ಆಂಡ್ರಾಯ್ಡ್ನಲ್ಲಿ ಸುಲಭದಲ್ಲಿ ಡೌನ್ಲೋಡ್ ಮಾಡಿ, ಸ್ಕ್ರೀನ್ ರೆಕಾರ್ಡ್ ಮಾಡಬಹುದಾದ ಬೆಸ್ಟ್ ಆ್ಯಪ್ಗಳು ಯಾವುದೆಂದು ಈ ಲೇಖನದ ಮೂಲಕ ತಿಳಿಯಿರಿ. ಎಝಡ್ ಸ್ಕ್ರೀನ್ ರೆಕಾರ್ಡರ್: ಎಝಡ್ ಸ್ಕ್ರೀನ್ ರೆಕಾರ್ಡರ್ ಆ್ಯಪ್ ಆಂಡ್ರಾಯ್ಡ್ ಫೋನ್ಗಳಲ್ಲಿ ಸ್ಕ್ರೀನ್ ರೆಕಾರ್ಡ್ ಮಾಡಬಹುದಾದ ಬೆಸ್ಟ್ ಆ್ಯಪ್ಗಳಾಗಿದೆ. ಈ ಆ್ಯಪ್ ಅನ್ನು ಬಳಕೆದಾರು ಗೂಗಲ್ ಪ್ಲೇ ಸ್ಟೋರ್ ಮೂಲಕ ಫ್ರೀಯಾಗಿ ಡೌನ್ಲೋಡ್ ಮಾಡಿಕೊಳ್ಳಬಹುದು.
ಡಿಯು ರೆಕಾರ್ಡರ್: ಇನ್ನು ಸ್ಮಾರ್ಟ್ಫೋನ್ಗಳಲ್ಲಿ ಸ್ಕ್ರೀನ್ ರೆಕಾರ್ಡ್ ಮಾಡಲಿರುವಂತಹ ಬೆಸ್ಟ್ ಆ್ಯಪ್ಗಳಲ್ಲಿ ಡಿಯು ರೆಕಾರ್ಡರ್ ಆ್ಯಪ್ ಸಹ ಒಂದು. ಇದನ್ನು ಬಳಸಲು ತುಂಬಾ ಸುಲಭ. ಈ ಅಪ್ಲಿಕೇಶನ್ ಬಳಕೆದಾರರಿಗೆ ಹಲವು ಫೀಚರ್ಸ್ಗಳನ್ನು ಸಹ ನೀಡುತ್ತದೆ. ಇನ್ನು ಈ ಡಿಯು ರೆಕಾರ್ಡರ್ ಆ್ಯಪ್ ಅನ್ನು ಎರಡು ರೀತಿಯಲ್ಲಿ ನೀವು ಇದರ ರೆಕಾರ್ಡಿಂಗ್ ಅನ್ನು ಕಂಟ್ರೋಲ್ ಮಾಡಬಹುದು.