PUBG Mobile Ban: ಮನನೊಂದು ಆತ್ಮಹತ್ಯೆ ಮಾಡಿಕೊಂಡ ಇಬ್ಬರು ಯುವಕರು!
PUBG Mobile Ban: ಪ್ರೀತಂ ಹಾಲ್ಡರ್ ಎಂಬ 21 ವರ್ಷದ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈತ ಐಟಿಐ ವಿದ್ಯಾರ್ಥಿಯಾಗಿದ್ದು, ಪಶ್ಚಿಮ ಬಂಗಾಳದ ಪುರ್ಬಾ ಲಾಲ್ಪುರ್ ಪ್ರದೇಶದಲ್ಲಿ ವಾಸಿಸುತ್ತಿದ್ದನು. ನಿರಂತರ ಪಬ್ಜಿ ಆಡುತ್ತಿದ್ದನು ಎಂದು ತಿಳಿದುಬಂದಿದೆ.
ಸೆಪ್ಟೆಂಬರ್ 2 ರಂದು ಜನಪ್ರಿಯ ಪ್ಲೇಯರ್ಸ್ ಅನೌನ್ಸ್ ಬ್ಯಾಟಲ್ ಗೇಮ್ (ಪಬ್ಜಿ) ಅನ್ನು ಕೇಂದ್ರ ಸರ್ಕಾರ ಬ್ಯಾನ್ ಮಾಡಿದೆ. ಇದೀಗ ಪಬ್ಜಿ ಬ್ಯಾನ್ ವಿಚಾರಕ್ಕಾಗಿ ಯುವರಿಬ್ಬರು ಆತ್ಮಹ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.
2/ 8
ಪ್ರೀತಂ ಹಾಲ್ಡರ್ ಎಂಬ 21 ವರ್ಷದ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈತ ಐಟಿಐ ವಿದ್ಯಾರ್ಥಿಯಾಗಿದ್ದು, ಪಶ್ಚಿಮ ಬಂಗಾಳದ ಪುರ್ಬಾ ಲಾಲ್ಪುರ್ ಪ್ರದೇಶದಲ್ಲಿ ವಾಸಿಸುತ್ತಿದ್ದನು. ನಿರಂತರ ಪಬ್ಜಿ ಆಡುತ್ತಿದ್ದನು ಎಂದು ತಿಳಿದುಬಂದಿದೆ.
3/ 8
ಪ್ರೀತಂ ಶುಕ್ರವಾರ ಬೆಳಗ್ಗೆ ಉಪಹಾರ ಸೇವಿಸಿ ತನ್ನ ಕೋಣೆಯೊಳಕ್ಕೆ ಹೋಗಿದ್ದಾನೆ. ಒಳಗಿನಿಂದ ಲಾಕ್ ಮಾಡಿಕೊಂಡಿದ್ದಾನೆ. ಮಧ್ಯಾಹ್ನ ವೇಳೆ ಆತನ ತಾಯಿ ಊಟಕ್ಕೆ ಕರೆಯಲು ಹೋದಾಗ ಬಾಗಿಲು ಲಾಕ್ ಮಾಡಿಕೊಂಡಿರುವುದು ಕಂಡು ಬಂದಿದೆ.
4/ 8
ಎಷ್ಟೇ ಜೋರಾಗಿ ಕರೆದರು ಬಾಗಿಲು ತೆರೆಯದಿರುವುದು ಅನುಮಾನ ಬಂದಿದೆ. ನಂತರ ನೆರೆಹೊರೆಯವರ ಸಹಾಯ ಪಡೆದುಕೊಂಡು ಬಾಗಿಲು ಒಡೆದು ಕೋಣೆಯೊಳಕ್ಕೆ ಹೋದಾಗ ಪ್ರೀತಂ ನೇಣು ಬಿಗಿದುಕೊಂಡು ಆತ್ಮಹತ್ಯೆ ಸ್ಥಿತಿಯಲ್ಲಿದ್ದನು.
5/ 8
ಆತನ ತಾಯಿ ಹೇಳುವ ಪ್ರಕಾರ ‘ಪ್ರೀತಂ ಪಬ್ಜಿ ಆಡಲು ಆಗದೆ ನಿರಾಶೆಗೊಂಡಿದ್ದನು. ಸೆಪ್ಟೆಂಬರ್ 2 ರಂದು ಕೇಂದ್ರ ಸರ್ಕಾರ ಪಬ್ಜಿ ಬ್ಯಾನ್ ಮಾಡಿತ್ತು. ಪ್ರೀತಂ ರಾತ್ರಿ ವೇಳೆಯು ಗೇಮ್ ಆಡುತ್ತಿದ್ದ. ಆದರೆ ಬ್ಯಾನ್ ಆದ ನಂತರ ಆಡಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ‘ ಎಂದು ಹೇಳಿದ್ದಾರೆ
6/ 8
ಮತ್ತೊಂದು ಪ್ರಕರಣ ಅಹಮದಾಬಾದ್ನ ಆನಂದ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿವೆ. 16 ವರ್ಷದ ಬಾಲಕ ಪಬ್ಜಿ ಆಡುತ್ತಿದ್ದ ಇದನ್ನು ಕಂಡ ಆತನ ತಂದೆ ಗದರಿಸುತ್ತಾರೆ. ನೊಂದ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.
7/ 8
ಆತ್ಮಹತ್ಯೆ ಮಾಡಿಕೊಂಡಿರುವ ಯುವಕ ಶಾಲಾ ಶಿಕ್ಷಕನ ಮಗನಾಗಿದ್ದು, ಆಗಸ್ಟ್ 31ರಂದು ಮನೆಯಲ್ಲಿ ಇಟ್ಟಿದ್ದ ಕೀಟ ನಾಶಕ ಸೇವಿಸಿ ಆತ್ಮಹತ್ಯೆ ಯತ್ನಿಸಿದ್ದಾನೆ. ತಕ್ಷಣ ಆತನನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯುವಾಗ ದಾರಿ ಮಧ್ಯದಲ್ಲಿ ಕೊನೆಯುಸಿರೆಳೆದಿದ್ದಾನೆ..
8/ 8
ಕೇಂದ್ರ ಸರ್ಕಾರ ಬಾಹ್ಯ ಮತ್ತು ಆಂತರಿಕ ದೃಷ್ಠಿಯಂದಾಗಿ ಟೆನ್ಸೆಂಟ್ ಕಂಪನಿಯ ಪಬ್ಜಿ ಗೇಮ್ ಅನ್ನು ಬ್ಯಾನ್ ಮಾಡಿದೆ. ಅಷ್ಟು ಮಾತ್ರವಲ್ಲದೆ ಪಬ್ಜಿ ಚೀನಾ ಕಂಪೆನಿಯೊಂದಿದೆ ಷೇರು ಹೊಂದಿತ್ತು. ಈ ಕಾರಣಕ್ಕೆ ನಿಷೇಧ ಮಾಡಿದೆ.