Smartphone Rent: ಇನ್ಮುಂದೆ ಬಾಡಿಗೆಗೂ ಸಿಗುತ್ತೆ ಪ್ರೀಮಿಯಂ ಸ್ಮಾರ್ಟ್​ಫೋನ್​ಗಳು!

ಇನ್ಮುಂದೆ ಹೊ ಸ ಸ್ಮಾರ್ಟ್​​ಫೋನ್​ ಬೇಕು ಎನ್ನುವವರು ಖರೀದಿಸ್ಬೇಕೆಂಬ ಕಡ್ಡಾಯವೇ ಇಲ್ಲ. ಬದಲಿಗೆ ಆನ್​ಲೈನ್​ ಪ್ಲಾಟ್​ಫಾರ್ಮ್​ ಮೂಲಕ ಬಾಡಿಗೆಗೂ ಸ್ಮಾರ್ಟ್​​ಫೋನ್​ಗಳನ್ನು ಕೊಳ್ಳಬಹುದು. ಹಾಗಿದ್ರೆ ಬಾಡಿಗೆಗೆ ಸ್ಮಾರ್ಟ್​ಫೋನ್​ಗಳನ್ನು ನೀಡುವ ಪ್ಲಾಟ್​ಫಾರ್ಮ್​ ಯಾವುದು? ಯಾವೆಲ್ಲಾ ಸ್ಮಾರ್ಟ್​​ಫೋನ್​ಗಳು ಲಭ್ಯವಿದೆ ಅನ್ನೋದನ್ನು ಈ ಲೇಖನದ ಮೂಲಕ ತಿಳಿಯಿರಿ.

First published:

  • 19

    Smartphone Rent: ಇನ್ಮುಂದೆ ಬಾಡಿಗೆಗೂ ಸಿಗುತ್ತೆ ಪ್ರೀಮಿಯಂ ಸ್ಮಾರ್ಟ್​ಫೋನ್​ಗಳು!

    ಹೊಸ ಸ್ಮಾರ್ಟ್​​ಫೋನ್​ ಖರೀದಿಸುವ ಪ್ಲ್ಯಾನ್​ನಲ್ಲಿರುವಿಗೆ ಇಲ್ಲಿದೆ ನೋಡಿ ವಿಶೇಷ ಸುದ್ದಿ. ಈ ವಿಷಯ ತಿಳಿದ್ರೆ ನಿಮಗೇ ಶಾಕ್​ ಆಗುತ್ತೆ. ಆ್ಯಪಲ್​, ಸ್ಯಾಮ್​ಸಂಗ್​, ಒಪ್ಪೋ, ವಿವೋನಂತಹ ಪ್ರೀಮಿಯಂ ಸ್ಮಾರ್ಟ್​ಫೋನ್​ಗಳು ಬಾಡಿಗೆಗೆ ಲಭ್ಯವಿದೆ.

    MORE
    GALLERIES

  • 29

    Smartphone Rent: ಇನ್ಮುಂದೆ ಬಾಡಿಗೆಗೂ ಸಿಗುತ್ತೆ ಪ್ರೀಮಿಯಂ ಸ್ಮಾರ್ಟ್​ಫೋನ್​ಗಳು!

    ಇನ್ಮುಂದೆ ಸ್ಮಾರ್ಟ್‌ಫೋನ್‌ಗಳನ್ನು ಬಾಡಿಗೆಗೆ ಪಡೆಯಬಹುದು. ನೀವು ಪ್ರೀಮಿಯಂ ಸ್ಮಾರ್ಟ್ ಫೋನ್ ಖರೀದಿಸುವ ಯೋಚನೆಯಲ್ಲಿದ್ದರೆ, ಹಾಗಾದರೆ ಈ ಫೋನ್ ಬಾಡಿಗೆಯ ಬಗ್ಗೆ ಮಾಹಿತಿ ತಿಳಿದುಕೊಳ್ಳುವುದು ಉತ್ತಮ. ಯಾಕೆಂದರೆ ದುಡ್ಡು ಖರ್ಚು ಮಾಡಿ ಫೋನ್ ಖರೀದಿಸಿದರೆ ತಿಂಗಳೊಳಗೆ ಹಳೆಯದಾಗುತ್ತದೆ. ಇಲ್ಲದಿದ್ದರೆ, ಸಮಯ ಸರಿಯಾಗಿಲ್ಲದಿದ್ದರೆ, ಅದು ಹಾಳಾಗಬಹುದು. ಅಂತವರಿಗೆ ಈ ಆಯ್ಕೆ ಉತ್ತಮವಾಗಿದೆ.

    MORE
    GALLERIES

  • 39

    Smartphone Rent: ಇನ್ಮುಂದೆ ಬಾಡಿಗೆಗೂ ಸಿಗುತ್ತೆ ಪ್ರೀಮಿಯಂ ಸ್ಮಾರ್ಟ್​ಫೋನ್​ಗಳು!

    ಸ್ಮಾರ್ಟ್ ಫೋನ್ ಒಂದುವೇಳೆ ಬಾಡಿಗೆಗೆ ಪಡೆದರೆ, ಎಷ್ಟು ದಿನ ಬೇಕಾದರೂ ಬಳಸಿ ನಂತರ ಹಿಂತಿರುಗಿಸಬಹುದು. ಬಳಿಕ ಮತ್ತೊಂದು ಹೊಸ ಸ್ಮಾರ್ಟ್​​ಫೋನ್​ ಬಾಡಿಗೆಗೆ ಪಡೆಯಬಹುದು. 

    MORE
    GALLERIES

  • 49

    Smartphone Rent: ಇನ್ಮುಂದೆ ಬಾಡಿಗೆಗೂ ಸಿಗುತ್ತೆ ಪ್ರೀಮಿಯಂ ಸ್ಮಾರ್ಟ್​ಫೋನ್​ಗಳು!

    ಹಾಗಿದ್ರೆ ಫೋನ್ ಅನ್ನು ಯಾರು ಬಾಡಿಗೆಗೆ ನೀಡುತ್ತಾರೆ? ನಿಮಗೆ ಅದು ಬೇಕೇ? ಹಾಗಿದ್ರೆ ಇಲ್ಲಿದೆ ನೋಡಿ ಕಂಪ್ಲೀಟ್ ಮಾಹಿತಿ. ರೆಂಟ್ ಮೋಜೋ ಎಂಬ ಆನ್‌ಲೈನ್ ಪ್ಲಾಟ್‌ಫಾರ್ಮ್  ಕೆಲವೊಂದು ಕಂಪೆನಿಯ ಸ್ಮಾರ್ಟ್‌ಫೋನ್‌ಗಳು ಮತ್ತು ಆ್ಯಪಲ್​ ಫೋನ್‌ಗಳನ್ನು ಬಳಕೆದಾರರಿಗೆ ಬಾಡಿಗೆಗೆ ನೀಡುತ್ತದೆ.

    MORE
    GALLERIES

  • 59

    Smartphone Rent: ಇನ್ಮುಂದೆ ಬಾಡಿಗೆಗೂ ಸಿಗುತ್ತೆ ಪ್ರೀಮಿಯಂ ಸ್ಮಾರ್ಟ್​ಫೋನ್​ಗಳು!

    ಈ ಪ್ಲಾಟ್​​ಫಾರ್ಮ್​ ಮೂಲಕ Samsung Galaxy S10 Plus, Apple iPhone XR, Apple iPhone 11 Pro, OnePlus 7, Redmi K20 Pro, Samsung Galaxy Note 10, Apple iPhone XS Max, OnePlus 7 Pro, Apple iPhone X, Oppo F11 Pro, Google Pixel 2 ಸ್ಮಾರ್ಟ್​​ಫೋನ್​ಗಳನ್ನು ನೀವು ಬಾಡಿಗೆಗೆ ಪಡೆಯಬಹುದು.

    MORE
    GALLERIES

  • 69

    Smartphone Rent: ಇನ್ಮುಂದೆ ಬಾಡಿಗೆಗೂ ಸಿಗುತ್ತೆ ಪ್ರೀಮಿಯಂ ಸ್ಮಾರ್ಟ್​ಫೋನ್​ಗಳು!

    ನೀವು ಆಯ್ಕೆ ಮಾಡುವ ಸ್ಮಾರ್ಟ್‌ಫೋನ್‌ನ ಆಧಾರದ ಮೇಲೆ ನಿಮ್ಮ ಮಾಸಿಕ ಬಾಡಿಗೆ ಬೆಲೆ ಕೂಡ ಬದಲಾಗುತ್ತದೆ. ಆದ್ದರಿಂದ ಈ ವಿಷಯವನ್ನು ಮೊದಲು ಗಮನಿಸಿರಬೇಕು. ಉದಾಹರಣೆಗೆ, ನೀವು Redmi K20 ಸ್ಮಾರ್ಟ್​ಫೋನ್​ ಬಾಡಿಗೆಗೆ ಕೊಳ್ಳಲು ಬಯಸಿದರೆ, ತಿಂಗಳಿಗೆ ರೂ. 649 ಪಾವತಿಸಬೇಕು.

    MORE
    GALLERIES

  • 79

    Smartphone Rent: ಇನ್ಮುಂದೆ ಬಾಡಿಗೆಗೂ ಸಿಗುತ್ತೆ ಪ್ರೀಮಿಯಂ ಸ್ಮಾರ್ಟ್​ಫೋನ್​ಗಳು!

    ನೀವು Redmi K20 Pro ಮಾದರಿಯನ್ನು ಬಾಡಿಗೆಗೆ ತೆಗೆದುಕೊಳ್ಳಲು ಬಯಸಿದರೆ ತಿಂಗಳಿಗೆ ರೂ. 829 ಕಟ್ಟಬೇಕು. ಆದರೆ ನೀವು ಮೊದಲೇ ರೂ. 2149 ಠೇವಣಿ ಇಡಬೇಕು. ಅದನ್ನು ಮತ್ತೆ ನಿಮಗೆ ಮರುಪಾವತಿಸಲಾಗುತ್ತದೆ. 12 ತಿಂಗಳ ಬಾಡಿಗೆ ತೆಗೆದುಕೊಂಡರೆ ತಿಂಗಳಿಗೆ ರೂ. 829 ಪಾವತಿಸಬೇಕಾಗುತ್ತದೆ.

    MORE
    GALLERIES

  • 89

    Smartphone Rent: ಇನ್ಮುಂದೆ ಬಾಡಿಗೆಗೂ ಸಿಗುತ್ತೆ ಪ್ರೀಮಿಯಂ ಸ್ಮಾರ್ಟ್​ಫೋನ್​ಗಳು!

    ನೀವು ಆಯ್ಕೆ ಮಾಡುವ ಅವಧಿಯನ್ನು ಅವಲಂಬಿಸಿ ಬಾಡಿಗೆಯೂ ಸಹ ಬದಲಾಗುತ್ತದೆ. ನೀವು iPhone XR ಮಾದರಿಯನ್ನು ಬಾಡಿಗೆಗೆ ತೆಗೆದುಕೊಳ್ಳಲು ಬಯಸಿದರೆ ತಿಂಗಳಿಗೆ ರೂ. 1639 ಪಾವತಿಸಬೇಕಾಗುತ್ತದೆ. ಇದು 12 ತಿಂಗಳವರೆಗೆ ಅನ್ವಯಿಸುತ್ತದೆ. ಡೆಪೋಸಿಟ್​ ಆಗಿ 4249 ರೂಪಾಯಿ ಪಾವತಿಸಬೇಕು.

    MORE
    GALLERIES

  • 99

    Smartphone Rent: ಇನ್ಮುಂದೆ ಬಾಡಿಗೆಗೂ ಸಿಗುತ್ತೆ ಪ್ರೀಮಿಯಂ ಸ್ಮಾರ್ಟ್​ಫೋನ್​ಗಳು!

    ಈ ಪ್ಲಾಟ್‌ಫಾರ್ಮ್‌ನಲ್ಲಿರುವ ಸ್ಮಾರ್ಟ್‌ಫೋನ್‌ಗಳು ಸ್ಟಾಕ್‌ನಿಂದ ಹೊರಗಿರಬಹುದು. ಹಾಗಾಗಿ ನೀವೂ ಸ್ಮಾರ್ಟ್ ಫೋನ್ ಬಾಡಿಗೆಗೆ ಪಡೆಯಬೇಕೆಂದಿದ್ದರೆ ತಡಮಾಡದೆ ನಿಮ್ಮ ಆಯ್ಕೆಯ ಮಾದರಿಯನ್ನು ಆಯ್ಕೆ ಮಾಡಿಕೊಳ್ಳಬಹುದು. ಇಲ್ಲದಿದ್ದರೆ, ಇತರ ಜನರು ಆ ಮಾದರಿಯನ್ನು ಬಾಡಿಗೆಗೆ ಪಡೆಯಬಹುದು. ಆಗ ಅದು ಔಟ್ ಆಫ್ ಸ್ಟಾಕ್ ಆಗಿರುತ್ತದೆ. ಆದ್ದರಿಂದ ಆದಷ್ಟು ಬೇಗ ಸೆಲೆಕ್ಟ್ ಮಾಡಿದ್ರೆ ಉತ್ತಮ.

    MORE
    GALLERIES