ಶಿಯೋಮಿ X50 ಸ್ಮಾರ್ಟ್ಟಿವಿ ಮೇಲೆ 3500 ರೂಪಾಯಿಯ ರಿಯಾಯಿತಿ ಬರಲಿದೆ. ಈ 50 ಇಂಚಿನ ಸ್ಮಾರ್ಟ್ ಟಿವಿ ಬೆಲೆ ರೂ. 34,999 ಆಗಿದೆ ಇದನ್ನು 31,499 ರೂಪಾಯಿಗೆ ಪಡೆಯಬಹುದು. ಶಿಯೋಮಿ ನೋಟ್ಬುಕ್ ಪ್ರೋ 120 ನಲ್ಲಿ ಸಹ ರೂ. 7500 ರಿಯಾಯಿತಿಯನ್ನು ನೀಡಿದ್ದಾರೆ. ಇದು 12 ಇಂಟೆಲ್ ಎಚ್ ಪ್ರೊಸೆಸರ್ ಹೊಂದಿದೆ. ಇದರ MRP ರೂ. 71,999. ಆದರೆ ಇದನ್ನು ಆಫರ್ನಲ್ಲಿ 64,499 ರೂಪಾಯಿಗೆ ಖರೀದಿಸಬಹುದು.
ಇದಲ್ಲದೆ, ಕಂಪನಿಯು Mi ಸ್ಟೋರ್ ಅಪ್ಲಿಕೇಶನ್ನಲ್ಲಿ ವಿವಿಧ ಗೇಮ್ಸ್ಗಳನ್ನು ನೀಡಿದ್ದಾರೆ. ಇದರಲ್ಲಿ ಕೂಡ ಆಫರ್ಸ್ಗಳನ್ನು ಪಡೆಯಬಹುದು. ಫ್ಯಾನ್ ಫ್ರೆಂಜಿ ಸೇಲ್ ಮಧ್ಯಾಹ್ನ 12 ಗಂಟೆಗೆ ಪ್ರಾರಂಭವಾಗುತ್ತದೆ. ಮೊದಲ 100 ಗ್ರಾಹಕರು ರೂ.1000 ರಿಯಾಯಿತಿಯೊಂದಿಗೆ ಆಯ್ದ ಸಾಧನಗಳನ್ನು ಖರೀದಿಸಬಹುದು. ಅಲ್ಲದೆ, ನೀವು ಪ್ಲೇ ಮತ್ತು ವಿನ್ ಅಡಿಯಲ್ಲಿ ರೆಡ್ಮಿ 11 ಪ್ರೈಮ್ 5ಜಿ, ರೆಡ್ಮಿ ಪ್ಯಾಡ್, ಎಮ್ಐ ವಾಚ್ ಅನ್ನು ಉಚಿತವಾಗಿ ಪಡೆಯಬಹುದು. ಇಂದು ಈ ಗೇಮ್ನಲ್ಲಿ ಸ್ಮಾರ್ಟ್ ಟಿವಿ ಲಭ್ಯವಿದೆ.
ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್ ಹೊಂದಿರುವವರು ಈ ಆಫರ್ನಲ್ಲಿ 5000 ರೂಪಾಯಿಯ ರಿಯಾಯಿತಿ ಪಡೆಯಬಹುದು. ಅಲ್ಲದೆ ಕ್ರೆಡಿಟ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್ ವಹಿವಾಟಿನ ಮೇಲೆ ಹೆಚ್ಡಿಎಫ್ಸಿ ಬ್ಯಾಂಕ್ ಗ್ರಾಹಕರು ರೂ. 1000 ದಷ್ಟು ರಿಯಾಯಿತಿ ಪಡೆಯಬಹುದು. ಅಲ್ಲದೆ, ಎಸ್ಬಿಐ ಗ್ರಾಹಕರು ಸಹ ರೂ. 1000 ರಿಯಾಯಿತಿ ಪಡೆಯಬಹುದು.