"ಸೆಲ್ಫಿ ಫೋಟೋಗಳ ಹೆಚ್ಚಳ ಮತ್ತು ರೈನೋಪ್ಲ್ಯಾಸ್ಟಿ ವಿನಂತಿಗಳ ಹೆಚ್ಚಳದ ನಡುವೆ ಗಮನಾರ್ಹ ಸಂಬಂಧವಿದೆ, ವಿಶೇಷವಾಗಿ ಕಿರಿಯ ರೋಗಿಗಳಲ್ಲಿ ಇದು ಹೆಚ್ಚಾಗಿ ಕಂಡುಬಂದಿದೆ" ಎಂದು ಅಧ್ಯಯನದ ನೇತೃತ್ವ ವಹಿಸಿರುವ ಡಾ ಬಾರ್ಡಿಯಾ ಅಮಿರ್ಲಾಕ್ ಹೇಳಿದ್ದಾರೆ. ಅಧ್ಯಯನದಲ್ಲಿ, ಸೆಲ್ಫಿಗಳು ಮುಖದ ವೈಶಿಷ್ಟ್ಯಗಳ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದನ್ನು ಅನ್ವೇಷಿಸಲು ತಂಡವು 30 ಸ್ವಯಂಸೇವಕರನ್ನು ನೇಮಿಸಿಕೊಂಡಿದೆ.
ಇದಕ್ಕಾಗಿ ಜನರನ್ನು ಮೂರು ಛಾಯಾಚಿತ್ರಗಳ ಸರಣಿಗಾಗಿ ಕುಳಿತುಗೊಳಿಸಲಾಯಿತು. 12 ಮತ್ತು 18 ಇಂಚುಗಳಷ್ಟು ದೂರದಲ್ಲಿ ಮುಂಭಾಗದ ಕ್ಯಾಮೆರಾವನ್ನು ಬಳಸಿ ಫೋಟೋ ತೆಗೆಸಲಾಯಿತು. ಮತ್ತು ಒಂದನ್ನು ಐದು ಅಡಿ ದೂರದಲ್ಲಿ ಡಿಜಿಟಲ್ ಕ್ಯಾಮೆರಾವನ್ನು ಬಳಸಿ ತೆಗೆಯಲಾಯಿತು. ಎಲ್ಲಾ ಮೂರು ಫೋಟೋಗಳನ್ನು ಒಂದೇ ಸ್ಥಾನದಲ್ಲಿ ತೆಗೆದುಕೊಳ್ಳಲಾಗಿದೆ. ಲೈಟಿಂಗ್ ಹಾಗೆಯೇ ಇತ್ತು. ಚಿತ್ರಗಳು ಹೊರಬಂದ ನಂತರ, ಆಶ್ಚರ್ಯಕರ ಫಲಿತಾಂಶಗಳು ಹೊರಬಂದವು.