ಅನಗತ್ಯ ಆ್ಯಪ್ಗಳನ್ನು ಡಿಲೀಟ್ ಮಾಡಿ: ನಿಮ್ಮ ಸ್ಮಾರ್ಟ್ಫೋನ್ನಲ್ಲಿ ನಿಮಗೆ ಅಗತ್ಯವಿರದ ಅಪ್ಲಿಕೇಶನ್ಗಳನ್ನು ಡಿಲೀಟ್ ಮಾಡಿ. ನಿಮಗೆ ಗೊತ್ತಿಲ್ಲದ ಹಾಗೆಯೇ ನಿಮ್ಮ ಮೊಬೈಲ್ನಲ್ಲಿ ಕೆಲವೊಂದು ಅನಗತ್ಯ ಆ್ಯಪ್ಗಳು ತುಂಬಿಕೊಂಡಿರುತ್ತದೆ, ಇದನ್ನು ಬಳಕೆ ಮಾಡದಿದ್ದರೂ ಕ್ಯಾಚೆ ಫುಲ್ ಆಗುತ್ತದೆ. ಆದರೆ ಈ ಆ್ಯಪ್ಗಳನ್ನು ಡಿಲೀಟ್ ಮಾಡಿದ್ರೆ ನಿಮ್ಮ ಮೊಬೈಲ್ ಸ್ಪೀಡ್ ಆಗಿ ವರ್ಕ್ ಆಗುವಂತೆ ಮಾಡ್ಬೋದು.
ಸಿನಿಮಾ ನೋಡಿದ ತಕ್ಷಣ ಡಿಲೀಟ್ ಮಾಡಿ: ಇಂದಿನ ದಿನಗಳಲ್ಲಿ ಸಿನಿಮಾ, ಸೀರಿಯಲ್ಗಳನ್ನು ಸ್ಮಾರ್ಟ್ಫೋನ್ಗಳಲ್ಲೇ ನೋಡುವವರು ಹೆಚ್ಚಾಗಿದ್ದಾರೆ. ಆದರೆ ಇದಕ್ಕಾಗಿ ಯಾವುದೇ ಆ್ಯಪ್ ಮೂಲಕ ಡೌನ್ಲೋಡ ಮಾಡಿಕೊಳ್ಳತ್ತಾರೆ ಅಥವಾ ಇನ್ಯಾವುದೇ ಅಪ್ಲಿಕೇಶನ್ನಿಂದ ಶೇರ್ ಮಾಡಿಕೊಳ್ಳುತ್ತಾರೆ. ಆದರೆ ಮೂವಿ ನೋಡಿದ ಬಳಿಕ ಅದನ್ನು ಡಿಲೀಟ್ ಮಾಡಲು ಮರೆತುಬಿಡುತ್ತಾರೆ. ಈ ಸಂದರ್ಭಗಳಲ್ಲಿ ಸ್ಮಾರ್ಟ್ಫೋನ್ಗಳಲ್ಲಿ ಸ್ಟೋರೇಜ್ ಸಮಸ್ಯೆ ಎದುರಾಗುತ್ತದೆ.
ಗೇಮ್ಸ್ಗಳನ್ನು ಜಾಸ್ತಿ ಇಟ್ಟುಕೊಳ್ಳಬೇಡಿ: ಇತ್ತೀಚೆಗೆ ಸ್ಮಾರ್ಟ್ಫೋನ್ ಬಳಕೆದಾರರಿಗೆ ಬೇಕಾದ ಮಾದರಿಯಲ್ಲಿ ಮೊಬೈಲ್ನಲ್ಲಿ ಗೇಮ್ಸ್ಗಳು ಬಂದಿದೆ. ಇದಕ್ಕಾಗಿಯೇ ಬಳಕೆದಾರರು ಆಕರ್ಷಿತರಾಗಿದ್ದಾರೆ. ಹೀಗಿರುವಾಗ ಮೊಬೈಲ್ನಲ್ಲಿ ಜಾಸ್ತಿ ಗೇಮ್ಸ್ ಅಪ್ಲಿಕೇಶನ್ಗಳಿದ್ದಾಗ ಇವುಗಳು ಸ್ಮಾರ್ಟ್ಫೋನ್ನ ಸ್ಟೋರೇಜ್ ಖಾಲಿ ಮಾಡುತ್ತದೆ. ಅದಕ್ಕಾಗಿ ಆಡದೇ ಇರುವಂತಹ, ಇಷ್ಟವಾಗದ ಗೇಮ್ ಆ್ಯಪ್ಗಳನ್ನು ಡೌನ್ಲೋಡ್ ಮಾಡಿದ್ದರೆ ಈಗಲೇ ಡಿಲೀಟ್ ಮಾಡಿ.