Tariff Hike: ಟೆಲಿಕಾಂ ಗ್ರಾಹಕರಿಗೆ ಶಾಕಿಂಗ್​ ನ್ಯೂಸ್! ಮತ್ತೆ ಬೆಲೆ ಏರಿಕೆ ಮಾಡಿದ ಕಂಪೆನಿ

Recharge Plans: ಪ್ರಮುಖ ಟೆಲಿಕಾಂ ಕಂಪನಿಯೊಂದು ತನ್ನ ಗ್ರಾಹಕರಿಗೆ ಶಾಕ್ ನೀಡಲು ಸಿದ್ಧವಾಗುತ್ತಿದೆ. ರೀಚಾರ್ಜ್​ ಬೆಲೆಗಳನ್ನು ಹೆಚ್ಚಿಸಲು ಸಿದ್ಧವಾಗುತ್ತಿದೆ. ಇದು ಅನೇಕ ಜನರ ಮೇಲೆ ಪರಿಣಾಮ ಬೀರುವುದಂತು ಗ್ಯಾರಂಟಿ.

First published:

  • 18

    Tariff Hike: ಟೆಲಿಕಾಂ ಗ್ರಾಹಕರಿಗೆ ಶಾಕಿಂಗ್​ ನ್ಯೂಸ್! ಮತ್ತೆ ಬೆಲೆ ಏರಿಕೆ ಮಾಡಿದ ಕಂಪೆನಿ

    ದೇಶದ ಪ್ರಮುಖ ಟೆಲಿಕಾಂ ಕಂಪೆನಿಗಳಲ್ಲಿ ಒಂದಾಗಿ ಮುಂದುವರಿದಿರುವ ಭಾರ್ತಿ ಏರ್‌ಟೆಲ್ ತನ್ನ ಗ್ರಾಹಕರಿಗೆ ಶಾಕ್ ನೀಡಲು ಸಿದ್ಧವಾಗಿದೆ. ತನ್ನ ರೀಚಾರ್ಜ್​ ಬೆಲೆಯನ್ನು ಮತ್ತೊಮ್ಮೆ ಹೆಚ್ಚಳ ಮಾಡಲು ಕಂಪೆನಿ ಸಿದ್ಧವಾಗಿದೆ. ಇದು ಏರ್​​ ಟೆಲ್ ಸಿಮ್ ಕಾರ್ಡ್ ಬಳಕೆದಾರರ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ ಎಂದು ಹೇಳಬಹುದು.

    MORE
    GALLERIES

  • 28

    Tariff Hike: ಟೆಲಿಕಾಂ ಗ್ರಾಹಕರಿಗೆ ಶಾಕಿಂಗ್​ ನ್ಯೂಸ್! ಮತ್ತೆ ಬೆಲೆ ಏರಿಕೆ ಮಾಡಿದ ಕಂಪೆನಿ

    ಏರ್‌ಟೆಲ್ ಅಧ್ಯಕ್ಷ ಸುನಿಲ್ ಮಿತ್ತಲ್ ಸಂದರ್ಶನವೊಂದರಲ್ಲಿ ಈ ವಿಷಯವನ್ನು ಸದ್ಯ ಬಹಿರಂಗಪಡಿಸಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಕಂಪನಿಯು ಕಳೆದ ತಿಂಗಳಷ್ಟೇ ಕನಿಷ್ಠ ರೀಚಾರ್ಜ್ ಪ್ಲಾನ್ ಬೆಲೆಯನ್ನು ಹೆಚ್ಚಿಸಿದೆ. ಈ ಸಂದರ್ಭದಲ್ಲಿ 57ರಷ್ಟು ದರ ಏರಿಕೆಯಾಗಿದೆ. ಈಗ ಎಂಟು ರಾಜ್ಯಗಳಲ್ಲಿ ಕನಿಷ್ಠ ರೀಚಾರ್ಜ್ ಬೆಲೆ 155 ರೂಪಾಯಿಯಾಗಿದೆ.

    MORE
    GALLERIES

  • 38

    Tariff Hike: ಟೆಲಿಕಾಂ ಗ್ರಾಹಕರಿಗೆ ಶಾಕಿಂಗ್​ ನ್ಯೂಸ್! ಮತ್ತೆ ಬೆಲೆ ಏರಿಕೆ ಮಾಡಿದ ಕಂಪೆನಿ

    ಕಂಪೆನಿಯ ಬ್ಯಾಲೆನ್ಸ್ ಶೀಟ್ ಚೆನ್ನಾಗಿಲ್ಲವೇ? ಮತ್ತು ಇಂತಹ ಸಮಯದಲ್ಲಿ ರೀಚಾರ್ಜ್ ಯೋಜನೆಗಳ ಬೆಲೆಯನ್ನು ಹೆಚ್ಚಿಸುವ ಅಗತ್ಯವೇನು? ಎಂಬ ಪ್ರಶ್ನೆಗೆ ಉತ್ತರಿಸಿದ ಮಿತ್ತಲ್, ಟೆಲಿಕಾಂ ವ್ಯವಹಾರದಲ್ಲಿ ಬಂಡವಾಳದ ಮೇಲಿನ ಆದಾಯವು ತುಂಬಾ ಕಡಿಮೆಯಾಗಿದೆ. ಅದಕ್ಕಾಗಿಯೇ ಈ ವರ್ಷ ರೀಚಾರ್ಜ್​ ಬೆಲೆಗಳನ್ನು ಹೆಚ್ಚಿಸಬೇಕಾಗಬಹುದು ಎಂದು ಅವರು ಹೇಳಿದರು.

    MORE
    GALLERIES

  • 48

    Tariff Hike: ಟೆಲಿಕಾಂ ಗ್ರಾಹಕರಿಗೆ ಶಾಕಿಂಗ್​ ನ್ಯೂಸ್! ಮತ್ತೆ ಬೆಲೆ ಏರಿಕೆ ಮಾಡಿದ ಕಂಪೆನಿ

    ಬಹುತೇಕ ಎಲ್ಲಾ ರೀತಿಯ ರೀಚಾರ್ಜ್ ಯೋಜನೆಗಳ ಬೆಲೆಗಳು ಹೆಚ್ಚಾಗಬಹುದು ಎಂದು ಅವರು ಉಲ್ಲೇಖಿಸಿದ್ದಾರೆ. ಸುಂಕದ ಬೆಲೆ ಏರಿಕೆ ಸಾಮಾನ್ಯ ಜನರ ಮೇಲೆ ಪರಿಣಾಮ ಬೀರುತ್ತದೆಯೇ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಸುಂಕದ ಬೆಲೆ ಹೆಚ್ಚಳವು ಜನರು ಇತರ ವಸ್ತುಗಳಿಗೆ ಖರ್ಚು ಮಾಡುವ ವೆಚ್ಚಕ್ಕಿಂತ ಕಡಿಮೆಯಿರುತ್ತದೆ.

    MORE
    GALLERIES

  • 58

    Tariff Hike: ಟೆಲಿಕಾಂ ಗ್ರಾಹಕರಿಗೆ ಶಾಕಿಂಗ್​ ನ್ಯೂಸ್! ಮತ್ತೆ ಬೆಲೆ ಏರಿಕೆ ಮಾಡಿದ ಕಂಪೆನಿ

    ವೇತನ ಹೆಚ್ಚಿದೆ, ಬಾಡಿಗೆ ಹೆಚ್ಚಿದೆ, ಆದರೆ ರೀಚಾರ್ಜ್​ ಬೆಲೆಯ ವಿಷಯದಲ್ಲಿ ಮಾತ್ರ ಯಾವುದೇ ಬದಲಾಗಿಲ್ಲ. ಒಂದೇ ರೀಚಾರ್ಜ್​ನೊಂದಿಗೆ ಜನರು 30 GB ಡೇಟಾವನ್ನು ಬಳಸುತ್ತಿದ್ದಾರೆ. ವೊಡಾಫೋನ್ ಐಡಿಯಾದಂತಹ ಪರಿಸ್ಥಿತಿಗಳನ್ನು ಎದುರಿಸಲು ನಾವು ಸಿದ್ಧರಿಲ್ಲ ಎಂದು ಅವರು ಹೇಳಿದ್ದಾರೆ.

    MORE
    GALLERIES

  • 68

    Tariff Hike: ಟೆಲಿಕಾಂ ಗ್ರಾಹಕರಿಗೆ ಶಾಕಿಂಗ್​ ನ್ಯೂಸ್! ಮತ್ತೆ ಬೆಲೆ ಏರಿಕೆ ಮಾಡಿದ ಕಂಪೆನಿ

    ಕಂಪನಿಯು ಇತ್ತೀಚೆಗೆ ರೂ. 99 ಯೋಜನೆಯನ್ನು ಕೈಬಿಡಲಾಗಿದೆ. ಈ ಯೋಜನೆಯಡಿ ಗ್ರಾಹಕರು 200 MB ಡೇಟಾವನ್ನು ಪಡೆಯುತ್ತಿದ್ದರು ಮತ್ತು ಸೆಕೆಂಡಿಗೆ 2.5 ಪೈಸೆ ವೆಚ್ಚದಲ್ಲಿ ಕರೆ ಮಾಡಬಹುದಿತ್ತು. ಆದರೆ ಈ ಯೋಜನೆಯ ಬದಲಿಗೆ ಈಗ ರೂ. 155 ಯೋಜನೆ ಬಂದಿದೆ.

    MORE
    GALLERIES

  • 78

    Tariff Hike: ಟೆಲಿಕಾಂ ಗ್ರಾಹಕರಿಗೆ ಶಾಕಿಂಗ್​ ನ್ಯೂಸ್! ಮತ್ತೆ ಬೆಲೆ ಏರಿಕೆ ಮಾಡಿದ ಕಂಪೆನಿ

    ಕಂಪನಿಯ ARPU ನಿಯಮದ ಅಡಿಯಲ್ಲಿ ರೂ. 200 ಗುರಿ ನಿಗದಿಪಡಿಸಲಾಗಿದೆ. ನಂತರ ಮಧ್ಯಮ ಮತ್ತು ದೀರ್ಘಾವಧಿಯಲ್ಲಿ ಈ ARPU ಗುರಿಯು ರೂ. 300ಕ್ಕೆ ತೆಗೆದುಕೊಳ್ಳಲು ನಿರ್ಧರಿಸಿದೆ. ಈ ಮೂಲಕ ರೀಚಾರ್ಜ್ ಯೋಜನೆಗಳು ಬೆಲೆ ಏರಿಕೆಯ ಗುರಿಯನ್ನು ಪೂರೈಸಲು ನೋಡುತ್ತಿವೆ.

    MORE
    GALLERIES

  • 88

    Tariff Hike: ಟೆಲಿಕಾಂ ಗ್ರಾಹಕರಿಗೆ ಶಾಕಿಂಗ್​ ನ್ಯೂಸ್! ಮತ್ತೆ ಬೆಲೆ ಏರಿಕೆ ಮಾಡಿದ ಕಂಪೆನಿ

    ಮುಂಬರುವ ಅವಧಿಯಲ್ಲಿ ಏರ್‌ಟೆಲ್ ಗ್ರಾಹಕರು ಹೆಚ್ಚಿನ ಹಣವನ್ನು ಪಾವತಿಸಬೇಕಾಗುತ್ತದೆ. ಆದರೆ ರೀಚಾರ್ಜ್​ ಬೆಲೆ ಎಷ್ಟು ಹೆಚ್ಚಾಗಬಹುದು ಎಂಬುದು ಶೀಘ್ರದಲ್ಲೇ ಬಹಿರಂಗ ಪಡಿಸಲಿದ್ದಾರೆ. ಇದನ್ನು ಗಮನಿಸಿ ಇತರೆ ಟೆಲಿಕಾಂ ಕಂಪೆನಿಗಳು ಏನು ಮಾಡಬಹುದು ಎಂಬ ಪ್ರಶ್ನೆ ಎಲ್ಲರಿಗೂ ಮೂಡಿದೆ. ಆದರೆ ಒಟ್ಟಿನಲ್ಲಿ ಈ ಬಾರಿ ಟೆಲಿಕಾಂ ಗ್ರಾಹಕರಿಗೆ ಶಾಕ್ ನೀಡುವುದು ಅಂತೂ ಗ್ಯಾರಂಟಿ.

    MORE
    GALLERIES