ಚೀನಾದ ಟೆಕ್ ಕಂಪನಿ ಹಾನರ್ ತನ್ನ ಇತ್ತೀಚಿನ ಫಿಟ್ನೆಸ್ ಬ್ಯಾಂಡ್ ಅನ್ನು ಚೀನಾದಲ್ಲಿ ಬಿಡುಗಡೆ ಮಾಡಿದೆ. ಫಿಟ್ನೆಸ್ ಟ್ರ್ಯಾಕರ್ನಲ್ಲಿ 1.47-ಇಂಚಿನ ಅಮೋಲ್ಡ್ ಡಿಸ್ಪ್ಲೇ ನೀಡಲಾಗಿದೆ. ಈ ಬ್ಯಾಮಡ್ ಅನ್ನು ಫುಲ್ ಚಾರ್ಜ್ ಮಾಡಿದ್ರೆ 14 ದಿನಗಳ ಬ್ಯಾಟರಿ ಬ್ಯಾಕಪ್ ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಗ್ರಾಹಕರು ಇದನ್ನು ಮೂರು ವಿಭಿನ್ನ ಬಣ್ಣದ ರೂಪಾಂತರಗಳಲ್ಲಿ ಖರೀದಿಸಬಹುದು. ಇವುಗಳಲ್ಲಿ ನೈಟ್ ಬ್ಲ್ಯಾಕ್, ಸೀಡರ್ ಬ್ಲೂ ಮತ್ತು ರೋಸ್ ಪಿಂಕ್ ಬಣ್ಣಗಳು ಸೇರಿವೆ. ಇದರಲ್ಲಿ 96 ಕ್ರೀಡಾ ವಿಧಾನಗಳನ್ನು ನೀಡಲಾಗಿದೆ. ಬ್ಲೂಟೂತ್ 5.0 ಮತ್ತು 2.4 GHz ಡೇಟಾ ಸಂಪರ್ಕವು ಬ್ಯಾಂಡ್ನಲ್ಲಿ ಲಭ್ಯವಿದೆ.
ಇನ್ನು ಈ ಸ್ಮಾರ್ಟ್ ಬ್ಯಾಂಡ್ನ ಬೆಲೆಗಳ ಬಗ್ಗೆ ಮಾತನಾಡುವುದಾದರೆ, ಹಾನರ್ ಬ್ಯಾಂಡ್ 7 ನ ಬೆಲೆ 249 ಯುವಾನ್ ಅಂದರೆ ಭಾರತದಲ್ಲಿ ಸುಮಾರ 3000 ರೂಪಾಯಿಗಳು ಆಗುತ್ತದೆ. ಗ್ರಾಹಕರು ಪ್ರಸ್ತುತ ಬ್ಯಾಂಡ್ ಅನ್ನು 199 ಯುವಾನ್ ಅಂದರೆ ಭಾರತದಲ್ಲಿ ಸುಮಾರು ರೂ. 2,300 ದರದಲ್ಲಿ ಪ್ರೀ ಬುಕಿಂಗ್ನಲ್ಲಿ ರಿಯಾಯಿತಿಯೊಂದಿಗೆ ಬುಕ್ ಮಾಡಬಹುದು. ಈ ಸಾಧನವು ಕಂಪನಿಯ ಅಧಿಕೃತ ವೆಬ್ಸೈಟ್ನಲ್ಲಿ ಪ್ರೀ ಬುಕಿಂಗ್ ಮಾಡಲು ಲಭ್ಯವಿದೆ ಮತ್ತು ಜನವರಿ 2023 ರ ಮೊದಲ ವಾರದಿಂದ ಮಾರುಕಟ್ಟೆಗೆ ಮಾರಾಟಕ್ಕೆ ಬರುವ ಸಾಧ್ಯತೆಯಿದೆ.
ಹಾನರ್ ಬ್ಯಾಂಡ್ 7 ನಲ್ಲಿ ಅಕ್ಸಿಲೆರೊಮೀಟರ್, ಗೈರೊ ಸೆನ್ಸಾರ್ ಮತ್ತು ಆಪ್ಟಿಕಲ್ ಹಾರ್ಟ್ ರೇಟ್ ಸೆನ್ಸಾರ್ ಅನ್ನು ಸಹ ಅಳವಡಿಸಲಾಗಿದೆ. ಇದು 5ATM ವಾಟರ್ ರೆಸಿಸ್ಟೆಂಟ್ ರೇಟಿಂಗ್ ಅನ್ನು ಸಹ ಒಳಗೊಂಡಿದೆ. ಇದರರ್ಥ ಸಾಧನವು 10 ನಿಮಿಷಗಳ ಕಾಲ ಆಳವಾದ ನೀರಿನಲ್ಲಿ 50 ಮೀಟರ್ ವರೆಗೆ ನೀರಿನ ನಿರೋಧಕವಾಗಿದೆ. ಹಾನರ್ನ ಈ ಫಿಟ್ನೆಸ್ ಟ್ರ್ಯಾಕರ್ ಮ್ಯಾಗ್ನೆಟಿಕ್ ಪೋಲ್ ಥಿಂಬಲ್ ಚಾರ್ಜಿಂಗ್ ಪೋರ್ಟ್ನೊಂದಿಗೆ ಸಜ್ಜುಗೊಂಡಿದೆ ಮತ್ತು ಬ್ಲೂಟೂತ್ 5.0 ಮತ್ತು 2.4 GHz ಡೇಟಾ ಸಂಪರ್ಕವನ್ನು ಹೊಂದಿದೆ.