ಟಿಕ್ಟಾಕ್ನಂತೆಯೇ ಪಬ್ಜಿ ಆ್ಯಪ್ ಬ್ಯಾನ್ ಆಗಬೇಕೆಂಬ ಮಾತುಗಳು ಕೇಳಿಬಂದಿದ್ದವು. ಏಕೆಂದರೆ ಪಬ್ಜಿಯಿಂದ ಸಾಕಷ್ಟು ಅವಾಂತರಗಳು ಸೃಷ್ಠಿಯಾಗಿದ್ದವು. ಊಟ, ನೀರು ಸೇವಿಸದೆ ಪಬ್ಜಿ ಆಡಿ ಪ್ರಾಣ ಕಳೆದ ಘಟನೆ ಭಾರತದಲ್ಲಿ ಬೆಳಕಿಗೆ ಬಂದಿತ್ತು. ಗೇಮ್ಗಾಗಿ ಅಜ್ಜನ ಪೆನ್ಶನ್ ದುಡ್ಡು ಕಾಲಿ ಮಾಡಿದ ಘಟನೆಗಳು ವರದಿಯಾಗಿತ್ತು. ಲಕ್ಷ ಗಟ್ಟಲೆ ಹಣವನ್ನು ಪಬ್ಜಿ ಗೇಮಿಗೆ ವ್ಯಯ ಮಾಡಿದ ಸಂಗತಿಗಳು ಬೆಳಕಿಗೆ ಬಂದಿತ್ತು.
ಗೂಗಲ್ ಪ್ಲೇ ಸ್ಟೋರ್ನಲ್ಲಿ ಸಾಕಷ್ಟು ಆ್ಯಪ್ಗಳು ಸಿಗುತ್ತಿವೆ. ಚೀನಾ ಮೂಲದ ಹಲವು ಆ್ಯಪ್ಗಳು ಕೂಡ ಇದರಲ್ಲಿವೆ. ಹಾಗಾಗಿ ಕೆಲವು ಆ್ಯಪ್ಗಳು ಬಳಕೆದಾರರ ಖಾಸಗಿ ಮಾಹಿತಿಯನ್ನು ಎಗರಿಸುವ ತಂತ್ರಗಾರಿಕೆಯನ್ನು ಹೊಂದಿತ್ತು. ಈ ದೃಷ್ಠಿಯಲ್ಲಿ ಹಲವಾರು ಆ್ಯಪ್ಗಳನ್ನು ಗೂಗಲ್ ತೆಗೆದು ಹಾಕಿತ್ತು. ಅದಾದ ಬಳಿಕ ಮಾಹಿತಿ ಮತ್ತು ತಂತ್ರಜ್ನಾನ ಇಲಾಖೆ ಸುರಕ್ಷಿತವಲ್ಲದ ಕೆಲವು ಆ್ಯಪ್ಗಳನ್ನು ಕಿತ್ತೆಸೆದಿದೆ.