ಒನ್ಪ್ಲಸ್ (OnePlus) ತನ್ನ ಹೊಸ ಸ್ಮಾರ್ಟ್ಫೋನ್ OnePlus Nord 2T ಅನ್ನು ಬಿಡುಗಡೆ ಮಾಡಿದೆ. ಪ್ರಸ್ತುತ, ಈ ಫೋನ್ ಅನ್ನು ಚೀನಾದಲ್ಲಿ ಬಿಡುಗಡೆ ಮಾಡಲಾಗಿದೆ. ಇಂದು ಭಾರತದಲ್ಲಿ ಪರಿಚಯಿಸಲಿದೆ. ನೂತನ OnePlus Nord 2T ಸ್ಮಾರ್ಟ್ಫೋನ್ OnePlus Nord 2 ನ ಅಪ್ಗ್ರೇಡ್ ಆವೃತ್ತಿಯಾಗಿದೆ ಎಂದು ಟೆಕ್ ತಜ್ಞರು ಹೇಳಿದ್ದಾರೆ. ಕಂಪನಿಯು OnePlus Nord CE 2 Lite ಮತ್ತು OnePlus ನಾರ್ಡ್ ಬಡ್ಸ್ ಅನ್ನು ಸಹ ಬಿಡುಗಡೆ ಮಾಡಿದೆ.
OnePlus Nord 2T ಸ್ಮಾರ್ಟ್ಫೋನ್ ಕ್ಯಾಮೆರಾ ಸೆಟಪ್ ಕುರಿತು ಮಾತನಾಡುವುದಾದರೆ, ಈ ಫೋನ್ 50-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾವನ್ನು f / 1.9 ಅಪರ್ಚರ್ ಹೊಂದಿದೆ. ಜೊತೆಗೆ 8 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಕ್ಯಾಮೆರಾ ಮತ್ತು 2 ಮೆಗಾಪಿಕ್ಸೆಲ್ ಮೊನೊಕ್ರೋಮ್ ಶೂಟರ್ ಕ್ಯಾಮೆರಾ ನೀಡಲಾಗಿದೆ. ಸೆಲ್ಫಿ ಮತ್ತು ವೀಡಿಯೊ ಕರೆಗಾಗಿ ಫೋನಿನ ಮುಂಭಾಗದಲ್ಲಿ 32 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ನೀಡಲಾಗಿದೆ.