ಈ ಸ್ಮಾರ್ಟ್ಫೋನ್ನ ವಿಶೇಷತೆಯೆಂದರೆ ಇದು 120 ವ್ಯಾಟ್ ಸೂಪರ್ ಫಾಸ್ಟ್ ಚಾರ್ಜರ್ ಸಾಮರ್ಥ್ಯವನ್ನು ಹ=ಹೊಂದಿದೆ. ಇನ್ನು ಈ ಸ್ಮಾರ್ಟ್ಫೋನ್ ಜೊತೆಗೆ, ಕಂಪೆನಿಯು ಸ್ಕ್ರೀನ್ ಪ್ರೊಟೆಕ್ಟರ್ ಮತ್ತು ಟಿಪಿಯು ಬ್ಯಾಕ್ ಕೇಸ್ ಅನ್ನು ಸಹ ಒದಗಿಸುತ್ತಿದೆ. ಈ ಸ್ಮಾರ್ಟ್ಫೋನ್ 6.7 ಇಂಚಿನ ಡಿಸ್ಪ್ಲೇ ಪೂರ್ಣ ಹೆಚ್ಡಿ ಅಮೋಲ್ಡ್ ಡಿಸ್ಪ್ಲೇ, 120 Hz ರಿಫ್ರೆಶ್ ರೇಟ್, ಮೀಡಿಯಾ ಟೆಕ್ ಡೈಮೆನ್ಶನ್ 1080 ಚಿಪ್ ಸೆಟ್, ಡ್ಯುಯಲ್ ಸ್ಪೀಕರ್ ಸೆಟಪ್ ಮತ್ತು ಇತರ ಫೀಚರ್ಸ್ಗಳನ್ನು ಹೊಂದಿದೆ.
ಈ ಡಿಸ್ಪ್ಲೇಯನ್ನು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ನಿಂದ ರಕ್ಷಿಸಲ್ಪಟ್ಟಿದೆ. ಇನ್ನು ಈ ಸ್ಮಾರ್ಟ್ಫೋನ್ 4980 mAh ಬ್ಯಾಟರಿ ಬ್ಯಾಕಪ್ ಅನ್ನು ಹೊಂದಿದೆ. ಇದು ಕೇವಲ 19 ನಿಮಿಷಗಳಲ್ಲಿ 0 ರಿಂದ 100 ಪ್ರತಿಶತದವರೆಗೆ ಚಾರ್ಜ್ ಮಾಡಬಹುದು. ಇನ್ನು ರೆಡ್ಮಿ 12 ಮತ್ತು ರೆಡ್ಮಿ 12 ಪ್ರೋ ವೇರಿಯಂಟ್ಗಳನ್ನು ಒಂದೇ ಸಮಯದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ವರದಿಗಳು ಹೇಳಿವೆ.
ರೆಡ್ಮಿ ಕಂಪನಿ ಈ ಎರಡೂ ಫೋನ್ಗಳು ಅಮೆಜಾನ್, ರೆಡ್ಮಿ ಪೋರ್ಟಲ್ಗಳು ಮತ್ತು ವಿಜಯ್ ಸೇಲ್ಸ್ ಸ್ಟೋರ್ಗಳಲ್ಲಿ ಮಾರಾಟಕ್ಕೆ ಲಭ್ಯವಿರುತ್ತವೆ. ನೀವು ಐಸಿಐಸಿಐ ಕ್ರೆಡಿಟ್ ಕಾರ್ಡ್ನಲ್ಲಿ ಖರೀದಿಸಿದರೆ, ನೀವು ರೂ.1500 ರಿಯಾಯಿತಿಯನ್ನು ಪಡೆಯಬಹುದು. ರೆಡ್ಮಿ ನೋಟ್ 12 ಪ್ರೋ ಪ್ಲಸ್ 5ಜಿ ಸ್ಮಾರ್ಟ್ಫೋನ್ ಇದೇ ಜನವರಿ 11 ರಂದು ಫ್ಲಿಪ್ಕಾರ್ಟ್ನಲ್ಲೂ ತನ್ನ ಮಾರಾಟವನ್ನು ಪ್ರಾರಂಭಿಸುತ್ತದೆ.
ಈ ರೆಡ್ಮಿ ನೋಟ್ 12 ಪ್ರೋ ಪ್ಲಸ್ ಸ್ಮಾರ್ಟ್ ಫೋನ್ ಅನ್ನು ICICI ಕ್ರೆಡಿಟ್ ಕಾರ್ಡ್ನಲ್ಲಿ ಖರೀದಿಸಿದರೆ, ನೀವು 3000 ರೂಪಾಯಿಗಳ ರಿಯಾಯಿತಿಯನ್ನು ಪಡೆಯಬಹುದು. ಅಂದರೆ ನೀವು 26,999 ರೂಪಾಯಿಗಳಿಗೆ ರೆಡ್ಮಿ ನೋಟ್ 12 ಪ್ರೋ ಸ್ಮಾರ್ಟ್ಫೋನ್ ಅನ್ನು ಹೊಂದಬಹುದು. ಈ ಹೊಸ ಸ್ಮಾರ್ಟ್ಫೋನ್ ಮೂರು ಬಣ್ಣಗಳಲ್ಲಿ ಲಭ್ಯವಿದ್ದು, ಸಂಕ್ರಾಂತಿಯಂದು ಮಾರುಕಟ್ಟೆಯಲ್ಲಿ ಬಿಡುಗಡೆಯಾಗುತ್ತಿದೆ.
ಈ ರೆಡ್ಮಿ ನೋಟ್ 12 ಪ್ರೋ ಪ್ಲಸ್ ಮೊಬೈಲ್ನ ಬೆಲೆ ರೂ.29,999 ರಿಂದ ಪ್ರಾರಂಭವಾಗುತ್ತದೆ. ಇನ್ನು ಈ ಫೋನ್ ಜೊತೆಗೆ, ಶಿಯೋಮಿ ರೆಡ್ಮಿ 12 ಮತ್ತು ರೆಡ್ಮಿ 12 ಪ್ರೋ ಅನ್ನು ಸಹ ಲಾಂಚ್ ಮಾಡಿದೆ. ರೆಡ್ಮಿ ನೋಟ್ 12 ಸ್ಮಾರ್ಟ್ಫೋನ್ನ ಬೆಲೆ ರೂ.17,999 ರಿಂದ ಪ್ರಾರಂಭವಾಗುತ್ತದೆ ಮತ್ತು ರೆಡ್ಮಿ ನೋಟ್ 12 ಪ್ರೋನ ಬೆಲೆ ರೂ.26,999 ರಿಂದ ಪ್ರಾರಂಭವಾಗುತ್ತದ ಎಂದು ಕಂಪೆನಿ ಹೇಳಿದೆ.