New Smartphones: ಈ ತಿಂಗಳಲ್ಲಿ ಮಾರುಕಟ್ಟೆಗೆ ಲಗ್ಗೆಯಿಡಲಿರುವ ಸ್ಮಾರ್ಟ್​​ಫೋನ್​ಗಳಿವು!

New Mobiles: ಈ ವರ್ಷದಲ್ಲಿ ಹಲವಾರು ಪ್ರೀಮಿಯಮ್​ ಸ್ಮಾರ್ಟ್​​ಫೋನ್​ಗಳು ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. ಹಾಗಿದ್ರೆ ಈ ಏಪ್ರಿಲ್​ ತಿಂಗಳಲ್ಲಿ ಭಾರತೀಯ ಮೊಬೈಲ್​ ಮಾರುಕಟ್ಟೆಯಲ್ಲಿ ಬಿಡುಗಡೆಗೊಳ್ಳಲಿರುವ ಸ್ಮಾರ್ಟ್​​ಫೋನ್​ಗಳು ಯಾವುದೆಲ್ಲಾ ಎಂಬುದನ್ನು ಈ ಲೇಖನದಲ್ಲಿದೆ ಓದಿ.

First published:

  • 18

    New Smartphones: ಈ ತಿಂಗಳಲ್ಲಿ ಮಾರುಕಟ್ಟೆಗೆ ಲಗ್ಗೆಯಿಡಲಿರುವ ಸ್ಮಾರ್ಟ್​​ಫೋನ್​ಗಳಿವು!

    ಸ್ಮಾರ್ಟ್​​ಫೋನ್​ಗಳು ಇತ್ತೀಚೆಗೆ ಪ್ರತಿಯೊಬ್ಬರ ಅಗತ್ಯ ಸಾಧನವಾಗಿಬಿಟ್ಟಿದೆ. ಇದಲ್ಲದೇ ಮೊಬೈಲ್​ ಮಾರುಕಟ್ಟೆಯಲ್ಲಿ ಸ್ಮಾರ್ಟ್​​ಫೋನ್​ಗಳಿಗೆ ಇತ್ತೀಚೆಗಂತೂ ಭಾರೀ ಬೇಡಿಕೆ. ಇದನ್ನೇ ಗಮನಿಸಿದ ಕೆಲ ಕಂಪೆನಿಗಳು ಇದೀಗ ಹೊಸ ಹೊಸ ಸ್ಮಾರ್ಟ್​​ಫೋನ್​ಗಳನ್ನು ಪರಿಚಯಿಸುತ್ತಿದೆ. ಹಾಗಿದ್ರೆ ಈ ಏಪ್ರಿಲ್​ನಲ್ಲಿ ಮಾರುಕಟ್ಟೆಗೆ ಲಗ್ಗೆಯಿಡಲಿರುವ ಸ್ಮಾರ್ಟ್​​ಫೋನ್​ಗಳು ಯಾವುದೆಲ್ಲಾ ಎಂಬುದನ್ನು ಈ ಲೇಖನದಲ್ಲಿದೆ ಓದಿ.

    MORE
    GALLERIES

  • 28

    New Smartphones: ಈ ತಿಂಗಳಲ್ಲಿ ಮಾರುಕಟ್ಟೆಗೆ ಲಗ್ಗೆಯಿಡಲಿರುವ ಸ್ಮಾರ್ಟ್​​ಫೋನ್​ಗಳಿವು!

    Asus ROG Phone 7: ಈ ಸ್ಮಾರ್ಟ್​​ಫೋನ್​ ಸಹ ಪ್ರೀಮಿಯಂ ವಿಭಾಗದಲ್ಲಿ ಬರಲಿದೆ. ಇದು 6.78 ಇಂಚಿನ OLED ಡಿಸ್ಪ್ಲೇ ಜೊತೆಗೆ 165 Hz ರಿಫ್ರೆಶ್ ರೇಟ್, ಸ್ನಾಪ್‌ಡ್ರಾಗನ್ 8 Gen2 SoC ಪ್ರೊಸೆಸರ್, 50 MP + 13 MP + 5 MP ಜೊತೆಗೆ ಟ್ರಿಪಲ್ ಕ್ಯಾಮೆರಾ ಸೆಟಪ್, 32 MP ಮುಂಭಾಗದ ಕ್ಯಾಮೆರಾ, 6000 mAh ಬ್ಯಾಟರಿ, USB ಟೈಪ್-ಸಿ ಪೋರ್ಟ್ ಈ ರೀತಿಯ ಹಲವಾರು ಫೀಚರ್ಸ್​​ಗಳನ್ನು ಹೊಂದಿರಲಿದೆ. ಈ ಸ್ಮಾರ್ಟ್‌ಫೋನ್ ಬೆಲೆ ರೂ. 62,990. ಏಪ್ರಿಲ್ 13 ರಂದು ಮಾರುಕಟ್ಟೆಗೆ ಲಗ್ಗೆಯಿಡುವ ಸಾಧ್ಯತೆಯಿದೆ.

    MORE
    GALLERIES

  • 38

    New Smartphones: ಈ ತಿಂಗಳಲ್ಲಿ ಮಾರುಕಟ್ಟೆಗೆ ಲಗ್ಗೆಯಿಡಲಿರುವ ಸ್ಮಾರ್ಟ್​​ಫೋನ್​ಗಳಿವು!

    OnePlus Nord CE 3 Lite: ಒನ್​​ಪ್ಲಸ್​ ಕಂಪೆನಿಯ ಈ ಸ್ಮಾರ್ಟ್​​ಫೋನ್​ 6.72-ಇಂಚಿನ FHD+ IPS LCD ಡಿಸ್‌ಪ್ಲೇ ಜೊತೆಗೆ 1080 X 2400 ಪಿಕ್ಸೆಲ್‌ಗಳ ರೆಸಲ್ಯೂಶನ್, 120Hz ರಿಫ್ರೆಶ್ ರೇಟ್ ಅನ್ನು ಹೊಂದಿರಬಹುದು. ಇದು Snapdragon 695 SoC ಚಿಪ್‌ಸೆಟ್​ನೊಂದಿಗೆ ಕಾರ್ಯನಿರ್ವಹಿಸುತ್ತದೆ ಎಂದು ವರದಿಯಾಗಿದೆ.

    MORE
    GALLERIES

  • 48

    New Smartphones: ಈ ತಿಂಗಳಲ್ಲಿ ಮಾರುಕಟ್ಟೆಗೆ ಲಗ್ಗೆಯಿಡಲಿರುವ ಸ್ಮಾರ್ಟ್​​ಫೋನ್​ಗಳಿವು!

    ಇನ್ನು ಈ ಸ್ಮಾರ್ಟ್​​ಫೋನ್ 108MP ಪ್ರೈಮರಿ ಕ್ಯಾಮೆರಾ + 2MP ಡೆಪ್ತ್ ಸೆನ್ಸಾರ್ + 2MP ಮ್ಯಾಕ್ರೋ ಯೂನಿಟ್, 16MP ಫ್ರಂಟ್ ಕ್ಯಾಮೆರಾ ಮತ್ತು 5000mAh ಬ್ಯಾಟರಿಯೊಂದಿಗೆ ಹಿಂಭಾಗದ ಟ್ರಿಪಲ್ ಕ್ಯಾಮೆರಾ ಸೆಟಪ್ ನಂತಹ ಫೀಚರ್ಸ್​ಗಳನ್ನು ಒಳಗೊಂಡಿದೆ. ಈ ಸ್ಮಾರ್ಟ್‌ಫೋನ್ ಭಾರತದಲ್ಲಿ ಏಪ್ರಿಲ್ 4 ರಂದು ಬಿಡುಗಡೆಯಾಗಲಿದ್ದು, ಇದರ ಬೆಲೆ ರೂ. 18,999 ಇರಬಹುದು ಎಂದು ಅಂದಾಜಿಸಲಾಗಿದೆ.

    MORE
    GALLERIES

  • 58

    New Smartphones: ಈ ತಿಂಗಳಲ್ಲಿ ಮಾರುಕಟ್ಟೆಗೆ ಲಗ್ಗೆಯಿಡಲಿರುವ ಸ್ಮಾರ್ಟ್​​ಫೋನ್​ಗಳಿವು!

    Realme GT Neo 5 SE: ಈ ಸ್ಮಾರ್ಟ್‌ಫೋನ್ ಏಪ್ರಿಲ್ 3 ರಂದು ಅಂದರೆ ಇಂದು ಬಿಡುಗಡೆಯಾಗಲಿದೆ. ಇದು ಮೊದಲು ಚೀನಾ ಮಾರುಕಟ್ಟೆಯಲ್ಲಿ ಮಾತ್ರ ಲಭ್ಯವಾಗಲಿದೆ. ಮುಂದಿನ ದಿನಗಳಲ್ಲಿ ವಿಶ್ವದಾದ್ಯಂತ ಲಾಂಚ್ ಆಗುವ ನಿರೀಕ್ಷೆಯಿದೆ. ಈ ಹ್ಯಾಂಡ್ಸೆಟ್ 6.74-ಇಂಚಿನ AMOLED ಡಿಸ್ಪ್ಲೇಯೊಂದಿಗೆ, 144Hz ರಿಫ್ರೆಶ್ ರೇಟ್​ ಅನ್ನು ಹೊಂದಿರುತ್ತದೆ.

    MORE
    GALLERIES

  • 68

    New Smartphones: ಈ ತಿಂಗಳಲ್ಲಿ ಮಾರುಕಟ್ಟೆಗೆ ಲಗ್ಗೆಯಿಡಲಿರುವ ಸ್ಮಾರ್ಟ್​​ಫೋನ್​ಗಳಿವು!

    ಈ ಸ್ಮಾರ್ಟ್​​ಫೋನ್​ Snapdragon 7+ Gen2 SoC ಪ್ರೊಸೆಸರ್​ನಿಂದ ಕಾರ್ಯನಿರ್ವಹಿಸುತ್ತದೆ. ಹಾಗೆಯೇ 64MP+8MP+2MP ಹಿಂಭಾಗದ ಟ್ರಿಪಲ್ ಕ್ಯಾಮೆರಾ ಸೆಟಪ್, 16MP ಫ್ರಂಟ್ ಕ್ಯಾಮೆರಾ, 5500mAh ಬ್ಯಾಟರಿಯಂತಹ ವೈಶಿಷ್ಟ್ಯಗಳನ್ನು ಹೊಂದಿದೆ. ಇದಕ್ಕೆ ರೂ. 26,990 ಇರಬಹುದು ಎಂದು ಅಂದಾಜಿಸಲಾಗಿದೆ.

    MORE
    GALLERIES

  • 78

    New Smartphones: ಈ ತಿಂಗಳಲ್ಲಿ ಮಾರುಕಟ್ಟೆಗೆ ಲಗ್ಗೆಯಿಡಲಿರುವ ಸ್ಮಾರ್ಟ್​​ಫೋನ್​ಗಳಿವು!

    ಪೋಕೋ ಎಫ್​5: ಸ್ಮಾರ್ಟ್ಫೋನ್ 120Hz ರಿಫ್ರೆಶ್ ದರದೊಂದಿಗೆ 6.67 ಇಂಚಿನ QHD + ಅಮೋಲ್ಡ್​ ಡಿಸ್ಪ್ಲೇಯನ್ನು ಹೊಂದಿದೆ. ಇದು 1,400 ನಿಟ್ಸ್ ಬ್ರೈಟ್‌ನೆಸ್ ಅನ್ನು ನೀಡುತ್ತದೆ. ಈ ಹ್ಯಾಂಡ್‌ಸೆಟ್ ಸ್ನಾಪ್‌ಡ್ರಾಗನ್ 7+ Gen 2 ಚಿಪ್‌ಸೆಟ್ ಮೂಲಕ ಅತ್ಯುತ್ತಮ ಕಾರ್ಯಕ್ಷಮತೆಯನ್ನು ನೀಡುತ್ತದೆ.

    MORE
    GALLERIES

  • 88

    New Smartphones: ಈ ತಿಂಗಳಲ್ಲಿ ಮಾರುಕಟ್ಟೆಗೆ ಲಗ್ಗೆಯಿಡಲಿರುವ ಸ್ಮಾರ್ಟ್​​ಫೋನ್​ಗಳಿವು!

    ಇನ್ನು ಪೋಕೋ ಎಫ್​ 5 ಸ್ಮಾರ್ಟ್​​ಫೋನ್​ 50MP+8MP+2MP ರಿಯರ್ ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ 16MP ಫ್ರಂಟ್ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಇದು 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕಪ್​ ಅನ್ನು ಹೊಂದಿದೆ. ಏಪ್ರಿಲ್ 6 ರಂದು ಭಾರತದಲ್ಲಿ ಈ ಸ್ಮಾರ್ಟ್​​​​ಫೋನ್​ ಬಿಡುಗಡೆಯಾಗಬಹುದು. ಇದರ ಬೆಲೆ ರೂ.30 ಸಾವಿರದೊಳಗಿರುವ ಸಾಧ್ಯತೆ ಇದೆ.

    MORE
    GALLERIES