ಆನ್ಲೈನ್ ಗೇಮಿಂಗ್ಗಳಲ್ಲಿ ಪಬ್ಜಿ (ಪ್ಲೇಯರ್ಸ್ ಅನೌನ್ ಬ್ಯಾಟಲ್ ಗ್ರೌಂಡ್) ಗೇಮ್ ಭಾರೀ ಜನಪ್ರಿಯತೆಗಳಿಸಿತ್ತು. ಭಾರತದಲ್ಲಿ ಸಾಕಷ್ಟು ಜನರು ಈ ಗೇಮ್ನ ಪ್ರಿಯರಾಗಿದ್ದರು. ದಿನವಿಡಿ ಪಬ್ಜಿ ಗೇಮ್ನಲ್ಲಿ ಕಾಲ ಕಳೆಯುವ ಅನೇಕರಿದ್ದರು.
2/ 8
ಅಷ್ಟು ಮಾತ್ರವಲ್ಲ, ಪಬ್ಜಿ ಗೇಮ್ ವ್ಯಸನಿಗಳು ಇದ್ದಾರೆ ಎಂಬುದು ತಿಳಿದುಬಂತು. ಹೆಚ್ಚಿನ ಯುವಕರು ಪಬ್ಜಿ ಗೇಮ್ ಮೊರೆ ಹೋಗುತ್ತಿದ್ದರು. ಈ ಗೇಮಿಂಗ್ ವ್ಯಸನದಿಂದಾಗಿ ಕೆಲವು ಅಚಾತುರ್ಯ ಘಟನೆಗಳು ಬೆಳಕಿಗೆ ಬಂದವು. ಹಾಗಾಗಿ ಪಬ್ಜಿ ಬ್ಯಾನ್ ಆಗಬೇಕು ಎಂಬ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ ಕೇಳಿಬರುತ್ತಿತ್ತು.
3/ 8
ಈ ಎಲ್ಲಾ ದೃಷ್ಟಿಕೋನವನ್ನಿಟ್ಟುಕೊಂಡು ಕಳೆದ ಮೂರು ತಿಂಗಳ ಹಿಂದೆ ಕೇಂದ್ರ ಸರ್ಕಾರ ಪಬ್ಜಿ ಗೇಮ್ ಅನ್ನು ಭಾರತದಲ್ಲಿ ಬ್ಯಾನ್ ಮಾಡಿದೆ. ಪ್ರಮುಖವಾಗಿ ಪಬ್ಜಿ ದಕ್ಷಿಣ ಕೊರಿಯಾದ ಗೇಮ್ ಆಗಿದ್ದರು, ಚೀನಾದೊಂದಿಗೆ ದೊಡ್ಡ ಪಾಲನ್ನು ಹೊಂದಿತ್ತು.
4/ 8
ಹಾಗಾಗಿ ಭಾರತದ ಬಾಹ್ಯ ಮತ್ತು ಆತಂರಿಕ ದೃಷ್ಟಿಯನ್ನು ಗುರಿಯಾಗಿಸಿಕೊಂಡು ತೊಂದರೆ ನೀಡುತ್ತಿದ್ದ ಚೀನಾ ಆ್ಯಪ್ಗಳನ್ನು ಬ್ಯಾನ್ ಮಾಡಿತ್ತು. ಅದರ ಜೊತೆಗೆ ಪಬ್ಜಿ ಆ್ಯಪ್ ಅನ್ನು ಬ್ಯಾನ್ ಮಾಡಿದೆ.
5/ 8
ಭಾರತದಲ್ಲಿ ಪಬ್ಜಿ ಬ್ಯಾನ್ ಆಗಿರುವ ವಿಚಾರ ಅನೇಕ ಗೇಮ್ ಪ್ರಿಯರಿಗೆ ನೋವಾಗಿದೆ. ಆದರೆ ಭಾರತ ಮಾತ್ರವಲ್ಲದೆ ಕೆಲವು ದೇಶಗಗಳು ಇದೇ ಕಾರಣಕ್ಕೆ ಪಬ್ಜಿಯನ್ನು ಬ್ಯಾನ್ ಮಾಡಿದೆ.
6/ 8
ಪಬ್ಜಿ ಗೇಮ್ ಅನ್ನು ಬ್ಯಾನ್ ಮಾಡಿರುವ ದೇಶಗಳು ಯಾವುವು? ಈ ಬಗ್ಗೆ ಮಾಹಿತಿ ಇಲ್ಲಿದೆ.
7/ 8
ಚೀನಾದ ಹಲವಾರು ಆ್ಯಪ್ಗಳು ಬಳಕೆದಾರರ ಮಾಹಿತಿ ಎಗರಿಸುತ್ತಿತ್ತು. ಈ ವಿಚಾರವನ್ನಿ ಪರಿಶೀಲಿಸಿದ ಭಾರತದ ಅಂತಹ ಆ್ಯಪ್ಗಳನ್ನು ಕಿತ್ತೆಸೆದಿದೆ. ಆದರೆ ಭಾರತದ ಮಾತ್ರವಲ್ಲ ಇತರೆ ದೇಶಗಳನ್ನು ಗುರಿಯಾಗಿಸಿಕೊಂಡು ಚೀನಾ ಇದೇ ರೀತಿ ವರ್ತನೆ ಮಾಡಿತ್ತು.
8/ 8
ಇದೇ ಕಾರಣಕ್ಕಾಗಿ ಜೋರ್ಡಾನ್, ನೇಪಾಲ, ಇಸ್ರೇಲ್, ಇರಾಕ್ನಲ್ಲಿ ಪಬ್ಜಿಯನ್ನು ಬ್ಯಾನ್ ಮಾಡಿದೆ.