ಮೊಬೈಲ್ ಫೋನ್ ಸ್ಪೋಟಗೊಂಡು ಬಾಲಕಿಯೊಬ್ಬಳು ಮೃತಪಟ್ಟಿರುವ ಘಟನೆ ಕಜಕಿಸ್ತಾನದಲ್ಲಿ ನಡೆದಿದೆ. ಫೋನ್ ಅನ್ನು ಚಾರ್ಜ್ಗೆ ಇಟ್ಟು ಬಳಸಿರುವುದೇ ಈ ದುರಂತಕ್ಕೆ ಕಾರಣ ಎಂದು ವರದಿಯಲ್ಲಿ ತಿಳಿಸಿದೆ.
2/ 11
ಬಾಸ್ಟೋಬನ್ನಲ್ಲಿರುವ ಮನೆಯಲ್ಲಿ ರಾತ್ರಿ ಸಂಗೀತ ಕೇಳುತ್ತಾ 14 ವರ್ಷದ ಅಲುವಾ ಅಸೆಟ್ಕಿಜಿ ಅಬ್ಜಲ್ಬೆಕ್ ಮಲಗಿದ್ದಳು. ಈ ವೇಳೆ ಮೊಬೈಲ್ನಲ್ಲಿ ಬ್ಯಾಟರಿ ಕಡಿಮೆ ಇದ್ದಿದ್ದರಿಂದ ಮೊಬೈಲ್ನ್ನು ಚಾರ್ಜ್ಗೆ ಇಟ್ಟಿದ್ದರು.
3/ 11
ತಲೆಯ ಬಳಿಯೇ ಮೊಬೈಲ್ ಇಟ್ಟು ಸಂಗೀತ ಆಲಿಸುತ್ತಿದ್ದ ವೇಳೆ ಮೊಬೈಲ್ ಸ್ಪೋಟಗೊಂಡಿದೆ. ಪರಿಣಾಮ ಬಾಲಕಿಯ ತಲೆಯ ಭಾಗಕ್ಕೆ ಗಂಭೀರ ಗಾಯವಾಗಿ ಮೃತಪಟ್ಟಿದ್ದಾಳೆ ಎಂದು ವರದಿಗಳು ತಿಳಿಸಿವೆ.
4/ 11
ಈ ಬಗ್ಗೆ ಪರಿಶೀಲನೆ ನಡೆಸಿದ ವಿಧಿವಿಜ್ಞಾನ ತಜ್ಞರು, ಮೊಬೈಲ್ ಸ್ಪೋಟಕ್ಕೆ ಚಾರ್ಜ್ನಿಂದ ಹೆಚ್ಚು ಬಿಸಿಯಾಗಿರುವುದು ಪ್ರಮುಖ ಕಾರಣ ಎಂಬುದುನ್ನು ದೃಢಪಡಿಸಿದ್ದಾರೆ. ರಾತ್ರಿಯಲ್ಲಿ ಚಾರ್ಜ್ಗೆ ಇಟ್ಟಿದ್ದರಿಂದ ಈ ಸ್ಪೋಟವು ಮುಂಜಾನೆ ವೇಳೆಯಲ್ಲಿ ನಡೆದಿರುವ ಸಾಧ್ಯತೆಯಿದೆ ಎಂದು ನಂಬಲಾಗಿದೆ.
5/ 11
ಅಲುವಾ ಅಬ್ಜಲ್ಬೆಕ್ ಮೃತಪಟ್ಟಿರುವುದನ್ನು ಅಲ್ಲಿನ ಸ್ಥಳೀಯ ಮಾಧ್ಯಮಗಳು ದುರಂತ ಎಂದು ಬಣ್ಣಿಸಿದ್ದು, ಆಕೆಯ ಗೆಳೆತಿ ಡೋಲಶೆವಾ ಎಂಬ ಯುವತಿಯು ಸಾವಿನ ಸುದ್ದಿಯನ್ನು ಮೊದಲ ಬಾರಿಗೆ ಸಾಮಾಜಿಕ ಮಾಧ್ಯಮದಲ್ಲಿ ಶೇರ್ ಮಾಡಿರುವುದಾಗಿ ತಿಳಿಸಿದೆ.
6/ 11
ಮೊಬೈಲ್ ಚಾರ್ಜಿಂಗ್ ವೇಳೆ ಎಚ್ಚರಿಕೆಯಿಂದ ಇರಬೇಕೆಂದು ಈ ಮೂಲಕ ಮಾಧ್ಯಮಗಳು ಸಂದೇಶ ರವಾನಿಸಿದ್ದು, ಯಾರೂ ಕೂಡ ನಿದ್ರೆ ಮಾಡುವ ವೇಳೆ ಮೊಬೈಲ್ ಫೋನ್ಗಳನ್ನು ಚಾರ್ಜ್ಗೆ ಇಡದಂತೆ ಎಚ್ಚರಿಸಿದೆ. ( ALL PC Credit: East2west News)
7/ 11
ಈ ಹಿಂದೆ ಕೂಡ ಬೆಂಗಳೂರು ಸೇರಿದಂತೆ ಅನೇಕ ಕಡೆ ಮೊಬೈಲ್ ಸ್ಪೋಟಗೊಂಡಿರುವ ವರದಿಗಳಾಗಿದ್ದವು. ಇದಕ್ಕೂ ಮುಖ್ಯ ಕಾರಣ ಫೋನನನ್ನು ಗಂಟೆಗಳ ಕಾಲ ಚಾರ್ಜ್ಗೆ ಇಡಲಾಗಿರುವುದು ಎನ್ನಲಾಗಿತ್ತು. ಅದೇ ರೀತಿ
8/ 11
ಮಲೇಷ್ಯಾ ಸಚಿವಾಲಯದ ಕ್ರಡಲ್ ಫಂಡ್ ಸಂಸ್ಥೆಯ ಸಿಇಒ ನಜ್ರಿನ್ ಹಸನ್ ಅವರ ಸಾವು ಕಳೆದ ವರ್ಷ ಎಲ್ಲರ ಗಮನ ಸೆಳೆದಿತ್ತು.
9/ 11
ಬೆಡ್ ರೂಂನಲ್ಲಿ ಫೋನ್ ಚಾರ್ಜ್ಗಿಟ್ಟು ಮಲಗಿದ್ದ ನಜ್ರಿನ್ ಮೊಬೈಲ್ ಸ್ಪೋಟದಿಂದ ಮೃತಪಟ್ಟಿದ್ದರು.
10/ 11
ಈ ಸುದ್ದಿಯು ವಿಶ್ವದ ಮೊಬೈಲ್ ಬಳಕೆದಾರರಿಗೆ ಎಚ್ಚರಿಕೆಯಾಗಿತ್ತು. ಇದೀಗ ಮತ್ತೊಮ್ಮೆ ಅಂತಹದ್ದೇ ಸುದ್ದಿ ಹೊರಬಿದ್ದಿದ್ದು, ಈ ಬಗ್ಗೆ ಎಲ್ಲರೂ ಎಚ್ಚರವಹಿಸುವುದು ಉತ್ತಮ.
11/ 11
ಹಾಗೆಯೇ ಮೊಬೈಲ್ ಫೋನ್ ಬ್ಯಾಟರಿ ಸಂಪೂರ್ಣ ಚಾರ್ಜ್ (100%) ಮಾಡುವುದು ಕೂಡ ಸ್ಪೋಟಕ್ಕೆ ಕಾರಣವಾಗುತ್ತದೆ.