ಸ್ಯಾಮ್ಸಂಗ್ ಗ್ರಾಹಕರಿಗೆ ಕಂಪನಿ ಗುಡ್ನ್ಯೂಸ್ ಅನ್ನು ನೀಡುತ್ತಿದೆ. ಸ್ಯಾಮ್ಸಂಗ್ನ ಹೊಸ ಸ್ಮಾರ್ಟ್ಫೋನ್ ಅನ್ನು ಖರೀದಿ ಮಾಡುವವರಿಗೆ ಇದು ಉತ್ತಮ ಅವಕಾಶ. ಇದೀಗ ಸ್ಯಾಮ್ಸಂಗ್ನ ಬಿಗ್ ಹಾಲಿಡೇ ಸೇಲ್ ಪ್ರಾರಂಭಿಸಿದೆ. ಗ್ರಾಹಕರು ಈ ಸೇಲ್ನಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್22 ಮತ್ತು ಸ್ಯಾಮ್ಸಂಗ್ ಗ್ಯಾಲಕ್ಸಿ ಝಡ್ ಫ್ಲಿಪ್ 4 ಸ್ಮಾರ್ಟ್ಫೋನ್ಗಳನ್ನು ಭಾರೀ ಅಗ್ಗದಲ್ಲಿ ಖರೀದಿಸಬಹುದು. ಸ್ಯಾಮ್ಸಂಗ್ನ ಬಿಗ್ ಹಾಲಿಡೇ ಸೇಲ್ನಲ್ಲಿ ಮಾರಾಟವಾಗುತ್ತಿರುವ 5 ಬೆಸ್ಟ್ ಸ್ಮಾರ್ಟ್ಫೋನ್ಗಳ ಪಟ್ಟಿ ಇಲ್ಲಿದೆ.
ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್22 5ಜಿ ಫೋನ್ ಸ್ಯಾಮ್ಸಂಗ್ನ ಜನಪ್ರಿಯ S ಸರಣಿಯ ಇತ್ತೀಚಿನ ಸ್ಮಾರ್ಟ್ಫೋನ್ ಆಗಿದೆ. ಇದು ಅದ್ಭುತವಾದ 6.2-ಇಂಚಿನ AMOLED ಡಿಸ್ಪ್ಲೇ, ಪ್ರೊಸೆಸರ್ ಮತ್ತು ಸೂಪರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್ಫೋನ್ 64 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಮತ್ತು 12 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಲೆನ್ಸ್ ಅನ್ನು ಹೊಂದಿದೆ. ಇದು 5ಜಿ ನೆಟ್ವರ್ಕ್ ಅನ್ನು ಸಹ ಹೊಂದಿದೆ.
ಅತ್ಯುತ್ತಮ ಸ್ಮಾರ್ಟ್ಫೋನ್ ಬಯಸುವವರಿಗೆಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್22 ಅಲ್ಟ್ರಾ 5ಜಿ ಸ್ಮಾರ್ಟ್ಫೋನ್ ಉತ್ತಮ ಆಯ್ಕೆಯಾಗಿದೆ. ಇದು 6.8-ಇಂಚಿನ AMOLED ಡಿಸ್ಪ್ಲೇ, ಉತ್ತಮ ಪ್ರೊಸೆಸರ್ ಮತ್ತು 108MP ಪ್ರಾಥಮಿಕ ಕ್ಯಾಮೆರಾ ಮತ್ತು 10MP ಟೆಲಿಫೋಟೋ ಲೆನ್ಸ್ ಅನ್ನು ಒಳಗೊಂಡಿರುವ ವಿಶಿಷ್ಟ ಕ್ಯಾಮೆರಾ ಸೆಟಪ್ ಅನ್ನು ಒಳಗೊಂಡಿದೆ. ಇದು 5ಜಿ ನೆಟ್ವರ್ಕ್ ಅನ್ನು ಸಹ ಬೆಂಬಲಿಸುತ್ತದೆ. ಬ್ಯಾಟರಿ ಬ್ಯಾಕಪ್ ಕೂಡ ಉತ್ತಮವಾಗಿದೆ.
ಸ್ಯಾಮ್ಸಂಗ್ ಗ್ಯಾಲಕ್ಸಿ ಝಡ್ ಫ್ಲಿಪ್4 5ಜಿ: ಸ್ಯಾಮ್ಸಂಗ್ ಗ್ಯಾಲಕ್ಸಿ ಝಡ್ ಫ್ಲಿಪ್4 5ಜಿ ಸ್ಮಾರ್ಟ್ಫೋನ್ ಮಡಚಬಹುದಾದ ಫೀಚರ್ ಅನ್ನು ಹೊಂದಿದೆ. ಇದು 6.7-ಇಂಚಿನ ಮುಖ್ಯ AMOLED ಡಿಸ್ಪ್ಲೇ ಮತ್ತು 1.1-ಇಂಚಿನ ಕವರ್ ಡಿಸ್ಪ್ಲೇಯನ್ನು ಹೊಂದಿದೆ. ಫೋನ್ನ ಎರಡೂ ಡಿಸ್ಪ್ಲೇಗಳು ಹೆಚ್ಚಿನ ರೆಸಲ್ಯೂಶನ್ನೊಂದಿಗೆ ಬರುತ್ತವೆ. ಇದು ಗುಣಮಟ್ಟದ ಪ್ರೊಸೆಸರ್, ಟ್ರಿಪಲ್ ಕ್ಯಾಮೆರಾ ಸೆಟಪ್ ಮತ್ತು 5ಜಿ ನೆಟ್ವರ್ಕ್ ಸಾಮರ್ಥ್ಯವನ್ನು ಹೊಂದಿದೆ.
ಸ್ಯಾಮ್ಸಂಗ್ ಗ್ಯಾಲಕ್ಸಿ ಝಡ್ ಫೋಲ್ಡ್3 5ಜಿ: ಸ್ಯಾಮ್ಸಂಗ್ನ ಬಿಗ್ ಹಾಲಿಡೇ ಸೇಲ್ನಲ್ಲಿ ನೀವು ಖರೀದಿಸಬಹುದಾದ ಇನ್ನೊಂದು ವಿಶೇಷವಾದ ಸ್ಮಾರ್ಟ್ಫೋನ್ ಎಂದರೆ ಅದು ಸ್ಯಾಮ್ಸಂಗ್ ಗ್ಯಾಲಕ್ಸಿ ಝಡ್ ಫೋಲ್ಡ್3 5ಜಿ. ಇದು 7.6-ಇಂಚಿನ AMOLED ಡಿಸ್ಪ್ಲೇ ಮತ್ತು 6.2-ಇಂಚಿನ ಕವರ್ ಡಿಸ್ಪ್ಲೇಯನ್ನು ಹೊಂದಿದೆ. ಎರಡೂ ಡಿಸ್ಪ್ಲೇಗಳಲ್ಲಿ ಹೆಚ್ಚಿನ ರೆಸಲ್ಯೂಶನ್ ಸಾಮರ್ಥ್ಯವನ್ನು ನೀಡಲಾಗಿದೆ. ಇನ್ನು ಗುಣಮಟ್ಟದ ಪ್ರೊಸೆಸರ್, ಟ್ರಿಪಲ್ ಕ್ಯಾಮೆರಾ ಸೆಟಪ್ ಮತ್ತು 5ಜಿ ನೆಟ್ವರ್ಕ್ ಸೌಲಭ್ಯವೂ ಇದರಲ್ಲಿದೆ.
ಸ್ಯಾಮ್ಸಂಗ್ ಗ್ಯಾಲಕ್ಸಿ ಝಡ್ ಫೋಲ್ಡ್4 5ಜಿ: ಸ್ಯಾಮ್ಸಂಗ್ನ ಈ ಸ್ಮಾರ್ಟ್ಫೋನ್ ಕಂಪನಿಯ ಫೋಲ್ಡ್ ಸ್ಮಾರ್ಟ್ಫೋನ್ಗಳ ಸೀರಿಸ್ಗೆ ಇತ್ತೀಚಿನ ಸೇರ್ಪಡೆಯಾದ ಮೊಬೈಲ್ ಆಗಿದೆ. ಇದು 7.6-ಇಂಚಿನ AMOLED ಡಿಸ್ಪ್ಲೇ ಮತ್ತು 6.2-ಇಂಚಿನ ಕವರ್ ಡಿಸ್ಪ್ಲೇಯನ್ನು ಹೊಂದಿದೆ. ಫೋನ್ನಲ್ಲಿ ಶ್ರೀಇರುವಂತಹ ಎರಡೂ ಡಿಸ್ಪ್ಲೇಗಳು ಹೆಚ್ಚಿನ ರೆಸಲ್ಯೂಶನ್ನೊಂದಿಗೆ ಬರುತ್ತವೆ. ಇದು ಗುಣಮಟ್ಟದ ಪ್ರೊಸೆಸರ್, ಟ್ರಿಪಲ್ ಕ್ಯಾಮೆರಾ ಸೆಟಪ್ ಮತ್ತು 5ಜಿ ನೆಟ್ವರ್ಕ್ ಸೇವೆಯನ್ನು ನೀಡುತ್ತದೆ.