Redmi ಕಂಪನಿಯು Redmi 12C ಫೋನ್ ಅನ್ನು ಬಿಡುಗಡೆ ಮಾಡಿದೆ. 50MP ಕ್ಯಾಮೆರಾ ಮತ್ತು 5000mAh ಬ್ಯಾಟರಿಯಂತಹ ವೈಶಿಷ್ಟ್ಯಗಳನ್ನು ಈ ಫೋನ್ನಲ್ಲಿ ನೀಡಲಾಗಿದೆ.
2/ 8
ನೀವೂ ಸಹ ಈ ವರ್ಷ ಹೊಸ ಫೋನ್ ಖರೀದಿಸಲು ಕಾಯುತ್ತಿದ್ದರೆ ಖಂಡಿತ ಈ ಫೋನ್ ಖರೀದಿಸಬಹುದು. ಉತ್ತಮ ಫೀಚರ್ಸ್ ಹೊಂದಿರುವ ಈ ಫೋನಿನ ಬೆಲೆ ಹಾಗೂ ಇನ್ನುಳಿದ ವಿವರಿಗಳಿಗಾಗಿ ಮುಂದೆ ಓದಿ.
3/ 8
ಚೀನಾದ ಬ್ರ್ಯಾಂಡ್ Xiaomi ತನ್ನ ಸಬ್-ಬ್ರಾಂಡ್ Redmi ಅಡಿಯಲ್ಲಿ ಕೈಗೆಟುಕುವ ಬೆಲೆಯಲ್ಲಿ ಸ್ಮಾರ್ಟ್ಫೋನ್ ಅನ್ನು ಬಿಡುಗಡೆ ಮಾಡಿದೆ. ಇದನ್ನು Redmi 12C ಎಂದು ಕರೆಯಲಾಗುತ್ತಿದೆ. Redmi 12C ಈ ವರ್ಷದ ಆರಂಭದಲ್ಲಿ ಬಿಡುಗಡೆಯಾದ Redmi A1 ಸರಣಿಯ ಸ್ಮಾರ್ಟ್ಫೋನ್ಗಳಿಗೆ ಸ್ವಲ್ಪಮಟ್ಟಿಗೆ ಹೋಲುತ್ತದೆ
4/ 8
ಕಡಿಮೆ ಬೆಲೆಯಲ್ಲಿ ಫೋನ್ನಲ್ಲಿ ಉತ್ತಮ ವಿಶೇಷಣಗಳನ್ನು ಕಾಣಬಹುದು. ಹ್ಯಾಂಡ್ಸೆಟ್ ದೊಡ್ಡ 6.71-ಇಂಚಿನ ಡಿಸ್ಪ್ಲೇ, ಹೊಂದಿದೆ. 5000mAh ಬ್ಯಾಟರಿ ಮತ್ತು MediaTek Helio G85 SoC ನೊಂದಿಗೆ ಬರುತ್ತದೆ. ಆದ್ದರಿಂದ ಇದು ತುಂಬ ಹೊತ್ತು ಚಾರ್ಜ್ ಹಿಡಿದಿಡುವ ಸಾಮರ್ಥ್ಯ ಹೊಂದಿದೆ.
5/ 8
ಇದು ಉತ್ತಮ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ, ಇದರಲ್ಲಿ ಎರಡು ಕ್ಯಾಮೆರಾಗಳು, ಎಲ್ಇಡಿ ಫ್ಲ್ಯಾಷ್ ಮತ್ತು ಫಿಂಗರ್ಪ್ರಿಂಟ್ಗಳನ್ನು ನೀಡಲಾಗಿದೆ. ನೋಡಲೂ ಸಹ ಈ ಮಾಡೆಲ್ ಸುಂದರವಾಗಿದೆ. ಪೋನ್ನ ಹೊರಗಿನ ಲುಕ್ ಗಮನಿಸುವವರಿಗೆ ಇದು ಇಷ್ಟವಾಗುತ್ತದೆ.
6/ 8
ಬಾಗಿದ ಹಿಂಭಾಗವನ್ನು ಹೊಂದಿದೆ. ಮುಂಭಾಗವು ತೆಳುವಾದ ಮತ್ತು ತುಂಬಾ ಅತ್ಯಾಕರ್ಷಕವಾದ ಲುಕ್ ಹೊಂದಿದೆ. ಫ್ಲಾಟ್ ಡಿಸ್ಪ್ಲೇ ಮತ್ತು ವಿ-ಆಕಾರದ ಅಂಚನ್ನು ಹೊಂದಿದೆ. . 4G ಸ್ಮಾರ್ಟ್ಫೋನ್ 5000mAh ಬ್ಯಾಟರಿಯನ್ನು ಹೊಂದಿದೆ
7/ 8
4GB RAM + 64GB, 4GB RAM + 128GB ಮತ್ತು 6GB RAM + 128GB. ಈ ರೀತಿ ಸ್ಟೋರೇಜ್ ಸ್ಫೇಸ್ ನೀಡಲಾಗಿದೆ. . ಇದರ ಮೂಲ ಬೆಲೆ 8,385. . ಕಂಪನಿಯು ಪ್ರಸ್ತುತ ಚೀನಾದಲ್ಲಿ ಈ ಪೋನ್ ಪರಿಚಯಿಸಿದೆ.
8/ 8
ಛಾಯಾಗ್ರಹಣಕ್ಕಾಗಿ, ಹ್ಯಾಂಡ್ಸೆಟ್ 50MP ಕ್ಯಾಮರಾ ಹೊಂದಿದೆ. ಡ್ಯುಯಲ್-ರಿಯರ್ ಕ್ಯಾಮೆರಾ ಇದರಲ್ಲಿದೆ. ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ ಮುಂಭಾಗದಲ್ಲಿ 5MP ಸ್ನ್ಯಾಪರ್ ಇದೆ.