ರಾಯಲ್ ಎನ್​ಫೀಲ್ಡ್ ನೂತನ ಬುಲೆಟ್: ಮೈಲೇಜ್ ಬರೋಬ್ಬರಿ 128 ಕಿ.ಮೀ..!

First published:

  • 110

    ರಾಯಲ್ ಎನ್​ಫೀಲ್ಡ್ ನೂತನ ಬುಲೆಟ್: ಮೈಲೇಜ್ ಬರೋಬ್ಬರಿ 128 ಕಿ.ಮೀ..!

    ರಾಯಲ್ ಎನ್‌ಫೀಲ್ಡ್ (Royal Enfield) ಭಾರತದ ಅತ್ಯಂತ ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪೆನಿಗಳಲ್ಲಿ ಒಂದು. ಯುವ ಸಮೂಹದಿಂದ ಹಿಡಿದು ಹಿರಿಯರವರೆಗೂ ಈ ಮೋಟರ್​ಸೈಕಲ್​ ಇಷ್ಟಪಡುತ್ತಾರೆ.

    MORE
    GALLERIES

  • 210

    ರಾಯಲ್ ಎನ್​ಫೀಲ್ಡ್ ನೂತನ ಬುಲೆಟ್: ಮೈಲೇಜ್ ಬರೋಬ್ಬರಿ 128 ಕಿ.ಮೀ..!

    ವಿನ್ಯಾಸ ಹಾಗೂ ಶಕ್ತಿಯುತ ಎಂಜಿನ್ ಮೂಲಕ ಈಗಾಗಲೇ ಭಾರತದ ರಸ್ತೆಗಳಲ್ಲಿ ಸಖತ್ ಸೌಂಡ್ ಮಾಡುತ್ತಿರುವ ರಾಯಲ್ ಎನ್​ಫೀಲ್ಡ್ ಬುಲೆಟ್​ನ ಮತ್ತೊಂದು ಮಾಡೆಲ್ ರೆಡಿಯಾಗಿದೆ.

    MORE
    GALLERIES

  • 310

    ರಾಯಲ್ ಎನ್​ಫೀಲ್ಡ್ ನೂತನ ಬುಲೆಟ್: ಮೈಲೇಜ್ ಬರೋಬ್ಬರಿ 128 ಕಿ.ಮೀ..!

    ಇದರ ಬಹುಮುಖ್ಯ ವಿಶೇಷತೆ ಎಂದರೆ ಎಲೆಕ್ಟ್ರಿಕ್ ಮೋಟರ್​ಸೈಕಲ್ ಎಂಬುದು. ಹೌದು ರಾಯಲ್ ಎನ್​ಫೀಲ್ಡ್​ ಬುಲೆಟ್- ಫೋಟಾನ್ ಹೆಸರಿನ ಈ ಬೈಕ್​ನ್ನು ವಿನ್ಯಾಸಗೊಳಿಸಲಾಗಿದೆ. ಇದೇ ಮಾದರಿಯಲ್ಲಿ  ಮುಂದೆ ಎಲೆಕ್ಟ್ರಿಕ್ ಬುಲೆಟ್ ಭಾರತದ ರಸ್ತೆಗೆ ಇಳಿಯಲಿದೆ ಎನ್ನಲಾಗುತ್ತಿದೆ.

    MORE
    GALLERIES

  • 410

    ರಾಯಲ್ ಎನ್​ಫೀಲ್ಡ್ ನೂತನ ಬುಲೆಟ್: ಮೈಲೇಜ್ ಬರೋಬ್ಬರಿ 128 ಕಿ.ಮೀ..!

    ರಾಯಲ್ ಎನ್​ಫೀಲ್ಡ್ ಫೋಟಾನ್​ನ್ನು ಎಲೆಕ್ಟ್ರಿಕ್ ಕ್ಲಾಸಿಕ್ ಕಾರ್ ಬ್ಯಾಟರಿಗಳ ಮೂಲಕ ಎಲೆಕ್ಟ್ರಿಕ್ ಬೈಕ್​ ಆಗಿ ಪರಿವರ್ತಿಸಲಾಗಿದೆ. ಈ ಪ್ರಯೋಗ ಇದೀಗ ಯಶಸ್ವಿಯಾಗಿದೆ ಎಂದು ವರದಿಯೊಂದು ತಿಳಿಸಿದೆ.

    MORE
    GALLERIES

  • 510

    ರಾಯಲ್ ಎನ್​ಫೀಲ್ಡ್ ನೂತನ ಬುಲೆಟ್: ಮೈಲೇಜ್ ಬರೋಬ್ಬರಿ 128 ಕಿ.ಮೀ..!

    ಇದರ ಎಂಜಿನ್ ಸುಮಾರು 15.6 ಬಿಹೆಚ್‌ಪಿ ಶಕ್ತಿಯನ್ನು ಉತ್ಪಾದಿಸುತ್ತದೆ. ಹಾಗೆಯೇ 14 ಕಿ.ವ್ಯಾ ಹಬ್ ಮೋಟರ್ 300 ಎನ್ಎಂ ಟಾರ್ಕ್ ಉತ್ಪತ್ತಿ ಮಾಡುತ್ತದೆ ಎಂದು ಹೇಳಲಾಗಿದೆ.

    MORE
    GALLERIES

  • 610

    ರಾಯಲ್ ಎನ್​ಫೀಲ್ಡ್ ನೂತನ ಬುಲೆಟ್: ಮೈಲೇಜ್ ಬರೋಬ್ಬರಿ 128 ಕಿ.ಮೀ..!

    ಫೋಟಾನ್‌ ಸಾಮಾನ್ಯ ಬುಲೆಟ್​ನಂತೆಯೇ ಚಲಿಸಲಿದೆ. ಆದರೆ ಇಲ್ಲಿ ಯಾವುದೇ ಶಬ್ದಗಳು ಕೇಳಿ ಬರುವುದಿಲ್ಲ. ಹಾಗೆಯೇ ಇದರ ಮುಂಭಾಗದಲ್ಲಿ 280 ಎಂಎಂ ಮತ್ತು ಹಿಂಭಾಗದಲ್ಲಿ 240 ಎಂಎಂ ವೀಲ್ ಬೇಸ್ ನೀಡಲಾಗಿದೆ.

    MORE
    GALLERIES

  • 710

    ರಾಯಲ್ ಎನ್​ಫೀಲ್ಡ್ ನೂತನ ಬುಲೆಟ್: ಮೈಲೇಜ್ ಬರೋಬ್ಬರಿ 128 ಕಿ.ಮೀ..!

    ರಾಯಲ್ ಎನ್​ಫೀಲ್ಡ್ ಫೋಟಾನ್​ನ ಗರಿಷ್ಠ ವೇಗ ಗಂಟೆಗೆ 112 ಕಿ.ಮೀ. ಸಾಮಾನ್ಯ ಬುಲೆಟ್​ನ ಗರಿಷ್ಠ ವೇಗ ಕೂಡ ಇದರ ಅಸುಪಾಸಿನಲ್ಲಿರುವುದರಿಂದ ಚಾಲಕರಿಗೆ ವ್ಯತ್ಯಾಸ ಕಂಡು ಬರುವುದಿಲ್ಲ.

    MORE
    GALLERIES

  • 810

    ರಾಯಲ್ ಎನ್​ಫೀಲ್ಡ್ ನೂತನ ಬುಲೆಟ್: ಮೈಲೇಜ್ ಬರೋಬ್ಬರಿ 128 ಕಿ.ಮೀ..!

    ಈ ಬುಲೆಟ್​ನ್ನು ಒಂದು ಬಾರಿ ಸಂಪೂರ್ಣ ಚಾರ್ಜ್ ಮಾಡಿದರೆ ಬರೋಬ್ಬರಿ 128 ಕಿ.ಮೀ ದೂರ ಚಲಿಸಬಹುದು.

    MORE
    GALLERIES

  • 910

    ರಾಯಲ್ ಎನ್​ಫೀಲ್ಡ್ ನೂತನ ಬುಲೆಟ್: ಮೈಲೇಜ್ ಬರೋಬ್ಬರಿ 128 ಕಿ.ಮೀ..!

    ಅಂದಹಾಗೆ ರಾಯಲ್ ಎನ್​ಫೀಲ್ಡ್​ನ ಈ ಬುಲೆಟ್​ನ್ನು ಎಲೆಕ್ಟ್ರಿಕ್ ಮೋಟರ್​ಸೈಕಲ್​ ಆಗಿ ಪರಿವರ್ತಿಸಿರುವುದು ಇಂಗ್ಲೆಂಡ್​ನ ಎಲೆಕ್ಟ್ರಿಕ್ ಕ್ಲಾಸಿಕ್ ಕಾರ್ ಕಂಪೆನಿ.

    MORE
    GALLERIES

  • 1010

    ರಾಯಲ್ ಎನ್​ಫೀಲ್ಡ್ ನೂತನ ಬುಲೆಟ್: ಮೈಲೇಜ್ ಬರೋಬ್ಬರಿ 128 ಕಿ.ಮೀ..!

    ಒಂದು ವೇಳೆ ರಾಯಲ್ ಎನ್​ಫೀಲ್ಡ್​ ಇದೇ ಮಾದರಿಯನ್ನು ಫೋಟಾನ್ ಎಲೆಕ್ಟ್ರಿಕ್ ಬುಲೆಟ್​​ ಎಂದು ರಸ್ತೆಗಿಳಿಸಿದರೆ ಈ ಬೈಕ್​ನ ಬೆಲೆ ಸುಮಾರು 18 ರಿಂದ 19 ಲಕ್ಷ ಆಗಿರಲಿದೆ.

    MORE
    GALLERIES