ಯಾವಾಗ ಇಸ್ತ್ರಿ ಪೆಟ್ಟಿಗೆಯಿಂದ ಬಟ್ಟೆ ಸುಡುತ್ತದೋ, ಆ ಸಂದರ್ಭದಲ್ಲಿ ಐರನ್ ಬಾಕ್ಸ್ ಸಹ ಕಪ್ಪಾಗುತ್ತದೆ. ನಂತರ ಅದನ್ನು ಏನು ಮಾಡಿದ್ರೂ ರಿಮೂವ್ ಮಾಡಲಾಗುವುದಿಲ್ಲ. ಈ ಸಂದರ್ಭದಲ್ಲಿ ಕೆಲವರು ಅದನ್ನು ಎಸೆಯಲು ಮುಂದಾಗುತ್ತಾರೆ. ಆದರೆ ಸುಟ್ಟ ಬಟ್ಟೆಯಿಂದ ಐರನ್ ಬಾಕ್ಸ್ನಲ್ಲಾದ ಕಲೆಯನ್ನು ಕ್ಷಣಮಾತ್ರದಲ್ಲಿ ಕ್ಲೀನ್ ಮಾಡ್ಬಹುದು. ಇದಕ್ಕಾಗಿ ಇಲ್ಲಿದೆ ಸಿಂಪಲ್ ಟ್ರಿಕ್ಸ್.
ಪ್ಯಾರಸಿಟಮಾಲ್ ಬಳಸಿ: ನಿಮ್ಮ ಮನೆಯ ಇಸ್ತ್ರಿ ಪೆಟ್ಟಿಗೆಯಲ್ಲಿ ಅಂಟಿಕೊಂಡಿರುವ ಬಟ್ಟೆಯ ಕಲೆಯನ್ನು ತೆಗೆದುಹಾಕಲು ಪ್ಯಾರಸಿಟಮಾಲ್ ಮಾತ್ರೆಯನ್ನು ಬಳಸಿ. ಮೊದಲಿಗೆ ನಿಮ್ಮ ಐರನ್ ಬಾಕ್ಸ್ ಅನ್ನು ಸ್ವಲ್ಪ ಬಿಸಿ ಮಾಡಿ. ನಂತರ ಅದರ ಮೇಲೆ ನಿಧಾನಕ್ಕೆ ಪ್ಯಾರಸಿಟಮಾಲ್ ಮಾತ್ರೆಯನ್ನು ಉಜ್ಜಿ. ಉಜ್ಜಿದ ಬಳಿಕ ತಕ್ಷಣ ಬಟ್ಟೆಯಿಂದ ಅಥವಾ ಕಾಗದದಿಂದ ಅದನ್ನು ಕ್ಲೀನ್ ಮಾಡಿ. ಈ ಮೂಲಕ ನಿಮ್ಮ ಐರನ್ ಬಾಕ್ಸ್ನಲ್ಲಿರುವ ಎಲ್ಲಾ ಕಲೆಯನ್ನು ಸುಲಭದಲ್ಲಿ ತೆಗೆದುಹಾಕ್ಬಹುದು.