2020ಕ್ಕೆ ರೋಡ್ಗಿಳಿಯಲಿದೆ ಮಹೀಂದ್ರಾ ಥಾರ್ ಹೊಸ ಆವೃತ್ತಿ..
ಮಹೀಂದ್ರಾ ಥಾರ್ ಮುಂದಿನ ಪೀಳಿಗೆಗೆ ಅನುಗುಣವಾದ ಪೀಚರ್ ಅನ್ನು ಅಳವಡಿಸಿಕೊಂಡಿದೆ. ಸುರಕ್ಷತೆ ಹಾಗೂ ವಾಹನ ಚಲಾವಣೆಗಾರರ ರಕ್ಷಣೆಗೆ ತಕ್ಕಂತೆ ಡ್ಯುಯೆಲ್ ಎರ್ ಬ್ಯಾಗ್, ವೇಗ ನಿಯಂತ್ರಣ, ಪಾರ್ಕಿಂಗ್ ಸೆನ್ಸರ್, ಎಬಿಎಸ್ ಟಯರ್ ಅಳವಡಿಸಲಾಗಿದೆ.
ಮಹೀಂದ್ರಾ ಕಂಪೆನಿ 2020ಕ್ಕೆ ಹೊಸ ಮಹೀಂದ್ರಾ ಥಾರ್ ಆವೃತ್ತಿಯನ್ನು ಪರಿಚಯಿಸಲು ಮುಂದಾಗಿದೆ. ಕಾರ್ ಪ್ರೀಯರಿಗಾಗಿಯೆ ಇದರಲ್ಲಿ ಹೊಸದಾದ ವಿನ್ಯಾಸದ ಜೊತೆ ಅಧಿಕ ಆಯ್ಕೆಗಳನ್ನು ನೀಡಲಾಗಿದೆ. 2020ರ ಅವಧಿಯಲ್ಲಿ ಮಾರುಕಟ್ಟೆಗೆ ಬರಲು ಸಜ್ಜಾಗಿರುವ ಮಹೀಂದ್ರಾ ಥಾರ್ ಇದೀಗ ಚೆನೈನಲ್ಲಿ ಕಂಪೆನಿ ನಡೆಸುವ ಟೆಸ್ಟಿನಲ್ಲಿ ಭಾಗವಹಿಸಲು ಮುಂದಾಗಿದೆ.
2/ 3
ಮಹೀಂದ್ರಾ ಥಾರ್ ಮುಂದಿನ ಪೀಳಿಗೆಗೆ ಅನುಗುಣವಾದ ಪೀಚರ್ ಅನ್ನು ಅಳವಡಿಸಿಕೊಂಡಿದೆ. ಸುರಕ್ಷತೆ ಹಾಗೂ ವಾಹನ ಚಲಾವಣೆಗಾರರ ರಕ್ಷಣೆಗೆ ತಕ್ಕಂತೆ ಡ್ಯುಯೆಲ್ ಎರ್ ಬ್ಯಾಗ್, ವೇಗ ನಿಯಂತ್ರಣ, ಪಾರ್ಕಿಂಗ್ ಸೆನ್ಸರ್, ಎಬಿಎಸ್ ಟಯರ್ ಅಳವಡಿಸಲಾಗಿದೆ. ಅಂತೆಯೆ 2.2 ಲೀಟರ್ ಡೀಸೆಲ್ ಇಂಜಿನ್ ಹೊಂದಿದೆ.
3/ 3
ಮಹೀಂದ್ರಾ ಕಂಪೆನಿಯ ಡಾ. ಪವನ್ ಗೋಯೆಂಕ "ಮಹೀಂದ್ರಾ ಥಾರ್ 2020ಕ್ಕೆ ಹೊಸ ವೇದಿಕೆ ಸೃಷ್ಠಿಸಲಿದೆ" ಎಂದು ಹೇಳಿದ್ದಾರೆ. ಈಗಾಗಲೇ ಫೆ. 14 ರಂದು ಮಹೀಂದ್ರಾ ಕಂಪೆನಿ ಎಕ್ಸ್ಯುವಿ300 ಕಾರನ್ನು ಮಾರುಕಟ್ಟೆಗೆ ಬಿಡುವ ತಯಾರಿಯಲ್ಲಿದ್ದು, ಇದರ ಬೆನ್ನಲ್ಲೇ ಕಂಪೆನಿ ಥಾರ್ ಕಾರನ್ನು ತಯಾರಿಸುತ್ತಿದೆ.