Amazon Great Indian Festival Sale: ಮತ್ತೊಮ್ಮೆ ಭರ್ಜರಿ ಡಿಸ್ಕೌಂಟ್ ನೀಡುತ್ತಿದೆ ಅಮೆಜಾನ್!
News18 Kannada | October 7, 2019, 2:36 PM IST
1/ 7
ಆನ್ಲೈನ್ ಮಾರಾಟ ಮಳಿಗೆಯಾದ ಅಮೆಜಾನ್ ಮತ್ತೊಮ್ಮೆ ‘ಗ್ರೇಟ್ ಇಂಡಿಯನ್ ಫೆಸ್ಟಿವಲ್‘ ಆಯೋಜಿಸಲು ಮುಂದಾಗಿದೆ. ಅಕ್ಟೋಬರ್ 13 ರಿಂದ 17ರ ವರೆಗೆ ಈ ಸೇಲ್ ನಡೆಯಲಿದ್ದು, ಗ್ರಾಹಕರಿಗೆ ವಿಶೇಷ ಆಫರ್ಗಳನ್ನು ನೀಡುತ್ತಿದೆ.
2/ 7
ಸೆ. 27 ರಿಂದ ಅ.4 ರವರೆಗೆ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಅನ್ನು ಆಯೋಜಿಸಿತ್ತು. ಇದರಲ್ಲಿ ಗ್ಯಾಜೆಟ್, ಸ್ಮಾರ್ಟ್ಫೋನ್ ಮುಂತಾದವುಗಳ ಮೇಲೆ ಭರ್ಜರಿ ಡಿಸ್ಕೌಂಟ್ ನೀಡಿತ್ತು...
3/ 7
ಮಾತ್ರವಲ್ಲದೆ ಫ್ಲಾಸ್ ಸೇಲ್, ಕಡಿಮೆ ಬೆಲೆಗೆ ಆಕರ್ಷಕ ವಸ್ತುಗಳನ್ನು ಮಾರಾಟ ನಡೆಸಿತ್ತು. ಇದೀಗ ಅಮೆಜಾನ್ ಮತ್ತೊಮ್ಮೆ ಗ್ರಾಹಕರಿಗೆ ಕೊಡುಗೆ ನೀಡಲು ಮುಂದಾಗಿದೆ.
4/ 7
ಅಮೆಜಾನ್ ಪ್ರೈಮ್ ಮೆಂಬರ್ಶಿಪ್ ಪಡೆದ ಗ್ರಾಹಕರಿಗಾಗಿ ಈ ಸೇಲ್ ಅ. 12 ರಂದು ತೆರೆದಿರುತ್ತದೆ. ಜೊತೆಗೆ ಕೆಲ ವಸ್ತುಗಳ ಮೇಲೆ ಬೆಸ್ಟ್ ಆಫರ್ಗಳನ್ನು ನೀಡುತ್ತಿದೆ
5/ 7
ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ನಲ್ಲಿ ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಮೂಲಕ ವಸ್ತುಗಳನ್ನು ಖರೀದಿಸಿದರೆ ಭರ್ಜರಿ ಡಿಸ್ಕೌಂಟ್ ನೀಡುತ್ತಿದೆ. ಡೆಬಿಟ್ ಕಾರ್ಡ್ ಮೇಲೆ ಯಾವುದೇ ಇಎಂಐ ಇರುವುದಿಲ್ಲ.
6/ 7
ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ನಲ್ಲಿ ಸ್ಮಾರ್ಟ್ಫೋನ್ಗಳ ಮೇಲೆ ಶೇ.40 ರಷ್ಟು ಡಿಸ್ಕೌಂಟ್ ನೀಡುತ್ತಿದೆ. ಒನ್ಪ್ಲಸ್ 7ಟಿ, ಸ್ಯಾಮ್ಸಂಗ್ ಎಮ್30ಎಸ್ ಮತ್ತು ವಿವೋ ಯು10 ಸ್ಮಾರ್ಟ್ಫೋನ್ಗಳ ಮೇಲೆ ಶೇ.60 ನೀಡುತ್ತಿದೆ. ಜೊತೆಗೆ ಟಿವಿ, ಸ್ಮಾರ್ಟ್ ಸ್ಟೀಕರ್ಗಳ ಮೇಲೂ ಕಡಿಮೆ ಬೆಲೆಗೆ ಸೇಲ್ ಮಾಡುತ್ತಿದೆ.
7/ 7
ಫ್ಲಿಪ್ಕಾರ್ಟ್ ಕೂಡ ಅ.12 ರಿಂದ 16 ರ ವರೆಗೆ ದೀಪಾವಳಿ ಸೇಲ್ ನಡೆಸುತ್ತಿದೆ.