ಹೊಸ ವರ್ಷದಲ್ಲಿ ಹೊಸ ಸ್ಮಾರ್ಟ್ಫೋನ್ಗಳು ಸಾಲಾಗಿ ಬಿಡುಗಡೆಯಾಗುತ್ತಿವೆ. ಬಜೆಟ್ ಸ್ಮಾರ್ಟ್ಫೋನ್ ಖರೀದಿಸಲು ಬಯಸುವವರಿಗೆ, ಪೋಕೋ ಇಂಡಿಯಾ ಕಳೆದ ವಾರ ರೂ.7,000 ಕ್ಕಿಂತ ಕಡಿಮೆ ಬೆಲೆಯ ಸ್ಮಾರ್ಟ್ಫೋನ್ ಅನ್ನು ಬಿಡುಗಡೆ ಮಾಡಿದೆ. ಪೋಕೋ ಕಂಪೆನಿ ಕಳೆದವಾರ ಪೋಕೋ ಸಿ50 ಸ್ಮಾರ್ಟ್ಫೋನ್ ಅನ್ನು ಪರಿಚಯಿಸಿತು. ಈ ಸ್ಮಾರ್ಟ್ಫೋನ್ ಪೋಕೋ ಸಿ ಸೀರಿಸ್ನ ಅಡಿಯಲ್ಲಿ ಬಿಡುಗಡೆಯಾದ ಈ ವರ್ಷದ ಮೊದಲ ಸ್ಮಾರ್ಟ್ಫೋನ್ ಆಗಿದೆ.
ಜನವರಿ 10 ರಂದು ಮಧ್ಯಾಹ್ನ 12 ಗಂಟೆಗೆ ಈ ಪೋಕೋ ಸಿ50 ಸ್ಮಾರ್ಟ್ಫೋನ್ನ ಫಸ್ಟ್ ಸೇಲ್ ಪ್ರಾರಂಭವಾಗಲಿದೆ. ಇನ್ನು ಈ ಸ್ಮಾರ್ಟ್ಫೋನ್ ಫಸ್ಟ್ ಸೇಲ್ ಪ್ರಸಿದ್ಧ ಇಕಾಮರ್ಸ್ ಕಂಪೆನಿಯಾಗಿರುವ ಫ್ಲಿಪ್ಕಾರ್ಟ್ನಲ್ಲಿ ಆರಂಬಿಸಲಾಗಿದೆ.ಇನ್ನು ಈ ಫೋನ್ ಅನ್ನು ರಾಯಲ್ ಬ್ಲೂ, ಕಂಟ್ರಿ ಗ್ರೀನ್ ಬಣ್ಣಗಳಲ್ಲಿ ಖರೀದಿಸಬಹುದಾಗಿದೆ. ಇನ್ನು ವಿಶೇಷ ಆಫರ್ಸ್ನಲ್ಲಿ ಈ ಸ್ಮಾರ್ಟ್ಫೋನ್ ಅನ್ನು 6,249 ರೂಪಾಯಿಗೆ ಖರೀದಿಸಬಹುದು.
ಪೋಕೋ ಸಿ50 ಸ್ಮಾರ್ಟ್ಫೋನ್ನ ಕ್ಯಾಮೆರಾ ಫೀಚರ್ಸ್; ಪೋಕೋ ಸಿ50 ಸ್ಮಾರ್ಟ್ಫೋನ್ 8-ಮೆಗಾಪಿಕ್ಸೆಲ್ AI ಪ್ರಾಥಮಿಕ ಕ್ಯಾಮೆರಾದೊಂದಿಗೆ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇನ್ನು ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 5 ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾ ಇದೆ. ಮೈಕ್ರೊ ಎಸ್ಡಿ ಕಾರ್ಡ್ನೊಂದಿಗೆ ಸ್ಟೋರೇಜ್ ಅನ್ನು 512 ಜಿಬಿವರೆಗೆ ವಿಸ್ತರಿಸುವ ಅವಕಾಶವಿದೆ.
ಪೋಕೋ ಸಿ50 ಸ್ಮಾರ್ಟ್ಫೋನ್ ಆಂಡ್ರಾಯ್ಡ್ 12 ಗೋ ವರ್ಷನ್ನ ಆಪರೇಟಿಂಗ್ ಸಿಸ್ಟಮ್ನಲ್ಲಿ ಕಾರ್ಯನಿರ್ವಹಿಸುತ್ತದೆ. ಪೋಕೋ ಸಿ50 ಸ್ಮಾರ್ಟ್ಫೋನ್ 5,000mAh ಬ್ಯಾಟರಿಯನ್ನು ಹೊಂದಿದೆ. 10W ವೇಗದ ಚಾರ್ಜಿಂಗ್ ಚಾರ್ಜಿಂಗ್ ಸಾಮರ್ಥ್ಯವನ್ನು ಹೊಂದಿದೆ. ಜೊತೆಗೆ ಯುಎಸ್ಬಿ ಟೈಪ್ ಸಿ ಪೋರ್ಟ್, 3.5 ಎಂಎಂ ಹೆಡ್ಫೋನ್ ಜ್ಯಾಕ್, ವೈಫೈ, ಬ್ಲೂಟೂತ್ 5.0 ನಂತಹ ಆಯ್ಕೆಗಳಿವೆ.