ಏನಿದು ಐಯುಸಿ?: ಐಯುಸಿ ಎಂದರೆ ಇಂಟರ್ ಕನೆಕ್ಟ್ ಯೂಸೇಜ್ ಚಾರ್ಜ್. ಬೇರೆ ನೆಟ್ವರ್ಕ್ಗೆ ಮಾಡುವ ಕರೆಗೆ ವಿಧಿಸಲಾಗುವ ದರ ಇದಾಗಿದೆ. ಅಂದರೆ, ಜಿಯೋ ನೆಟ್ವರ್ಕ್ನಿಂದ ಏರ್ಟೆಲ್ನಂತಹ ಬೇರೆ ನೆಟ್ವರ್ಕ್ಗೆ ಗ್ರಾಹಕರು ಕರೆ ಮಾಡಿದಾಗ, ಆ ನೆಟ್ವರ್ಕ್ಗೆ ಜಿಯೋ ಸಂಸ್ಥೆ ಇಂತಿಷ್ಟು ದರ ಪಾವತಿಸಬೇಕಾಗುತ್ತದೆ. ಈ ದರವೇ ಐಯುಸಿ ಆಗಿದೆ. ಟ್ರಾಯ್ ಸಂಸ್ಥೆಯೇ ಈ ಐಯುಸಿ ದರವನ್ನು ನಿಗದಿ ಮಾಡಿದೆ. 2017ಕ್ಕಿಂತ ಮುಂಚೆ 14 ಪೈಸೆ ಇದ್ದ ಐಯುಸಿ ದರವನ್ನು ಜಿಯೋ 6 ಪೈಸೆಗೆ ಇಳಿಕೆ ಮಾಡಿದೆ.
ಏರ್ಟೆಲ್, ವೊಡಾಫೋನ್ ಸಂಸ್ಥೆಗಳು ಐಯುಸಿ ದರವನ್ನು ತನ್ನ ಗ್ರಾಹಕರಿಂದಲೇ ಭರಿಸುತ್ತದೆ. ಜಿಯೋ ಸಂಸ್ಥೆ ಇದೂವರೆಗೂ ಈ ದರವನ್ನು ತಾನೇ ಭರಿಸುತ್ತಿತ್ತು. ಕಳೆದ ಮೂರು ವರ್ಷದಲ್ಲಿ ಜಿಯೋ ಸಂಸ್ಥೆ ಬರೋಬ್ಬರಿ 13.5 ಸಾವಿರ ಕೋಟಿ ರೂ ಐಯುಸಿ ಮೊತ್ತವನ್ನು ಇತರ ಟೆಲಿಕಾಂ ಆಪರೇಟರುಗಳಿಗೆ ಪಾವತಿ ಮಾಡಿದೆ. ಈ ಹಿನ್ನೆಲೆಯಲ್ಲಿ ಇನ್ಮುಂದಿನ ವೆಚ್ಚವನ್ನು ತನ್ನ ಗ್ರಾಹಕರ ಮೇಲೆ ಹಾಕುವುದು ಅನಿವಾರ್ಯ ಎಂಬುದು ಜಿಯೋ ಹೇಳಿಕೆ.