ವಾಹನ ಸವಾರರೇ ಇಲ್ಲಿದೆ ನೋಡಿ ದಂಡ ತಪ್ಪಿಸಲು ಡಿಜಿಟಲ್ ಐಡಿಯಾ..!

First published:

  • 115

    ವಾಹನ ಸವಾರರೇ ಇಲ್ಲಿದೆ ನೋಡಿ ದಂಡ ತಪ್ಪಿಸಲು ಡಿಜಿಟಲ್ ಐಡಿಯಾ..!

    ಕೇಂದ್ರ ಸರ್ಕಾರದ ನೂತನ ಮೋಟಾರು ವಾಹನ  ನಿಯಮ ಬಹಳ ಕಟ್ಟುನಿಟ್ಟಿನಿಂದ ಕೂಡಿದೆ ಎಂಬ ಕೂಗು ಜೋರಾಗಿಯೇ ಕೇಳಿಬರುತ್ತಿದೆ. ಈ ಹೊಸ ನಿಯಮದಲ್ಲಿ ದಂಡದ ಮೊತ್ತವನ್ನೂ ಹಲವು ಪಟ್ಟು ಹೆಚ್ಚಿಸಲಾಗಿದೆ.

    MORE
    GALLERIES

  • 215

    ವಾಹನ ಸವಾರರೇ ಇಲ್ಲಿದೆ ನೋಡಿ ದಂಡ ತಪ್ಪಿಸಲು ಡಿಜಿಟಲ್ ಐಡಿಯಾ..!

    ಕನಿಷ್ಠ ದಂಡದ ಮೊತ್ತವು 100 ರೂ.ನಿಂದ 1 ಸಾವಿರ ರೂಪಾಯಿಗೆ ಏರಿಕೆಯಾಗಿದೆ. ಕುಡಿದು ವಾಹನ ಚಲಾಯಿಸುವವರಿಗೆ ಬರೋಬ್ಬರಿ 10 ಸಾವಿರ ರೂ ದಂಡ ವಿಧಿಸಲಾಗುತ್ತಿದೆ. ಹೆಲ್ಮೆಟ್ ರಹಿತ ಚಾಲನೆ ಮಾಡಿದರೆ  1 ಸಾವಿರ ದಂಡ ತೆರೆಬೇಕಾಗುತ್ತದೆ.

    MORE
    GALLERIES

  • 315

    ವಾಹನ ಸವಾರರೇ ಇಲ್ಲಿದೆ ನೋಡಿ ದಂಡ ತಪ್ಪಿಸಲು ಡಿಜಿಟಲ್ ಐಡಿಯಾ..!

    ಇನ್ನು ಲೈಸೆನ್ಸ್ ಇಲ್ಲದೆ ವಾಹನ ಚಾಲನೆ ಮಾಡಿದರೆ  5 ಸಾವಿರ ರೂ, ಇನ್ಶೂರೆನ್ಸ್​ ಇಲ್ಲದೆ ವಾಹನ ಚಾಲನೆ  2 ಸಾವಿರ ರೂ. ಹೀಗೆ ದಂಡದ ಮೊತ್ತ ಏರಿಕೆಯಾಗಿದೆ.

    MORE
    GALLERIES

  • 415

    ವಾಹನ ಸವಾರರೇ ಇಲ್ಲಿದೆ ನೋಡಿ ದಂಡ ತಪ್ಪಿಸಲು ಡಿಜಿಟಲ್ ಐಡಿಯಾ..!

    ಅದರಲ್ಲೂ ಕೆಲ ಸವಾರರಲ್ಲಿ ಎಲ್ಲ ಪರವಾನಗಿ ಮತ್ತು ಪ್ರಮಾಣ ಪತ್ರ ಇದ್ದರೂ ಕೂಡ ಮರೆತು ಬಿಡುತ್ತಾರೆ. ಇದರಿಂದಾಗಿ ದಂಡ ಪಾವತಿಸಲೇಬೇಕಾದ ಪರಿಸ್ಥಿತಿ ತಲೆದೂರುತ್ತದೆ.

    MORE
    GALLERIES

  • 515

    ವಾಹನ ಸವಾರರೇ ಇಲ್ಲಿದೆ ನೋಡಿ ದಂಡ ತಪ್ಪಿಸಲು ಡಿಜಿಟಲ್ ಐಡಿಯಾ..!

    ಆದರೆ ಇದೀಗ ನಿಮ್ಮೆಲ್ಲಾ ದಾಖಲೆಗಳನ್ನು ಡಿಜಿಟಲೀಕರಣ ಮಾಡಿಕೊಳ್ಳಬಹುದು ಎಂದು ಕೇಂದ್ರ ಸಾರಿಗೆ ಸಚಿವಾಲಯ ಸೂಚಿಸಿದೆ.

    MORE
    GALLERIES

  • 615

    ವಾಹನ ಸವಾರರೇ ಇಲ್ಲಿದೆ ನೋಡಿ ದಂಡ ತಪ್ಪಿಸಲು ಡಿಜಿಟಲ್ ಐಡಿಯಾ..!

    ಮಾಹಿತಿ ತಂತ್ರಜ್ಞಾನ ಕಾಯ್ದೆಯ (ಐಟಿ ಆಕ್ಟ್) ನಿಯಮದಂತೆ ಟ್ರಾಫಿಕ್ ಪೊಲೀಸರು ಮತ್ತು ರಾಜ್ಯ ಸರ್ಕಾರಗಳು, ಡ್ರೈವಿಂಗ್ ಲೈಸೆನ್ಸ್, ನೋಂದಣಿ ಪತ್ರ ಮತ್ತು ಇನ್ಶೂರೆನ್ಸ್ ದಾಖಲೆ ಪತ್ರಗಳನ್ನು ಡಿಜಿಲಾಕರ್ ಮೂಲಕ ಪರಿಶೀಲನೆಗೆ ಮುಂದಾಗಬೇಕು ಎಂದು ತಿಳಿಸಿದೆ.

    MORE
    GALLERIES

  • 715

    ವಾಹನ ಸವಾರರೇ ಇಲ್ಲಿದೆ ನೋಡಿ ದಂಡ ತಪ್ಪಿಸಲು ಡಿಜಿಟಲ್ ಐಡಿಯಾ..!

    ಡಿಜಿಲಾಕರ್ ಎಂಬ ಆ್ಯಪ್​ನಲ್ಲಿ ನಿಮ್ಮ ವಾಹನ ಎಲ್ಲಾ ದಾಖಲೆಗಳನ್ನು ಸ್ಟೋರ್ ಮಾಡಿಕೊಳ್ಳಬಹುದು. ಟ್ರಾಫಿಕ್ ಪೊಲೀಸರು ದಾಖಲೆಗಳ ಬಗ್ಗೆ ಕೇಳಿದಾಗ ಮೊಬೈಲ್ ಆ್ಯಪ್​ ಮೂಲಕವೇ ದಾಖಲೆಗಳನ್ನು ತೋರಿಸಬಹುದಾಗಿದೆ.

    MORE
    GALLERIES

  • 815

    ವಾಹನ ಸವಾರರೇ ಇಲ್ಲಿದೆ ನೋಡಿ ದಂಡ ತಪ್ಪಿಸಲು ಡಿಜಿಟಲ್ ಐಡಿಯಾ..!

    ಶೈಕ್ಷಣಿಕ ಪ್ರಮಾಣಪತ್ರಗಳು, ಪಾನ್ ಕಾರ್ಡ್, ವಾಹನ ಚಾಲನಾ ಪರವಾನಿಗೆ (ಡಿಎಲ್), ವಾಹನದ ಮಾಲಿಕತ್ವ ದಾಖಲೆಗಳು(ಆರ್‌ಸಿ), ಆಧಾರ್ ಕಾರ್ಡ್‌ನಂತಹ ಸರಕಾರಿ ಸಂಸ್ಥೆಗಳು ವಿತರಿಸಿರುವ ಗುರುತು ಚೀಟಿಗಳು ಇತ್ಯಾದಿಗಳನ್ನು ಡಿಜಿಲಾಕರ್‌ನಲ್ಲಿ ಸಂಗ್ರಹಿಸಿಡಬಹುದು.

    MORE
    GALLERIES

  • 915

    ವಾಹನ ಸವಾರರೇ ಇಲ್ಲಿದೆ ನೋಡಿ ದಂಡ ತಪ್ಪಿಸಲು ಡಿಜಿಟಲ್ ಐಡಿಯಾ..!

    ಈ ಆ್ಯಪ್​ ಪ್ಲೇಸ್ಟೋರ್ ಹಾಗೂ ಆ್ಯಪಲ್ ಸ್ಟೋರ್​ಗಳಲ್ಲಿ ಲಭ್ಯವಿದ್ದು, ಇದನ್ನು ಡೌನ್​ಲೋಡ್ ಮಾಡಿ ಸೈನ್-ಅಪ್ ಆಗಬೇಕು. ಸೈನ್-ಅಪ್ ಆಗಲು ಮೊದಲು ತಮ್ಮ ಆಧಾರ್ ಕಾರ್ಡ್ ಸಂಖ್ಯೆಯನ್ನು ದಾಖಲಿಸಬೇಕಾಗುತ್ತದೆ. ಈ ಸಂಖ್ಯೆಯನ್ನು ದಾಖಲಿಸಿದ ಬಳಿಕ ಆಧಾರ್‌ನೊಂದಿಗೆ ಜೋಡಣೆಗೊಂಡಿರುವ ಮೊಬೈಲ್ ಸಂಖ್ಯೆಗೆ ಒಂದು ಬಾರಿಯ ಪಾಸ್‌ವರ್ಡ್ (ಒಟಿಪಿ) ರವಾನೆಯಾಗುತ್ತದೆ.

    MORE
    GALLERIES

  • 1015

    ವಾಹನ ಸವಾರರೇ ಇಲ್ಲಿದೆ ನೋಡಿ ದಂಡ ತಪ್ಪಿಸಲು ಡಿಜಿಟಲ್ ಐಡಿಯಾ..!

    ಬಳಿಕ ಈ ಒಟಿಪಿಯನ್ನು ದಾಖಲಿಸಬೇಕು. ಮುಂದಿನ ಲಾಗ್-ಇನ್‌ಗಳಿಗಾಗಿ ಬಳಕೆದಾರರು ಖಾತೆಯನ್ನು ಫೇಸ್‌ಬುಕ್ ಅಥವಾ ಗೂಗಲ್ ಲಾಗ್-ಇನ್‌ನೊಂದಿಗೆ ಸಂಪರ್ಕಿಸುವ ತಮ್ಮ ಪಾಸ್‌ವರ್ಡ್‌ನ್ನು ರೂಪಿಸಿಕೊಳ್ಳಬಹುದು.

    MORE
    GALLERIES

  • 1115

    ವಾಹನ ಸವಾರರೇ ಇಲ್ಲಿದೆ ನೋಡಿ ದಂಡ ತಪ್ಪಿಸಲು ಡಿಜಿಟಲ್ ಐಡಿಯಾ..!

    ಆಧಾರ್ ಜೋಡಣೆ ಪೂರ್ಣಗೊಂಡ ಬಳಿಕ ನೀವು 'ಪುಲ್ ಪಾರ್ಟನರ್ ಡಾಕ್ಯಮೆಂಟ್ಸ್' ವಿಭಾಗವನ್ನು ಪ್ರವೇಶಿಸಬೇಕು. ಇಲ್ಲಿ ಡಿಎಲ್ ಅಪ್​ಲೋಡ್ ಸೇರಿಸದಂತೆ ಹಲವಾರು ಕಾರ್ಯಗಳ ಆಯ್ಕೆಯನ್ನು ಆ್ಯಪ್ ಸೂಚಿಸುತ್ತದೆ.

    MORE
    GALLERIES

  • 1215

    ವಾಹನ ಸವಾರರೇ ಇಲ್ಲಿದೆ ನೋಡಿ ದಂಡ ತಪ್ಪಿಸಲು ಡಿಜಿಟಲ್ ಐಡಿಯಾ..!

    ಇದನ್ನು ಕ್ಲಿಕ್ಕಿಸಿದರೆ ನಿಮ್ಮ ಹಾಲಿ ಡಿಎಲ್ ಸಂಖ್ಯೆಯೊಂದಿಗೆ ತಂದೆಯ ಅಥವಾ ಪತಿಯ ಹೆಸರಿನ ವಿವರಗಳನ್ನು ತುಂಬಲು ತಿಳಿಸುತ್ತದೆ. ಸರಿಯಾದ ಮಾಹಿತಿ ನೀಡಿದರೆ ಕೇವಲ 10 ನಿಮಿಷಗಳಲ್ಲಿ ನಿಮ್ಮ ಡಿಜಿಲಾಕರ್‌ನಲ್ಲಿ ನಿಮ್ಮ ಡಿಎಲ್ ಕಾಣಿಸಿಕೊಳ್ಳುತ್ತದೆ.

    MORE
    GALLERIES

  • 1315

    ವಾಹನ ಸವಾರರೇ ಇಲ್ಲಿದೆ ನೋಡಿ ದಂಡ ತಪ್ಪಿಸಲು ಡಿಜಿಟಲ್ ಐಡಿಯಾ..!

    ಇನ್ನು ಇದೇ ಮಾದರಿಯಲ್ಲಿ ಆಯಾಯ ಆಯ್ಕೆಯಲ್ಲಿ ನಿಮ್ಮ ಆರ್‌ಸಿ, ಪಾನ್‌ಕಾರ್ಡ್ ಇತ್ಯಾದಿ ಡಾಕ್ಯುಮೆಂಟ್​ಗಳನ್ನು ಅಪ್‌ಲೋಡ್ ಮಾಡಹುದು. ಇದಕ್ಕಿಂತ ಮುಂಚಿತವಾಗಿ ನಿಮ್ಮ ದಾಖಲೆಗಳನ್ನು ಮೊಬೈಲ್​ನಲ್ಲಿ ಅಥವಾ ಕಂಪ್ಯೂಟರ್​ನಲ್ಲಿ ಸ್ಕ್ಯಾನ್ ಮಾಡಿಟ್ಟುಕೊಳ್ಳಿ.

    MORE
    GALLERIES

  • 1415

    ವಾಹನ ಸವಾರರೇ ಇಲ್ಲಿದೆ ನೋಡಿ ದಂಡ ತಪ್ಪಿಸಲು ಡಿಜಿಟಲ್ ಐಡಿಯಾ..!

    ಸಂಚಾರ ನಿಯಮಗಳ ಉಲ್ಲಂಘನೆ ಸಂದರ್ಭದಲ್ಲಿ ಪೊಲೀಸರು ತಮ್ಮ ಕೈಲಿರುವ ಎಲೆಕ್ಟ್ರಾನಿಕ್ ಸಾಧನದ ಅಥವಾ ಮೊಬೈಲ್ ಫೋನ್‌ ಮೂಲಕವೇ ಚಾಲಕರ ಮತ್ತು ವಾಹನಗಳ ಎಲೆಕ್ಟ್ರಾನಿಕ್‌ ದಾಖಲೆಗಳ ಕ್ಯೂಆರ್ ಕೋಡ್‌ ಸ್ಕ್ಯಾನ್ ಮಾಡಿ ಪರಿಶೀಲಿಸಬಹುದು.

    MORE
    GALLERIES

  • 1515

    ವಾಹನ ಸವಾರರೇ ಇಲ್ಲಿದೆ ನೋಡಿ ದಂಡ ತಪ್ಪಿಸಲು ಡಿಜಿಟಲ್ ಐಡಿಯಾ..!

    ಇದರಿಂದಾಗಿ ದಾಖಲೆಗಳನ್ನು ಮರೆತು ವಿನಃ ಕಾರಣ ದಂಡ ತೆರುವುದು ತಪ್ಪುತ್ತದೆ. ಅಲ್ಲದೆ ನಿಮ್ಮ ದಾಖಲೆಗಳು ಕಳೆದು ಹೋಗದಂತೆ ಕಾಪಾಡಿಕೊಳ್ಳಬಹುದು.

    MORE
    GALLERIES