Water Tank Alarm: ಟ್ಯಾಂಕ್ನಿಂದ ನೀರು ಪೋಲಾಗುವ ಮುನ್ನವೇ ಎಚ್ಚರಿಸುತ್ತೆ ಈ ಸಾಧನ! ಇದರ ಬೆಲೆ 140 ರೂಪಾಯಿ
Water Tank Overflow Alarm: ಮಾರುಕಟ್ಟೆಯಲ್ಲಿ ವಾಟರ್ ಟ್ಯಾಂಕ್ ಅಲಾರ್ಮ್ ಇದೆ, ಅದು ಸಂವೇದಕದೊಂದಿಗೆ ಬರುತ್ತದೆ. ಈ ಸಂವೇದಕದ ಸಹಾಯದಿಂದ, ಟ್ಯಾಂಕ್ನಲ್ಲಿ ನೀರು ತುಂಬಿದೆಯೇ ಅಥವಾ ಇಲ್ಲವೇ ಎಂದು ನಿಮಗೆ ತಿಳಿಯುತ್ತದೆ.
ನೀರಿನ ಅಗತ್ಯತೆ ಮತ್ತು ಮಹತ್ವದ ಬಗ್ಗೆ ಎಲ್ಲರಿಗೂ ತಿಳಿದಿದೆ. ಹೀಗಿದ್ದರು ನೀರನ್ನು ಮಿತವಾಗಿ ಬಳಸದೆ ಎಲ್ಲೆಂದರಲ್ಲಿ ಪೋಲು ಮಾಡುವರೇ ಜಾಸ್ತಿ ಇದ್ದಾರೆ. ನಗರ ಪ್ರದೇಶದಲ್ಲಿ ನೀರಿನ ಸಮಸ್ಯೆಯನ್ನು ಎದುರಿಸುವ ಸನ್ನಿವೇಶವನ್ನು ಗಮನಿಸಬಹುದು. ಆದರೆ ಇರುವ ನೀರನ್ನು ಮಿತವಾಗಿ ಬಳಸಿದರೆ ಮುಂದಿನ ದಿನಗಳಲ್ಲಿ ನೀರಿನ ಅಭಾವವಾಗದು.
2/ 8
ಕೆಲವೊಮ್ಮೆ ಟ್ಯಾಂಕ್ಗೆ ನೀರು ತುಂಬುವಾಗ ಗೊತ್ತಿಲ್ಲದೇ ಪೋಲಾಗುತ್ತದೆ. ಇನ್ನು ಕೆಲವೊಮ್ಮೆ ಟ್ಯಾಂಕ್ ತುಂಬಿ ನೀರು ಚೆಲ್ಲುತ್ತಿರುತ್ತದೆ. ಪಂಪ್ ಸಹಾಯದಿಂದ ನೀರು ತುಂಬಿಸುವಾಗ ಹಲವು ಬಾರಿ ಟ್ಯಾಂಕ್ ಯಾವಾಗ ತುಂಬಿದೆ ಎಂದು ಗೊತ್ತಾಗುವುದೇ ಇಲ್ಲ ಹೀಗಾಗಿ ನೀರು ವ್ಯರ್ಥವಾಗುತ್ತದೆ.
3/ 8
ಆದರೆ ಟ್ಯಾಂಕ್ಗೆ ನೀರು ಪೂರ್ತಿಯಾಗಿ ಪೋಲಾಗದಂತೆ ತಡೆಯಲು ಮತ್ತು ಟ್ಯಾಂಕ್ ಭರ್ತಿಯಾಗಿದೆ ಎಂದು ಮೊದಲೇ ಮುನ್ನೆಚ್ಚರಿಸಲು ಸಾಧನವೊಂದಿದೆ. ಅದರ ಸಹಾಯದಿಂದ ಟ್ಯಾಂಕ್ ಪೂರ್ತಿಯಾದರೆ ತಿಳಿಯಬಹುದಾಗಿದೆ. ಅಂದಹಾಗೆಯೇ ಈ ಸಾಧನದ ಬೆಲೆ ಕೇವಲ 139 ರೂ. ಆಗಿದೆ.
4/ 8
ಮಾರುಕಟ್ಟೆಯಲ್ಲಿ ವಾಟರ್ ಟ್ಯಾಂಕ್ ಅಲಾರ್ಮ್ ಇದೆ, ಅದು ಸಂವೇದಕದೊಂದಿಗೆ ಬರುತ್ತದೆ. ಈ ಸಂವೇದಕದ ಸಹಾಯದಿಂದ, ಟ್ಯಾಂಕ್ನಲ್ಲಿ ನೀರು ತುಂಬಿದೆಯೇ ಅಥವಾ ಇಲ್ಲವೇ ಎಂದು ನಿಮಗೆ ತಿಳಿಯುತ್ತದೆ
5/ 8
ಟ್ಯಾಂಕ್ಗೆ ನೀರು ತುಂಬಿ ಭರ್ತಿಯಾಗಲು ಕೆಲವೇ ಹೊತ್ತು ಇರುವಾಗ ಅಲಾರಾಂ ಧ್ವನಿಸುತ್ತದೆ ಮತ್ತು ಪಂಪ್ ಅನ್ನು ಆಫ್ ಮಾಡಲು ಸಾಧ್ಯವಾಗುತ್ತದೆ.
6/ 8
ಆನ್ಲೈನ್ ಮತ್ತು ಆಫ್ಲೈನ್ ಮಾರುಕಟ್ಟೆಗಳಲ್ಲಿ ಹಲವಾರು ರೀತಿಯ ವಾಟರ್ ಟ್ಯಾಂಕ್ ಅಲರಾಂಗಳಿವೆ. ನಿಮಗೆ ಅದರ ಬೆಲೆ ಸುಮಾರು 100 ರೂ.ವಿನಿಂದ 1000 ರೂ.ವಿನವರೆಗೆ ಇರುತ್ತದೆ.
7/ 8
ಗ್ರಾಹಕರಿಗಾಗಿ ಡಿಗ್ವೇ ಪ್ಲ್ಯಾಸ್ಟಿಕ್ ವಾಟರ್ ಟ್ಯಾಂಕ್ ಓವರ್ಫ್ಲೋ ಅಲಾರ್ಮ್ ಮಾರುಕಟ್ಟೆಯಲ್ಲಿದೆ. ಇದನ್ನು Amazon ನಿಂದಲೂ ಖರೀದಿಸಬಹುದು. 499 ರೂ.ವಿನ ಈ ಅಲಾರ್ಮ್ ಪ್ರಸ್ತುತ Amazon ನಲ್ಲಿ 72% ರಷ್ಟು ರಿಯಾಯಿತಿ ಪಡೆದು 139 ರೂ.ಗೆ ಸಿಗುತ್ತದೆ.
8/ 8
ಅಂದಹಾಗೆಯೇ ಇದರಲ್ಲೊಂದು ಸಂವೇದಕ ತಂತಿಯೊರುತ್ತದೆ. ಇದರ ಎಚ್ಚರಿಕೆಯು ನೀರಿನ ಉಳಿತಾಯ ಮಾಡಲು ಸಹಾಯ ಮಾಡುತ್ತದೆ.