ಭಾರತದ ಬಹುದೊಡ್ಡ ವಾಣಿಜ್ಯ ವಹಿವಾಟು ಸಂಸ್ಥೆಯಾದ ರಿಲಾಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ತನ್ನ 42ನೇ ವಾರ್ಷಿಕ ಸಾಮಾನ್ಯ ಸಭೆ ನಡೆಯಿತು. ಈ ವಾರ್ಷಿಕ ಸಭೆಯಲ್ಲಿ ರಿಲಾಯನ್ಸ್ ಸಂಸ್ಥೆಯ ಮುಖ್ಯಸ್ಥ ಮುಖೇಶ್ ಅಂಬಾನಿ ಅವರು ಜಿಯೋ ಪೋನ್-3 ಎಂಬ ಹೊಸ ಮೊಬೈಲ್ ಲೋಕಾರ್ಪಣೆ ಮತ್ತು ಜಿಯೋ ಬ್ರಾಡ್ಬ್ಯಾಂಡ್ ಸೇವೆಯ ಗಿಗಾ ಫೈಬರ್ನ ಬೆಲೆ, ಮತ್ತು ಬ್ರಾಡ್ಬ್ಯಾಂಡ್, ಲ್ಯಾಂಡ್‌ಲೈನ್ ಹಾಗೂ ಟೆಲಿವಿಷನ್ ಸೇವೆಗಳನ್ನು ಒಟ್ಟುಗೂಡಿಸುವ ಮೂರೂ ಪ್ಲೇ ಪ್ಲಾನ್ ಅನ್ನು ಪ್ರಕಟಿಸಿತ್ತು.
699 ರೂ. ಪ್ಲ್ಯಾನ್ನಲ್ಲಿ 100 ಎಂಬಿಪಿಎಸ್ ವೇಗ ಸಿಗಲಿದ್ದು, 8,499 ರೂ. ಪ್ಯಾಕ್ನಲ್ಲಿ 1ಜಿಬಿಪಿಎಸ್ ವರೆಗೆ ವೇಗ ಸಿಗಲಿದೆ. ಎಲ್ಲ ಯೋಜನೆಗಳಿಗೂ ಅನಿಯಮಿತ ಡಾಟಾ ಸೇವೆ ಲಭ್ಯವಿದೆ. ಆದರೆ, ಸೂಚಿಸಿದ್ದಕ್ಕಿಂತ ಹೆಚ್ಚಿನ ಡಾಟಾ ಬಳಸಿದರೆ ಇಂಟರನೆಟ್ ವೇಗ ಕಡಿಮೆ ಆಗಲಿದೆ. ಡಾಟಾ ಜೊತೆಗೆ ಉಚಿತ ಅನಿಯಮಿತ ಕರೆ, ಟಿವಿ ವಿಡಿಯೋ ಕಾಲಿಂಗ್ (ಪ್ರತಿ ವರ್ಷಕ್ಕೆ 1,200 ರೂ.) ಸೇವೆಯೂ ಸಿಗಲಿದೆ.
ಜಿಯೋ ತನ್ನ ನೂತನ ಸೇವೆಯನ್ನು ಲಾಂಚಿಂಗ್ ಆಫರ್ನೊಂದಿಗೆ ಪ್ರಾರಂಭಿಸಲಿದ್ದು, ಇಲ್ಲಿ ಗ್ರಾಹಕರಿಗೆ ಆರಂಭದಲ್ಲೇ ಹಲವು ಕೊಡುಗೆಗಳು ಸಿಗಲಿದೆ. ವೆಲ್‌ಕಮ್ ಆಫರ್ ಅಡಿಯಲ್ಲಿ ಗ್ರಾಹಕರಿಗೆ HD ಅಥವಾ 4K LED TV ಅಥವಾ 4K ಸೆಟ್-ಟಾಪ್ ಬಾಕ್ಸ್ ಉಚಿತವಾಗಿ ದೊರೆಯಲಿದೆ. ಹಾಗೆಯೇ ಲ್ಯಾಂಡ್‌ಲೈನ್ ಸಂಪರ್ಕವೂ ಉಚಿತವಾಗಿರುತ್ತದೆ. ಈ ಖರೀದಿಗೆ ಯಾವುದೇ ಇನ್ಸ್ಟಾಲೇಶನ್ ಶುಲ್ಕವನ್ನು ಪಾವತಿಸಬೇಕಾಗಿಲ್ಲ ಎಂಬುದು ವಿಶೇಷ.