Ola S1: ಸಂಚಲನ ಸೃಷ್ಟಿಸಿದ ಓಲಾ ಎಲೆಕ್ಟ್ರಿಕ್ ಸ್ಕೂಟರ್, ಒಂದೇ ದಿನದಲ್ಲಿ 600 ಕೋಟಿ ರೂ ವಹಿವಾಟು
Ola e-Scooter | Ola S1 and Ola S1 Pro electric scooters ಮೊದಲ ದಿನವೇ ದಾಖಲೆ ಮಟ್ಟದ ವಾಹಿವಾಟು ನಡೆಸಿದೆ. ಕಳೆದ ಆಗಸ್ಟ್ 15ರಂದು ಬಿಡುಗಡೆಗೊಂಡ ಈ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಸೆಪ್ಟೆಂಬರ್ 15ರಿಂದ ಮಾರಾಟ ಆರಂಭಿಸಿತು. ಒಂದೇ ದಿನದಲ್ಲಿ 600 ಕೋಟಿ ವಹಿವಾಟು ನಡೆಸಿದೆ ಎಂದು ಓಲಾ ಸಿಇಒ ಭವಿಶ್ ಅಗರ್ವಾಲ್ ತಿಳಿಸಿದ್ದಾರೆ.
ಓಲಾ ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ವ್ಯವಹಾರ ಆರಂಭವಾದ 24 ಗಂಟೆಯಲ್ಲಿ ದಾಖಲೆ ವಹಿವಾಟು ನಡೆಸಿದೆ. ಪ್ರತಿ ಸೆಕೆಂಡಿಗೆ ನಾಲ್ಕು ಸ್ಕೂಟರ್ ಮಾರಾಟವಾಗಿದೆ. (image: Ola Electric)
2/ 7
ಓಲಾ ಎಲೆಕ್ಟಿಕ್ ನ ಎರಡು ಸ್ಕೂಟರ್ನಲ್ಲಿ 7 ಇಂಚಿನ ಟಚ್ ಸ್ಕ್ರೀನ್ ಇದೆ. ಓಲಾ ಎಲೆಕ್ಟ್ರಿಕ್ ಸ್ಕೂಟರ್ ವಿತರಣೆ ಅಕ್ಟೋಬರ್ನಿಂದ ಆರಂಭವಾಗಲಿದೆ ಎಂದು ಅವರು ತಿಳಿಸಿದ್ದಾರೆ. (image: Ola Electric)
3/ 7
ಮೊದಲ ದಿನವೇ 600 ಕೋಟಿ ಮೌಲ್ಯದ ಸ್ಕೂಟರ್ಗಳು ಮಾರಾಟವಾಗೊದೆ. ಇದು ದ್ವಿಚಕ್ರಮ ವಾಹನ ಉದ್ಯಮದಲ್ಲೇ ದಾಖಲೆ ಎಂದು ತಿಳಿಸಿದೆ. ಆದರೆ, ಕಂಪನಿ ಎಷ್ಟು ಸ್ಕೂಟರ್ ಮಾರಾಟ ಮಾಡಿದೆ ಎಂಬ ಮಾಹಿತಿಯನ್ನು ಹಂಚಿಕೊಂಡಿಲ್ಲ.(image: Ola Electric)
4/ 7
ಕಂಪನಿಯ ವೆಬ್ಸೈಟ್ ಮೂಲಕ ಓಲಾ ಎಸ್ 1 ಮತ್ತು ಓಲಾ ಎಸ್ 1 ಪ್ರೊ ಸ್ಕೂಟರ್ ಅನ್ನು 20 ಸಾವಿರ ಮುಖಂಡ ಹಣ ಪಾವತಿಸಿ ಬುಕ್ ಮಾಡಬಹುದಾಗಿದೆ. ಅಕ್ಟೋಬರ್ನಲ್ಲಿ ಸ್ಕೂಟರ್ ವಿತರಣೆ ನಡೆಯಲಿದೆ. (image: Ola Electric)
5/ 7
ವಿಶೇಷ ಎಂದರೆ ಓಲಾ ಎಸ್ 1 ಅಥವಾ ಓಲಾ ಎಸ್ 1 ಪ್ರೊ ಎಲೆಕ್ಟ್ರಿಕ್ ಸ್ಕೂಟರ್ಗಳನ್ನು ಬುಕ್ ಮಾಡಿದ ಗ್ರಾಹಕರು ಡೆಲಿವರಿಗೂ ಮುನ್ನ ಯಾವುದೇ ಸಮಯದಲ್ಲಿ ತಮ್ಮ ಬುಕಿಂಗ್ ಅನ್ನು ರದ್ದುಗೊಳಿಸಬಹುದು. (image: Ola Electric)
6/ 7
ಈ ಎಲೆಕ್ಟ್ರಿಕ್ ಸ್ಕೂಟರ್ನ ವಿಶೇಷ ಎಂದರೆ ಇದರಲ್ಲಿ ಎರಡು ಬ್ಯಾಟರಿ ಕಾನ್ಫೀಗರೇಸನ್ ಇದೆ. ವೆನಿಲ್ಲಾ ಓಲಾ ಎಸ್ 1 ನಲ್ಲಿ 2.98kWhr ಬ್ಯಾಟರಿ ಮತ್ತು ಓಲಾ S1 ಪ್ರೊನಲ್ಲಿ 3.97kWhr ಬ್ಯಾಟರಿ ಇದೆ. (image: Ola Electric)
7/ 7
ಓಲಾ ಎಸ್ 1 ಹಳೆ ಶೋ ರೂಂ ಬೆಲೆ 99,999 ರೂ ಆದರೆ, ಓಲಾ ಎಸ್ 1 ಪ್ರೊ ಹಳೆ ಶೋರೂಂ ಬೆಲೆ ರೂ 1,29,999 ಕ್ಕೆ ಖರೀದಿಸಬಹುದು. ಪ್ರತಿ ರಾಜ್ಯದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಇರುವ ಸಬ್ಸಿಡಿಗಳನ್ನು ಸೇರಿಸದೆ ಈ ದರ ಪಟ್ಟಿಯನ್ನು ಮಾಡಲಾಗಿದೆ (image: Ola Electric)