ಫೀಚರ್ಸ್: ಪೋಕೋ ಎಕ್ಸ್5 ಸೀರಿಸ್ನ ಫೋನ್ಗಳ ಫೀಚರ್ಸ್ಗಳ ಬಗ್ಗೆ ಈಗಾಗಲೇ ಹಲವು ವೆಬ್ಸೈಟ್ಗಳಲ್ಲಿ ಬಹಿರಂಗಪಡಿಸಲಾಗಿದೆ. ಈ ಸ್ಮಾರ್ಟ್ಫೋನ್ ಇತ್ತೀಚೆಗೆ ಚೀನಾದಲ್ಲಿ ಬಿಡುಗಡೆಯಾದ ನೋಟ್ 12 ಆವೃತ್ತಿಯಂತೆಯೇ ಅದೇ ವೈಶಿಷ್ಟ್ಯಗಳನ್ನು ಹೊಂದಿರುವ ಸಾಧ್ಯತೆಯಿದೆ. ಪೋಕೋ ಎಕ್ಸ್5 ಪ್ರೋ 6.67-ಇಂಚಿನ FHD+ OLED ಡಿಸ್ಪ್ಲೇಯೊಂದಿಗೆ ಬರಬಹುದು. ಇದು 120Hz ಅಡಾಪ್ಟಿವ್ ರಿಫ್ರೆಶ್ ದರ, 1080×2400 ಪಿಕ್ಸೆಲ್ಗಳ ರೆಸಲ್ಯೂಶನ್, HDR10+ ಬೆಂಬಲವನ್ನು ನೀಡುವ ಸಾಧ್ಯತೆಯಿದೆ.
ಕ್ಯಾಮೆರಾ ಫೀಚರ್ಸ್: ಈ ಸ್ಮಾರ್ಟ್ಫೋನ್ನ ಮುಂಭಾಗದಲ್ಲಿ ಸೆಲ್ಫಿಗಾಗಿ 16 ಮೆಗಾಪಿಕ್ಸೆಲ್ ಕ್ಯಾಮೆರಾ ಇರುವ ಸಾಧ್ಯತೆಯಿದೆ. ಜೊತೆಗೆ ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾ ಸೆಟಪ್ನೊಂದಿಗೆ ಬರುತ್ತದೆ ಎಂದು ಹೇಳಲಾಗುತ್ತದೆ. ಇದು 108 ಎಮ್ಪಿ ಪ್ರಾಥಮಿಕ ಕ್ಯಾಮೆರಾ, 8 ಎಮ್ಪಿ ಅಲ್ಟ್ರಾ ವೈಡ್ ಸೆನ್ಸಾರ್ ಮತ್ತು 2ಎಮ್ಪಿ ಮ್ಯಾಕ್ರೋ ಸೆನ್ಸಾರ್ ಅನ್ನು ಹೊಂದಿರುವ ಸಾಧ್ಯತೆಯಿದೆ.
ಪೋಕೋ ಕಂಪನಿಯು ಇತ್ತೀಚೆಗೆ ಸಿ ಸರಣಿಯಿಂದ ಪೋಕೋ ಸಿ50 ಅನ್ನು ಬಿಡುಗಡೆ ಮಾಡಿದೆ. ಈ ಸ್ಮಾರ್ಟ್ಫೋನ್ 2 ರೂಪಾಂತರಗಳಲ್ಲಿ ಬಿಡುಗಡೆ ಮಾಡಲಾಗಿದೆ. ಇನ್ನು ಇದರಲ್ಲಿ 2GB+32GB ರೂಪಾಂತರದ ಬೆಲೆ ರೂ.6,499 ಆಗಿದ್ದರೆ, 3GB+32GB ರೂಪಾಂತರದ ಬೆಲೆ ರೂ.7,299 ಆಗಿದೆ. ಸ್ಮಾರ್ಟ್ಫೋನ್ ಹೆಚ್ಡಿ+ ರೆಸಲ್ಯೂಶನ್ನೊಂದಿಗೆ 6.52-ಇಂಚಿನ ವಾಟರ್-ಡ್ರಾಪ್ ನಾಚ್ ಪ್ಯಾನೆಲ್ನೊಂದಿಗೆ ಬರುತ್ತದೆ.