ಸ್ಯಾಮ್ಸಂಗ್ ಇಂಡಿಯಾ ಇತ್ತೀಚೆಗೆ ಎರಡು ಹೊಸ ಮೊಬೈಲ್ಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಕಂಪನಿ ಈ ಬಾರಿ ಸ್ಯಾಮ್ಸಂಗ್ ಗ್ಯಾಲಕ್ಸಿ ಎ ಸೀರಿಸ್ನಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ ಎ04 ಮತ್ತು ಸ್ಯಾಮ್ಸಂಗ್ ಗ್ಯಾಲಕ್ಸಿ ಎ04ಇ ಸ್ಮಾರ್ಟ್ಫೋನ್ಗಳನ್ನು ಬಿಡುಗಡೆ ಮಾಡಿದೆ. ಈ ಸ್ಮಾರ್ಟ್ಫೋನ್ ಒಂದು 10 ಸಾವಿರ ಮತ್ತು ಇನ್ನೊಂದು 12 ರೂಪಾಯಿಗೆ ಲಭ್ಯವಿದೆ.
ಸ್ಯಾಮ್ಸಂಗ್ ಗ್ಯಾಲಕ್ಸಿ ಬಿಡುಗಡೆ ಮಾಡಿದ ಹೊಸ ಮೊಬೈಲ್ಗಳು 5,000mAh ಬ್ಯಾಟರಿ, ಡ್ಯುಯಲ್ ಕ್ಯಾಮೆರಾ ಸೆಟಪ್ನಂತಹ ವೈಶಿಷ್ಟ್ಯಗಳನ್ನು ಹೊಂದಿವೆ. ಸ್ಯಾಮ್ಸಂಗ್ ಗ್ಯಾಲಕ್ಸಿ ಎ04 ರೂ 11,999 ರಿಂದ ಪ್ರಾರಂಭವಾಗುತ್ತದೆ, ಆದರೆ ಸ್ಯಾಮ್ಸಂಗ್ ಗ್ಯಾಲಕ್ಸಿ ಎ04ಇ ರೂ 9,299 ರಿಂದ ಪ್ರಾರಂಭವಾಗುತ್ತದೆ. ಬಜೆಟ್ ವಿಭಾಗದಲ್ಲಿ ಕಠಿಣ ಬೆಲೆಯ ಪಟ್ಟಿಲ್ಲಿ ಸ್ಪರ್ಧೆ ನೀಡಲು ಈ ಎರಡು ಮೊಬೈಲ್ಗಳನ್ನು ಸ್ಯಾಮ್ಸಂಗ್ ಬಿಡುಗಡೆ ಮಾಡಿದೆ ಎನ್ನಬಹುಸು.
ಸ್ಯಾಮ್ಸಂಗ್ ಗ್ಯಾಲಕ್ಸಿ ಎ04 ಅನ್ನು ಎರಡು ರೂಪಾಂತರಗಳಲ್ಲಿ ಬಿಡುಗಡೆ ಮಾಡಲಾಗಿದೆ. 4GB RAM + 64GB ಸ್ಟೋರೇಜ್ ಹೊಂದಿದ ಸ್ಮಾರ್ಟ್ಫೋನ್ನ ಬೆಲೆ ರೂ 11,999 ಆಗಿದ್ದರೆ, 4GB RAM + 128GB ಸ್ಟೋರೇಜ್ ಹೊಂದಿದ ಸ್ಮಾರ್ಟ್ಫೋನ್ನ ಬೆಲೆ ರೂ 12,999 ಆಗಿದೆ. ಇದೀಗ ಈ ಸ್ಮಾರ್ಟ್ಫೋನ್ಗಳ ಮಾರಾಟ ಆರಂಭವಾಗಿದ್ದು ಇದನ್ನು ಸ್ಯಾಮ್ಸಂಗ್ ಆನ್ಲೈನ್ ಸ್ಟೋರ್, ಆನ್ಲೈನ್ ಪ್ಲಾಟ್ಫಾರ್ಮ್ಗಳು ಮತ್ತು ಆಫ್ಲೈನ್ ಸ್ಟೋರ್ಗಳಲ್ಲಿ ಖರೀದಿಸಬಹುದು. ಇದು ಮಾರುಕಟ್ಟೆಯಲ್ಲಿ ಹಸಿರು, ತಾಮ್ರ, ಕಪ್ಪು ಬಣ್ಣಗಳಲ್ಲಿ ಲಭ್ಯವಿದೆ
ಸ್ಯಾಮ್ಸಂಗ್ ಗ್ಯಾಲಕ್ಸಿ ಎ04 ಸ್ಮಾರ್ಟ್ಫೋನ್ನ ಫೀಚರ್ಸ್ ಬಗ್ಗೆ ಹೇಳುವುದಾದರೆ, ಇದು 60Hz ರಿಫ್ರೆಶ್ ರೇಟ್ನೊಂದಿಗೆ 6.5-ಇಂಚಿನ LCD ಡಿಸ್ಪ್ಲೇಯನ್ನು ಹೊಂದಿದೆ. ಮೀಡಿಯಾಟೆಕ್ ಹೀಲಿಯೋ P35 ಪ್ರೊಸೆಸರ್ನಿಂದ ಕಾರ್ಯನಿರ್ವಹಿಸುತ್ತದೆ. ಇದು ಆಂಡ್ರಾಯ್ಡ್ 12 + OneUI ಕೋರ್ 4.1 ಆಪರೇಟಿಂಗ್ ಸಿಸ್ಟಮ್ ಅನ್ನು ರನ್ ಮಾಡುತ್ತದೆ. 4GB RAM, 128GB ವರೆಗಿನ ಸ್ಟೋರೇಜ್ ಸಾಮರ್ಥ್ಯವನ್ನು ಇದು ಹೊಂದಿದೆ. RAM ವಿಸ್ತರಣೆ ವೈಶಿಷ್ಟ್ಯದೊಂದಿಗೆ ಮತ್ತೊಂದು 4GB RAM ನಷ್ಟು ಹೆಚ್ಚಿಸಬಹುದು. ಒಟ್ಟು 8GB RAM ನೊಂದಿಗೆ ಈ ಮೊಬೈಲ್ ಅನ್ನು ಬಳಸ್ಬಹುದು.
ಸ್ಯಾಮ್ಸಂಗ್ ಗ್ಯಾಲಕ್ಸಿ ಎ04 ಸ್ಮಾರ್ಟ್ಫೋನ್ನ ಕ್ಯಾಮೆರಾ ಫೀಚರ್ಸ್ ಬಗ್ಗೆ ಹೇಳುವುದಾದರೆ, ಇದು 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ಗಳೊಂದಿಗೆ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 5 ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾ ಇದೆ. ಇದು 5,000 mAh ಬ್ಯಾಟರಿಯನ್ನು ಹೊಂದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ವೈ-ಫೈ, 3.5 ಎಂಎಂ ಆಡಿಯೋ ಜ್ಯಾಕ್, ಬ್ಲೂಟೂತ್ 5.0, ಯುಎಸ್ಬಿ ಟೈಪ್ ಸಿ ಪೋರ್ಟ್ ಸೇರಿವೆ.
ಸ್ಯಾಮ್ಸಂಗ್ ಗ್ಯಾಲಕ್ಸಿ ಎ04ಇ ಅನ್ನು ಮೂರು ಸ್ಟೋರೇಜ್ ಆಯ್ಕೆಯನ್ನು ಹೊಂದಿದ ಸ್ಮಾರ್ಟ್ಫೋನ್ಗಳಾಗಿ ಬಿಡುಗಡೆ ಮಾಡಲಾಗಿದೆ. 3GB RAM + 32GB ಸ್ಟೋರೇಜ್ ಹೊಂದಿದ ಸ್ಮಾರ್ಟ್ಫೋನ್ನ ಬೆಲೆ ರೂ 9,299 ಆಗಿದ್ದರೆ, 3GB RAM + 64GB ಸ್ಟೋರೇಜ್ ಹೊಂದಿದ ಸ್ಮಾರ್ಟ್ಫೋನ್ನ ಬೆಲೆ ರೂ 9,999 ಆಗಿದೆ. 4GB RAM + 128GB ಸ್ಟೋರೇಜ್ ಹೊಂದಿದ ಸ್ಮಾರ್ಟ್ಫೋನ್ನ ಬೆಲೆ 11,499 ರೂಪಾಯಿಗೆ ಮಾರಾಟ ಆರಂಭವಾಗಿದೆ. ಇದನ್ನು ಸ್ಯಾಮ್ಸಂಗ್ ಆನ್ಲೈನ್ ಸ್ಟೋರ್, ಆನ್ಲೈನ್ ಪ್ಲಾಟ್ಫಾರ್ಮ್ಗಳು ಮತ್ತು ಆಫ್ಲೈನ್ ಸ್ಟೋರ್ಗಳಲ್ಲಿ ಖರೀದಿಸಬಹುದು. ತಿಳಿ ನೀಲಿ ಮತ್ತು ತಾಮ್ರದ ಬಣ್ಣಗಳಲ್ಲಿ ಖರೀದಿಸಬಹುದಾಗಿದೆ.