ಸಾಮಾನ್ಯವಾಗಿ ನಾವು ಏರ್ ಕೂಲರ್ನಲ್ಲಿ ನೀರನ್ನು ಸುರಿಯುತ್ತೇವೆ. ಆದ್ದರಿಂದ ತಂಪಾದ ಗಾಳಿಯು ಸಹ ಬರುತ್ತದೆ. ಆದರೆ ಟೆಕ್ನಾಲಜಿ ಫ್ಯಾನ್ ಒಂದೇ ಇದ್ದರೆ ಈ ಏರ್ಕೂಲರ್ನ ಅಗತ್ಯನೇ ಇರಲ್ಲ. ಇದೀಗ ಇಂತಹದೇ ಫ್ಯಾನ್ ಒಂದು ಮಾರುಕಟ್ಟೆಯಲ್ಲಿ ಭಾರೀ ಸದ್ದು ಮಾಡುತ್ತಿದೆ. ಓರಿಯಂಟ್ ಎಲೆಕ್ಟ್ರಿಕ್ ಕಂಪನಿಯು ಕ್ಲೌಡ್ 3 ಕೂಲಿಂಗ್ ಫ್ಯಾನ್ ಅನ್ನು ಬಿಡುಗಡೆ ಮಾಡಿದೆ. ಕಂಪೆನಿಯ ಪ್ರಕಾರ, ಈ ಫ್ಯಾನ್ ಕೋಣೆಯ ಉಷ್ಣಾಂಶವನ್ನು 12 ಡಿಗ್ರಿಗಳಷ್ಟು ಕಡಿಮೆ ಮಾಡುತ್ತದೆ. ಈ ಉದ್ದೇಶಕ್ಕಾಗಿ ಈ ಫ್ಯಾನ್ ಕ್ಲೌಡ್‌ಚಿಲ್ ತಂತ್ರಜ್ಞಾನವನ್ನು ಹೊಂದಿದೆ ಎಂದು ಕಂಪೆನಿ ಹೇಳಿದೆ.