ಸ್ಯಾಮ್‌ಸಂಗ್ ಗ್ಯಾಲಕ್ಸಿ ಅನ್ಪ್ಯಾಕ್ಡ್ ಈವೆಂಟ್ 2023 ಕಾರ್ಯಕ್ರಮದಲ್ಲಿ ತನ್ನ ಗ್ಯಾಲಕ್ಸಿ ಬುಕ್ 3 ಸೀರಿಸ್ನ ನೋಟ್‌ಬುಕ್ ಲ್ಯಾಪ್‌ಟಾಪ್‌ಗಳನ್ನು ಅನಾವರಣಗೊಳಿಸಿದೆ. ಇತ್ತೀಚಿನ ಶ್ರೇಣಿಯ ಲ್ಯಾಪ್‌ಟಾಪ್‌ಗಳಲ್ಲಿ ಗ್ಯಾಲಕ್ಸಿ ಬುಕ್ 3 ಪ್ರೋ 14, ಗ್ಯಾಲಕ್ಸಿ ಬುಕ್ 3 ಪ್ರೋ 16, ಗ್ಯಾಲಕ್ಸಿ ಬುಕ್ 3 ಪ್ರೋ 360 ಮತ್ತು ಗ್ಯಾಲಕ್ಸಿ ಬುಕ್ 3 ಅಲ್ಟ್ರಾ ಸೇರಿವೆ.
ಕಂಪೆನಿ ಬಿಡುಗಡೆ ಮಾಡಿದ ಗ್ಯಾಲಕ್ಸಿ ಬುಕ್3 ಸೀರಿಸ್ನ ಲ್ಯಾಪ್‌ಟಾಪ್‌ಗಳಲ್ಲಿ, ಗ್ಯಾಲಕ್ಸಿ ಬುಕ್ 3 ಪ್ರೋ ಅನ್ನು ತೆಳುವಾದ ಮತ್ತು ಹಗುರವಾದ ಲ್ಯಾಪ್‌ಟಾಪ್‌ನಂತೆ ಪರಿಚಯಿಸಲಾಗಿದೆ, ಆದರೆ ಗ್ಯಾಲಕ್ಸಿ ಬುಕ್ 3 ಪ್ರೋ ಅನ್ನು 360 ಡಿಗ್ರಿ ಹಿಂಜ್‌ನೊಂದಿಗೆ ಕಾಂಪ್ಯಾಕ್ಟ್ ಫಾರ್ಮ್ ಫ್ಯಾಕ್ಟರ್‌ನಲ್ಲಿ ಬಿಡುಗಡೆ ಮಾಡಲಾಗಿದೆ. ಹಾಗೆಯೇ ಗ್ಯಾಲಕ್ಸಿ ಬುಕ್ 3 ಅಲ್ಟ್ರಾ ಟಾಪ್ ಲೈನ್ ಲ್ಯಾಪ್‌ಟಾಪ್ ಆಗಿದೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ ಬುಕ್ 3 ಅಲ್ಟ್ರಾ ಲ್ಯಾಪ್‌ಟಾಪ್ ಎರಡು ಪ್ರೊಸೆಸರ್‌ಗಳಲ್ಲಿ ಲಭ್ಯವಿದೆ. ಇದು 13 ನೇ ತಲೆಮಾರಿನ ಇಂಟೆಲ್ ಕೋರ್ i7 ಮತ್ತು ಇಂಟೆಲ್ ಕೋರ್ i9 ನೊಂದಿಗೆ ಮೀಸಲಾದ ಗ್ರಾಫಿಕ್ಸ್ ಕಾರ್ಡ್‌ನ ಆಯ್ಕೆಯನ್ನು ಹೊಂದಿದೆ. ಅದೇ ಸರೀತಿಯಲ್ಲಿ, 13 ನೇ ತಲೆಮಾರಿನ ಇಂಟೆಲ್ ಕೋರ್ i7 ಪ್ರೊಸೆಸರ್ ಗ್ಯಾಲಕ್ಸಿ ಬುಕ್ 3 ಪ್ರೋ 360 ಮತ್ತು ಗ್ಯಾಲಕ್ಸಿ ಬುಕ್ 3 ಪ್ರೋ ನಲ್ಲಿ ಲಭ್ಯವಿದೆ. ಆದರೆ ಇದು ಇಂಟೆಲ್ ಎಕ್ಸ್ಇ ಗ್ರಾಫಿಕ್ಸ್‌ನೊಂದಿಗೆ ಸಂಯೋಜಿಸಲ್ಪಟ್ಟಿದೆ.