೇಗದ ಚಾರ್ಜಿಂಗ್ ಬೆಂಬಲಿಸುತ್ತದೆ.
rಇಯಲ್ಮಿ ಜಿಟಿ 3 ಸ್ಮಾರ್ಟ್‌ಫೋನ್ 6.43 ಇಂಚಿನ ಹೆಚ್‌ಡಿ + ಅಮೋಲ್ಡ್ ಡಿಸ್‌ಪ್ಲೇಯನ್ನು ಹೊಂದಿದೆ. ಮೀಡಿಯಾ ಟೆಕ್ ಡೈಮೆನ್ಸಿಟಿ 8100 ಎಸ್ಓಸಿ ಪ್ರೊಸೆಸರ್ ನೀಡಲಾಗಿದೆ. ಇನ್ನು ಈ ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದ್ದು, ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್ನಲ್ಲಿದೆ. ಜೊತೆಗೆ 4,500 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕಪ್ ಸಹ ಹೊಂದಿದೆ. ಇನ್ನು ಈ ಬ್ಯಾಟರಿಯು 150W ವೇಗ ಚಾರ್ಜಿಂಗ್ ಸಾಮರ್ಥ್ಯದಲ್ಲಿದೆ.