Reliance Jio: ಅಗ್ಗದ ಇವೆರಡು ಪ್ರಿಪೇಯ್ಡ್​ ಪ್ಲಾನ್​ಗಳನ್ನ ನಿಲ್ಲಿಸಿದ ರಿಲಯನ್ಸ್ ಜಿಯೋ!

JioPhone prepaid plans: ಕಂಪನಿಯು ಈ ಯೋಜನೆಗಳನ್ನು ಏಕೆ ತೆಗೆದುಹಾಕಿದೆ ಎಂಬುದು ಪ್ರಸ್ತುತ ತಿಳಿದಿಲ್ಲ, ಆದರೆ ಜಿಯೋ ತನ್ನ ಮುಂಬರುವ ಜಿಯೋಫೋನ್ ನೆಕ್ಸ್ಟ್ ಸ್ಮಾರ್ಟ್ ಫೋನ್ ಗಾಗಿ ಈ ಹೊಸ ಯೋಜನೆಗಳನ್ನು ಮತ್ತೆ ಆರಂಭಿಸುವ  ಸಾಧ್ಯತೆಯಿದೆ.

First published:

  • 17

    Reliance Jio: ಅಗ್ಗದ ಇವೆರಡು ಪ್ರಿಪೇಯ್ಡ್​ ಪ್ಲಾನ್​ಗಳನ್ನ ನಿಲ್ಲಿಸಿದ ರಿಲಯನ್ಸ್ ಜಿಯೋ!

    ಟೆಲಿಕಾಂ ಕ್ಷೇತ್ರದಲ್ಲಿ ತನ್ನದೇ ಆತ ಸ್ಥಾನ ಪಡೆದಿರುವ ರಿಲಯನ್ಸ್ ಜಿಯೋ ಗ್ರಾಹಕರಿಗಾಗಿ ಅಧಿಕ ಪ್ರಯೋಜನವಿರುವ ಪ್ಲಾನ್​ಗಳನ್ನು ಪರಿಚಯಿಸುತ್ತಾ ಬಂದಿದೆ. ಆದರೀಗ ಅಗ್ಗದ ಬೆಲೆಯಲ್ಲಿ ಲಭ್ಯವಿರುವ ಎರಡು ಪ್ರಿಪೇಯ್ಡ್ ಜಿಯೋಫೋನ್ ಪ್ಲಾನ್ ಗಳನ್ನು ಸ್ಥಗಿತಗೊಳಿಸಿದೆ.

    MORE
    GALLERIES

  • 27

    Reliance Jio: ಅಗ್ಗದ ಇವೆರಡು ಪ್ರಿಪೇಯ್ಡ್​ ಪ್ಲಾನ್​ಗಳನ್ನ ನಿಲ್ಲಿಸಿದ ರಿಲಯನ್ಸ್ ಜಿಯೋ!

    ಹೌದು. ಟೆಲಿಕಾಂ ಆಪರೇಟರ್ ಜಿಯೋ 39 ರೂ. ಮತ್ತು 69 ರೂ.ವಿನ ಪ್ರಿಪೇಯ್ಡ್ ಜಿಯೋಫೋನ್​ ಪ್ಲಾನ್ ಗಳನ್ನು ತೆಗೆದು ಹಾಕಿರುವಂತೆ ತೋರುತ್ತಿದೆ. ಏಕೆಂದರೆ ಜಿಯೋ ಅಧಿಕೃತ ವೆಬ್ ಸೈಟ್ ಅಥವಾ ಮೈಜಿಯೋ ಆಪ್ ನಲ್ಲಿ ಈ ಯೋಜನೆಗಳು ಕಣ್ಮರೆಯಾಗಿವೆ.

    MORE
    GALLERIES

  • 37

    Reliance Jio: ಅಗ್ಗದ ಇವೆರಡು ಪ್ರಿಪೇಯ್ಡ್​ ಪ್ಲಾನ್​ಗಳನ್ನ ನಿಲ್ಲಿಸಿದ ರಿಲಯನ್ಸ್ ಜಿಯೋ!

    ಕಂಪನಿಯು ಈ ಯೋಜನೆಗಳನ್ನು ಏಕೆ ತೆಗೆದುಹಾಕಿದೆ ಎಂಬುದು ಪ್ರಸ್ತುತ ತಿಳಿದಿಲ್ಲ, ಆದರೆ ಜಿಯೋ ತನ್ನ ಮುಂಬರುವ ಜಿಯೋಫೋನ್ ನೆಕ್ಸ್ಟ್ ಸ್ಮಾರ್ಟ್ ಫೋನ್ ಗಾಗಿ ಈ ಹೊಸ ಯೋಜನೆಗಳನ್ನು ಮತ್ತೆ ಆರಂಭಿಸುವ  ಸಾಧ್ಯತೆಯಿದೆ. ರಿಲಯನ್ಸ್ ಜಿಯೋ ಮತ್ತು ಗೂಗಲ್ ಮಾಡಿದ ಇತ್ತೀಚಿನ ಪ್ರಕಟಣೆಯ ಪ್ರಕಾರ ದೀಪಾವಳಿಗೂ ಮುನ್ನ 4G ಫೋನ್ ಖರೀದಿಗೆ ಲಭ್ಯವಿರುತ್ತದೆ.

    MORE
    GALLERIES

  • 47

    Reliance Jio: ಅಗ್ಗದ ಇವೆರಡು ಪ್ರಿಪೇಯ್ಡ್​ ಪ್ಲಾನ್​ಗಳನ್ನ ನಿಲ್ಲಿಸಿದ ರಿಲಯನ್ಸ್ ಜಿಯೋ!

    ಜಿಯೋ 39 ರೂ ಪ್ರಿಪೇಯ್ಡ್ ಪ್ಲಾನ್ ಮೂಲಕ 100MB ದೈನಂದಿನ ಡೇಟಾ ಹಾಗೂ ಭಾರತದ ಯಾವುದೇ ನೆಟ್ವರ್ಕ್ಗೆ ಅನಿಯಮಿತ ಧ್ವನಿ ಕರೆ ಪ್ರಯೋಜನ ಒದಗಿಸುತ್ತಿತ್ತು. ಈ ಯೋಜನೆಯು 14 ದಿನಗಳ ವ್ಯಾಲಿಡಿಟಿಯೊಂದಿಗೆ 100 SMS ಅನ್ನು ಒಳಗೊಂಡಿತ್ತು.

    MORE
    GALLERIES

  • 57

    Reliance Jio: ಅಗ್ಗದ ಇವೆರಡು ಪ್ರಿಪೇಯ್ಡ್​ ಪ್ಲಾನ್​ಗಳನ್ನ ನಿಲ್ಲಿಸಿದ ರಿಲಯನ್ಸ್ ಜಿಯೋ!

    69 ರೂ.ವಿನ ಪ್ರಿಪೇಯ್ಡ್ ಯೋಜನೆ ಮೂಲಕ 0.5GB ದೈನಂದಿನ ಡೇಟಾ, ಅನಿಯಮಿತ ಧ್ವನಿ ಕರೆ ಮತ್ತು ಒಟ್ಟು 100 SMSಗಳನ್ನು ಈ ಪ್ಲಾನ್ ಒಳಗೊಂಡಿತ್ತು. 14 ದಿನಗಳ ವ್ಯಾಲಿಡಿಟಿ ಅವಧಿಯೊಂದಿಗೆ ಪರಿಚಯಿಸಿತ್ತು.ಆದರೀಗ ಇವೆರಡು ಪ್ಲಾನ್ ಜಿಯೋ ಅಧಿಕೃ ವೆಬ್ಸೈಟ್ನಿಂದ ಕಣ್ಮರೆಯಾಗಿವೆ.

    MORE
    GALLERIES

  • 67

    Reliance Jio: ಅಗ್ಗದ ಇವೆರಡು ಪ್ರಿಪೇಯ್ಡ್​ ಪ್ಲಾನ್​ಗಳನ್ನ ನಿಲ್ಲಿಸಿದ ರಿಲಯನ್ಸ್ ಜಿಯೋ!

    ಮಾತ್ರವಲ್ಲದೆ, ರಿಲಾಯನ್ಸ್ ಜಿಯೋ "1 ಖರೀದಿಸಿ 1 ಉಚಿತ" ಆಫರ್ ಅನ್ನು ತೆಗೆದುಹಾಕಿದೆ, ಈ ಹಿಂದೆ ಜಿಯೋಫೋನ್ ಬಳಕೆದಾರರಿಗೆ ಲಭ್ಯವಿತ್ತು. ಈ ಆಫರ್ ಗ್ರಾಹಕರಿಗೆ ಮೊದಲ ರೀಚಾರ್ಜ್ಗೆ ಪಾವತಿಸಿದ ನಂತರ ಮುಂದಿನ ರೀಚಾರ್ಜ್ ಅನ್ನು ಉಚಿತವಾಗಿ ನೀಡುತ್ತಿತ್ತು.

    MORE
    GALLERIES

  • 77

    Reliance Jio: ಅಗ್ಗದ ಇವೆರಡು ಪ್ರಿಪೇಯ್ಡ್​ ಪ್ಲಾನ್​ಗಳನ್ನ ನಿಲ್ಲಿಸಿದ ರಿಲಯನ್ಸ್ ಜಿಯೋ!

    ಸಾಂಕ್ರಾಮಿಕ ಸಮಯದಲ್ಲಿ ಜಿಯೋಫೋನ್ ಬಳಕೆದಾರರಿಗೆ ಸಹಾಯ ಮಾಡಲೆಂದು ರಿಲಯನ್ಸ್ ಜಿಯೋ ‘‘1 ಖರೀದಿಸಿ 1 ಉಚಿತ" ಆಫರ್ ಪ್ರಾರಂಭಿಸಿತು, ಆದರೆ ಆಫರ್ ಅನ್ನು ಈಗ ಸೈಟ್ನಿಂದ ತೆಗೆದುಹಾಕಲಾಗಿದೆ.

    MORE
    GALLERIES