ಸ್ಮಾರ್ಟ್​ಫೋನ್ ಬಳಕೆದಾರರಿಗೆ ಗುಡ್ ನ್ಯೂಸ್​: ಜಿಯೋ ಪರಿಚಯಿಸಿದೆ ಹೊಸ ಬ್ರೌಸರ್ ಆ್ಯಪ್​

ರಿಲಯನ್ಸ್​ ಜಿಯೋ ಟೆಲಿಕಾಂ ಸಂಸ್ಥೆ ಇದೀಗ ಬ್ರೌಸಿಂಗ್ ಆ್ಯಪ್​ ಅನ್ನು ಪರಿಚಯಿಸಿದೆ. ಈಗಾಗಲೇ ಬಳಕೆಯಲ್ಲಿರುವ ಎಲ್ಲ ಬ್ರೌಸರ್​ಗಿಂತ ನೂತನ ಜಿಯೋ ಆ್ಯಪ್​ ವಿಭಿನ್ನವಾಗಿದೆ ಎಂದು ಸಂಸ್ಥೆ ಹೇಳಿಕೊಂಡಿದೆ.

  • News18
  • |
First published:

  • 16

    ಸ್ಮಾರ್ಟ್​ಫೋನ್ ಬಳಕೆದಾರರಿಗೆ ಗುಡ್ ನ್ಯೂಸ್​: ಜಿಯೋ ಪರಿಚಯಿಸಿದೆ ಹೊಸ ಬ್ರೌಸರ್ ಆ್ಯಪ್​

    ಅಗ್ಗದ ಬೆಲೆಯ ಡೇಟಾ ಸೇವೆಯ ಮೂಲಕ ಕ್ರಾಂತಿ ಸೃಷ್ಟಿಸಿದ್ದ ರಿಲಯನ್ಸ್ ಜಿಯೋ ಟೆಲಿಕಾಂ ಸಂಸ್ಥೆ ಇದೀಗ ಹೊಸ ಅಪ್ಲಿಕೇಶನ್​ನನ್ನು ಪರಿಚಯಿಸಿದೆ. ಈ ನೂತನ ಆ್ಯಪ್ ಆಂಡ್ರಾಯ್ಡ್​ ಸ್ಮಾರ್ಟ್​ಫೋನ್​ ಬಳಕೆದಾರರಿಗೆ ಹೊಸ ಅನುಭವ ನೀಡಲಿದೆ ಎನ್ನಲಾಗಿದೆ. ಈಗಾಗಲೇ ಪ್ಲೇ ಸ್ಟೋರ್​ನಲ್ಲಿ ಅನೇಕ ಬ್ರೌಸರ್​ಗಳಿದ್ದರೂ, ಅವೆಲ್ಲಕ್ಕಿಂತ ಜಿಯೋ ಬ್ರೌಸರ್​ ಹೇಗೆ ಭಿನ್ನ ಮತ್ತು ಹೇಗೆ ಕಾರ್ಯ ನಿರ್ವಹಿಸಲಿದೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

    MORE
    GALLERIES

  • 26

    ಸ್ಮಾರ್ಟ್​ಫೋನ್ ಬಳಕೆದಾರರಿಗೆ ಗುಡ್ ನ್ಯೂಸ್​: ಜಿಯೋ ಪರಿಚಯಿಸಿದೆ ಹೊಸ ಬ್ರೌಸರ್ ಆ್ಯಪ್​

    ಈ ಹೊಸ ಆ್ಯಪ್​ ಬಳಸಲು ನೀವು ಜಿಯೋ ಸಿಮ್​ ಅನ್ನು ಹೊಂದಿರಬೇಕಿಲ್ಲ. ಇದೊಂದು ಆಂಡ್ರಾಯ್ಡ್​ ಅಪ್ಲಿಕೇಶನ್ ಆಗಿದ್ದು, ಯಾರೂ ಬೇಕಾದರೂ ಪ್ಲೇ ಸ್ಟೋರ್​ನಿಂದ ಡೌನ್​ಲೋಡ್ ಮಾಡಿಕೊಳ್ಳಬಹುದು.

    MORE
    GALLERIES

  • 36

    ಸ್ಮಾರ್ಟ್​ಫೋನ್ ಬಳಕೆದಾರರಿಗೆ ಗುಡ್ ನ್ಯೂಸ್​: ಜಿಯೋ ಪರಿಚಯಿಸಿದೆ ಹೊಸ ಬ್ರೌಸರ್ ಆ್ಯಪ್​

    ಜಿಯೋ ಬ್ರೌಸರ್​ ಮುಖ್ಯ ವಿಶೇಷತೆ ಎಂದರೆ ಇದನ್ನು ಭಾರತೀಯ ಬಳಕೆದಾರರನ್ನು ಗಮನದಲ್ಲಿರಿಸಿ ವಿನ್ಯಾಸಗೊಳಿಸಲಾಗಿದೆ. ಹೀಗಾಗಿಯೇ ಇದನ್ನು ನಿಮ್ಮ ಸ್ಥಳೀಯ ಭಾಷೆಯಲ್ಲೇ ಬಳಸಬಹುದಾಗಿದೆ. ಇಂಗ್ಲೀಷ್​ ಅಲ್ಲದೆ, ಗುಜರಾತಿ, ಮರಾಠಿ, ತಮಿಳು, ತೆಲುಗು, ಮಲಯಾಳಂ, ಬೆಂಗಾಳಿ ಮತ್ತು ಕನ್ನಡ ಭಾಷೆಗಳನ್ನು ಈ ಬ್ರೌಸರ್​ನ್ನು ಉಪಯೋಗಿಸಬಹುದು. ಇದಕ್ಕಾಗಿ ಸೆಟ್ಟಿಂಗ್​ಗೆ ಹೋಗಿ ನಿಮಗೆ ಬೇಕಾದ ಭಾಷೆಯನ್ನು ಸುಲಭವಾಗಿ ಬದಲಿಸಿಕೊಳ್ಳಬಹುದು.

    MORE
    GALLERIES

  • 46

    ಸ್ಮಾರ್ಟ್​ಫೋನ್ ಬಳಕೆದಾರರಿಗೆ ಗುಡ್ ನ್ಯೂಸ್​: ಜಿಯೋ ಪರಿಚಯಿಸಿದೆ ಹೊಸ ಬ್ರೌಸರ್ ಆ್ಯಪ್​

    ಇದರ ಸ್ಟೋರೇಜ್ ಪ್ರಮಾಣ ಕೇವಲ  4.8MB ಆಗಿದ್ದು, ಇದನ್ನು ಸುಲಭವಾಗಿ ಡೌನ್​ಲೋಡ್​ ಮಾಡಬಹುದು. ಅಲ್ಲದೆ ಕಡಿಮೆ MB ಇರುವುದರಿಂದ ಫೋನ್ ಸ್ಟೋರೇಜ್​ ಕೂಡ ವ್ಯತ್ಯಯವಾಗುವುದಿಲ್ಲ. ಇಲ್ಲಿ ಇತರೆ ಬ್ರೌಸರ್​ಗಳಂತೆ ಬಳಕೆದಾರರಿಗೆ ಮನರಂಜನೆ, ಕ್ರೀಡೆ, ಸುದ್ದಿ, ತಂತ್ರಜ್ಞಾನ ಮತ್ತು ವೀಡಿಯೊಗಳನ್ನು ವೀಕ್ಷಿಸಲು ನೇರವಾದ ಆಯ್ಕೆಗಳನ್ನು ಕೂಡ ನೀಡಲಾಗಿದೆ.

    MORE
    GALLERIES

  • 56

    ಸ್ಮಾರ್ಟ್​ಫೋನ್ ಬಳಕೆದಾರರಿಗೆ ಗುಡ್ ನ್ಯೂಸ್​: ಜಿಯೋ ಪರಿಚಯಿಸಿದೆ ಹೊಸ ಬ್ರೌಸರ್ ಆ್ಯಪ್​

    ಅಷ್ಟೇ ಅಲ್ಲದೆ ಬ್ರೌಸರ್​ನಲ್ಲಿ ಸ್ಥಳೀಯ ಸುದ್ದಿಗಳ ವಿಭಾಗವನ್ನು ಕೂಡ ಬಳಕೆದಾರರಿಗೆ ನೀಡಲಾಗಿದೆ. ಅವುಗಳನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ನಿಮ್ಮ ಊರಿನ ಸುದ್ದಿ ಸಮಾಚಾರವನ್ನು ತಿಳಿದುಕೊಳ್ಳಬಹುದು. ಜೊತೆಗೆ ಪ್ರೈವೆಸಿ ಮೋಡ್​ ಕೂಡ ಈ ಬ್ರೌಸರ್​ನಲ್ಲಿದೆ. ಇದರೊಂದಿಗೆ ಬ್ರೌಸರ್​ನಲ್ಲಿ ಪೇಜ್​ಗಳನ್ನು ಬುಕ್​ಮಾರ್ಕ್ ಮಾಡಲು ಮತ್ತು ಆ ಲಿಂಕ್​ನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲು ಆಯ್ಕೆ ಇದೆ.

    MORE
    GALLERIES

  • 66

    ಸ್ಮಾರ್ಟ್​ಫೋನ್ ಬಳಕೆದಾರರಿಗೆ ಗುಡ್ ನ್ಯೂಸ್​: ಜಿಯೋ ಪರಿಚಯಿಸಿದೆ ಹೊಸ ಬ್ರೌಸರ್ ಆ್ಯಪ್​

    ಜಿಯೋ ಬ್ರೌಸರ್​ ವಾಯ್ಸ್​ ಇನ್​ಪುಟ್​ ಅನ್ನು ಬೆಂಬಲಿಸಲಿದ್ದು, ಧ್ವನಿಯಾಜ್ಞೆ ಮೂಲಕ ನೀವು ಸರ್ಚ್​ ಮಾಡಿಕೊಳ್ಳಬಹುದು. ಹಾಗೆಯೇ ಟೆಕ್ಸ್ಟ್​ ಗಾತ್ರವನ್ನು ನಿಮಗೆ ಬೇಕಾದ ಹಾಗೆ ಬದಲಿಸಿಕೊಳ್ಳಬಹುದು. ಈ ಬ್ರೌಸರ್​ ಅನ್ನು ಕೇವಲ ಆಂಡ್ರಾಯ್ಡ್​ ಬಳಕೆದಾರರಿಗೆ ಪರಿಚಯಿಸಲಾಗಿದ್ದು, ಮುಂಬರುವ ದಿನಗಳಲ್ಲಿ ಐಒಎಸ್​ ಬಳಕೆದಾರರಿಗೆ  ಈ ಆ್ಯಪ್​ ಸಿಗಲಿದೆ ಎನ್ನಲಾಗಿದೆ.

    MORE
    GALLERIES