ರೆಡ್ ಮಿ ನೋಟ್ 11 ಸ್ಮಾರ್ಟ್ಫೋನ್ ಅನ್ನು ರೂ 13,499 ಕ್ಕೆ ಬಿಡುಗಡೆ ಮಾಡಲಾಯಿತು ಮತ್ತು ಪ್ರಸ್ತುತ ಇದು ಮಾರುಕಟ್ರೂಟೆಯಲ್ಲಿ 12,999 ನಲ್ಲಿ ಲಭ್ಯವಿದೆ. ರೆಡ್ ಮಿ ನೋಟ್ 11 ಎಸ್ ಸ್ಮಾರ್ಟ್ಫೋನ್ ಅನ್ನು ರೂ 16,499 ಕ್ಕೆ ಬಿಡುಗಡೆ ಮಾಡಲಾಯಿತು ಮತ್ತು ಪ್ರಸ್ತುತ ರೂ 15,999 ನಲ್ಲಿ ಲಭ್ಯವಿದೆ. Redmi Note 11 ಮತ್ತು Redmi Note 11S ಸ್ಮಾರ್ಟ್ಫೋನ್ಗಳು ಮೂರು ವಿಧಗಳಲ್ಲಿ ಲಭ್ಯವಿದೆ.
ರೆಡ್ ಮಿ ನೋಟ್ 11 ಎಸ್ ಮಾಡೆಲ್ ಬೇಸ್ ವೆರಿಯಂಟ್ 6ಜಿಬಿ + 64ಜಿಬಿ ಸ್ಟೋರೇಜ್ ಹೊಂದಿದ ಸ್ಮಾರ್ಟ್ಫೋನ್ನಲ್ಲಿ ಬೆಲೆಯನ್ನು ರೂ.500 ಕಡಿಮೆ ಮಾಡಲಾಗಿದೆ. ಇದು ಪ್ರಸ್ತುತ ರೂ 15,999 ಗೆ ಲಭ್ಯವಿದೆ. ಈ ಮಾದರಿಯ 6GB+128GB ಸ್ಟೋರೇಜ್ನ ಬೆಲೆ ರೂ.1500 ಕಡಿಮೆಯಾಗಿದೆ. ಇದೂ ಕೂಡ ಈಗ ರೂ.15,999ಕ್ಕೆ ಲಭ್ಯವಿದೆ. ಈ ಮಾದರಿಯ 8GB+128GB ಸ್ಟೋರೇಜ್ನ ಸ್ಮಾರ್ಟ್ಫೋನ್ 16,999 ರೂಪಾಯಿಗಳಲ್ಲಿ ಲಭ್ಯವಿದೆ, ಇದರ ಬೆಲೆಯಲ್ಲಿ 1500 ರೂಪಾಯಿ ಕಡಿಮೆ ಮಾಡಲಾಗಿದೆ.
ರೆಡ್ ಮಿ ನೋಟ್ 11 ಸ್ಮಾರ್ಟ್ಫೋನ್ನ 4GB+64GB ಸ್ಟೋರೇಜ್ ಹೊಂದಿದ ಮೊಬೈಲ್ನ ಬೆಲೆ ರೂ.500 ಕಡಿಮೆ ಮಾಡಲಾಗಿದೆ. ಇದು ಪ್ರಸ್ತುತ ರೂ 12,999 ಗೆ ಮಾರುಕಟ್ಟೆಯಲ್ಲಿ ಲಭ್ಯವಿದೆ. ಈ ಮಾದರಿಯ 6GB+64GB ರೂಪಾಂತರದ ಬೆಲೆಯೂ ರೂ.500 ಕಡಿಮೆಯಾಗಿದೆ. ಈ ಮಾದರಿಯನ್ನು ಈಗ ರೂ.13,499ಕ್ಕೆ ಪಡೆಯಬಹುದು. 6GB+128GB ಈ ಸ್ಮಾರ್ಟ್ಫೋನ್ನ ಪ್ರೀಮಿಯಂ ರೂಪಾಂತರದ ಮೇಲೆ ಕಂಪನಿಯು ರೂ.500 ಬೆಲೆ ಕಡಿಮೆ ಮಾಡಿರುವುದಾಗಿ ಘೋಷಿಸಿದೆ. ಈಗ ಈ ಫೋನ್ ರೂ.14,499ಕ್ಕೆ ಮಾರುಕಟ್ಟೆಯಲ್ಲಿ ಖರೀದಿಸಬಹುದಾಗಿದೆ.
ರೆಡ್ ಮಿ ನೋಟ್ 11 ಸ್ಮಾರ್ಟ್ಫೋನ್ 6.43-ಇಂಚಿನ ಪೂರ್ಣ HD+ ಡಿಸ್ಪ್ಲೇ ಯನ್ನು ಹೊಂದಿದೆ. ಇದು Qualcomm Snapdragon 680 ಪ್ರೊಸೆಸರ್ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು 5,000mAh ಬ್ಯಾಟರಿಯನ್ನು ಹೊಂದಿದ್ದು 33W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಸ್ಮಾರ್ಟ್ಫೋನ್ ಹಿಂಭಾಗದಲ್ಲಿ 50MP ಕ್ವಾಡ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಸೆಲ್ಫಿಗಾಗಿ ಮುಂಭಾಗದಲ್ಲಿ 13MP ಕ್ಯಾಮೆರಾ ಒಳಗೊಂಡಿದೆ. ಈ ಸ್ಮಾರ್ಟ್ಫೋನ್ ಹರೈಸನ್ ಬ್ಲೂ, ಸ್ಪೇಸ್ ಬ್ಲ್ಯಾಕ್ ಮತ್ತು ಸ್ಟಾರ್ಬರ್ಸ್ಟ್ ವೈಟ್ ಎಂಬ ಮೂರು ಬಣ್ಣದ ಆಯ್ಕೆಗಳಲ್ಲಿ ಮಾರುಕಟ್ಟೆಯಲ್ಲಿ ಖರೀದಿಸಬಹುದು.