Oppo Reno 8T 5G ಸ್ಮಾರ್ಟ್‌ಫೋನ್ Qualcomm Snapdragon 695 ಪ್ರೊಸೆಸರ್‌ನಿಂದ ಚಾಲಿತವಾಗಿದೆ. ಇದು ಕಳೆದ ವರ್ಷ ಜನಪ್ರಿಯವಾಗಿದ್ದ 5G ಪ್ರೊಸೆಸರ್ ಆಗಿದೆ. ಇದಲ್ಲದೆ Realme 10 Pro, Nokia G60, Moto G62, OnePlus Nord CE2 Lite, Poco X4 Pro, Redmi Note 11 Pro+, iCoo Z6, Realme 9 Pro ಮುಂತಾದ ಮೊಬೈಲ್‌ಗಳಲ್ಲಿ ಇದೇ ಪ್ರೊಸೆಸರ್ ಇದೆ. ಆದರೆ ಈ ಎಲ್ಲಾ ಮೊಬೈಲ್ ಗಳು ರೂ.20,000ಕ್ಕಿಂತ ಕಡಿಮೆ ಬೆಲೆಯಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ.
Oppo Reno 8T 5G ಸ್ಮಾರ್ಟ್ಫೋನ್ನ ಕ್ಯಾಮೆರಾ ಫೀಚರ್ಸ್ ಬಗ್ಗೆ ಹೇಳುವುದಾದರೆ, ಇದು 108-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, 2-ಮೆಗಾಪಿಕ್ಸೆಲ್ ವೈಡ್ ಸೆನ್ಸಾರ್, 2-ಮೆಗಾಪಿಕ್ಸೆಲ್ ಮೈಕ್ರೋಸ್ಕೋಪ್ ಲೆನ್ಸ್‌ನೊಂದಿಗೆ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಒಳಗೊಂಡಿವೆ. ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 32-ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾ ಇದೆ.