ಜಿಯೋ ಬಿಡುಗಡೆ ಮಾಡಿದ 222 ರೂಪಾಯಿಯ ಪ್ರಿಪೇಯ್ಡ್ ಡೇಟಾ ಆ್ಯಡ್ ಆನ್ ಪ್ಯಾಕ್ನಲ್ಲಿ ರೀಚಾರ್ಜ್ ಮಾಡಿದರೆ 50GB ಡೇಟಾವನ್ನು ಪಡೆಯಬಹುದು. ಈ ಡೇಟಾ ಪ್ಯಾಕ್ ಅನ್ನು 30 ದಿನಗಳವರೆಗೆ ಬಳಸಬಹುದು. ಆದರೆ ಈ ಯೋಜನೆ ಕಾಲ್ ಮಾಡುವಂತಹ ಪ್ರಯೋಜನಗಳನ್ನು ಒಳಗೊಂಡಿಲ್ಲ. ಡೇಟಾ ಪ್ರಯೋಜನಗಳು ಮಾತ್ರ ಇದರಲ್ಲಿ ಲಭ್ಯವಿದೆ. 50GB ಡೇಟಾವನ್ನು ಬಳಸಿದ ನಂತರ, ನೀವು 64kbps ವೇಗದಲ್ಲಿ ಅನ್ಲಿಮಿಟೆಡ್ ಡೇಟಾವನ್ನು ಬಳಸಬಹುದು.
ರಿಲಯನ್ಸ್ ಜಿಯೋದಿಂದ ಇನ್ನೂ ಹಲವಾರು ಡೇಟಾ ಆ್ಯಡ್ ಆನ್ ಪ್ಯಾಕ್ಗಳಿವೆ. ಜಿಯೋದ ರೂ.181 ಡೇಟಾ ಆ್ಯಡ್ ಆನ್ ಪ್ಲಾನ್ ರೀಚಾರ್ಜ್ ಆಗಿದ್ದರೆ ನೀವು 30GB ಡೇಟಾವನ್ನು ಪಡೆಯಬಹುದು. ಆದರೆ ಇದರ ವ್ಯಾಲಿಡಿಟಿ ಮಾತ್ರ ಕೇವಲ 30 ದಿನಗಳು. ಜಿಯೋ ರೂ.241 ಡೇಟಾ ಆ್ಯಡ್ ಆನ್ ಪ್ಲಾನ್ ರೀಚಾರ್ಜ್ ಮಾಡಿದರೆ 40GB ಡೇಟಾವನ್ನು ಬಳಸಬಹುದು. ಈ ರೀಚಾರ್ಜ್ ಪ್ಲಾನ್ನ ವ್ಯಾಲಿಡಿಟಿ ಕೂಡ 30 ದಿನಗಳವರೆಗೆ ಇರುತ್ತದೆ..
ಜಿಯೋನ ರೂ.301 ಡೇಟಾ ಆ್ಯಡ್ ಆನ್ ಪ್ಲಾನ್ ಅನ್ನು ರೀಚಾರ್ಜ್ ಮಾಡಬಹುದು ಇದು 50GB ಡೇಟಾವನ್ನು ಗ್ರಾಹಕರಿಗೆ ನೀಡುತ್ತದೆ. ಇದರ ವ್ಯಾಲಿಡಿಟಿ 30 ದಿನಗಳವರೆಗೆ ಇರುತ್ತದೆ. ಜಿಯೋದ ರೂ.555 ಡೇಟಾ ಆ್ಯಡ್ ಆನ್ ಪ್ಲಾನ್ ರೀಚಾರ್ಜ್ ಮಾಡಿದರೆ ನೀವು 55GB ಡೇಟಾವನ್ನು ಬಳಸಬಹುದು. ಈ ಯೋಜನೆಯನ್ನು 30 ದಿನಗಳವರೆಗೆ ಬಳಸಬಹುದಾಗಿದೆ. ನೀವು ಜಿಯೋ ರೂ.2878 ಡೇಟಾ ಆ್ಯಡ್ ಆನ್ ಪ್ಲಾನ್ ಅನ್ನು ರೀಚಾರ್ಜ್ ಮಾಡಿದರೆ, ನೀವು ಪ್ರತಿದಿನ 2GB ಡೇಟಾವನ್ನು ಬಳಸಬಹುದು. ಆದರೆ ಇದರ ವ್ಯಾಲಿಡಿಟಿ ಮಾತ್ರ 365 ದಿನಗಳವರೆಗೆ ಇದೆ.
ಜಿಯೋನ 2998 ರೂಪಾಯಿಯ ಡೇಟಾ ಆಡ್ ಆನ್ ಪ್ಲಾನ್ನೀಬಗ್ವುಗೆ ಹೇಳುವುದಾದರೆ ಇದರಲ್ಲಿ ಪ್ರತಿದಿನ 2.5GB ಡೇಟಾವನ್ನು ಬಳಸಬಹುದು. ಈ ಯೋಜನೆಯ ವ್ಯಾಲಿಡಿಟಿ 365 ದಿನಗಳಾಗಿರುತ್ತದೆ ಇವೆಲ್ಲವೂ ಡೇಟಾ ಆ್ಯಡ್ ಆನ್ ಪ್ಯಾಕ್ಗಳು ಮಾತ್ರ. ಈ ಯೋಜನೆಗಳು ಯಾವುದೇ ಅನ್ಲಿಮಿಟೆಡ್ ಕಾಲ್ ಅಥವಾ ಎಸ್ಎಮ್ಎಸ್ನ ಆಫರ್ಸ್ಗಳನ್ನು ನೀಡುವುದಿಲ್ಲ. ಇದು ಹೆಚ್ಚು ಡೇಟಾ ಅಗತ್ಯವಿರುವವರಿಗೆ ಸಹಕಾರಿಯಾಗಲಿದೆ.
ಜಿಯೋದಿಂದ ರೂ.121 ಡೇಟಾ ವೋಚರ್ ರೀಚಾರ್ಜ್ ಮಾಡಿದರೆ 12GB ಡೇಟಾವನ್ನು ಪಡೆಯಬಹುದಾಗಿದೆ. ಅದೇ ರೀತಿ ಜಿಯೋದ ರೂ.61 ಡೇಟಾ ವೋಚರ್ ರೀಚಾರ್ಜ್ ಮಾಡಿದರೆ 6GB ಡೇಟಾವನ್ನು ಪಡೆಯಬಹುದು. ಹಾಗೇ ರೂ.25 ಡೇಟಾ ವೋಚರ್ ರೀಚಾರ್ಜ್ ಮಾಡಿದರೆ 2GB ಡೇಟಾವನ್ನು ಪಡೆಯಬಹುದಾಗಿದೆ. ಇನ್ನು ಕಡಿಮೆ ಬೆಲೆಯ ಡೇಟಾ ವೋಚರ್ ಎಂದರೆ ಜಿಯೋನ 15 ರೂಪಾಯಿಯದ್ದಾಗಿದೆ ಇದರಲ್ಲಿ 1 ಗಿಬಿ ಡೇಟಾವನ್ನು ಪಡೆಯಬಹುದಾಗಿದೆ.