ವಾಟ್ಸಾಪ್ ಗುಂಪಿನಲ್ಲಿ ಅಡ್ಮಿನ್‌ಗಳಿಗೆ ನಿಯಂತ್ರಣ: ಗ್ರೂಪ್ ಅಡ್ಮಿನ್‌ಗಳಿಗೆ ಗೌಪ್ಯತೆಗಾಗಿ ಉತ್ತಮ ನಿಯಂತ್ರಣಗಳನ್ನು ನೀಡುವುದು ವಾಟ್ಸಾಪ್ನ ಮುಖ್ಯ ಕರ್ತವ್ಯ. ಅದಕ್ಕಾಗಿ, ಇನ್ಮುಂದೆ ವಾಟ್ಸಾಪ್ ಗ್ರೂಪ್‌ಗೆ ಯಾರು ಸೇರಬಹುದು ಎಂಬುದನ್ನು ನಿರ್ಧರಿಸಲು ಅಡ್ಮಿನ್ಗಳು ನಿರ್ಧರಿಸಬಹುದು. ಜೊತೆಗೆ ಗ್ರೂಪ್ ಲಿಂಕ್ಗಳನ್ನು ಸಹ ಯಾರೆಲ್ಲಾ ಶೇರ್ ಮಾಡ್ಬಹುದು ಎಂದು ಸಹ ಸೆಟ್ ಮಾಡಬಹುದಾಗಿದೆ.
ವಾಟ್ಸಾಪ್ ಗ್ರೂಪ್‌ಗಳಿಗೆ ಹೆಚ್ಚಿನ ಸದಸ್ಯರನ್ನು ಸೇರಿಸಬಹುದು: ಕಂಪೆನಿಯು ವಾಟ್ಸಾಪ್ ಗ್ರೂಪ್‌ಗೆ ಸೇರಿಸಬಹುದಾದ ಸದಸ್ಯರ ಸಂಖ್ಯೆಯನ್ನು ಇದೀಗ ಮತ್ತೆ ಹೆಚ್ಚು ಮಾಡಿದೆ. ಪ್ರಸ್ತುತ ವಾಟ್ಸಾಪ್ ಗುಂಪಿನಲ್ಲಿ ಕೇವಲ 512 ಜನರು ಮಾತ್ರ ಇರಬಹುದಿತ್ತು. ಆದರೆ ಇನ್ಮುಂದೆ 1024 ಸದಸ್ಯರನ್ನು ಆ್ಯಡ್ ಮಾಡಬಹುದಾಗಿದೆ. ವಾಟ್ಸಾಪ್ ಕಳೆದ ವರ್ಷ ಈ ಫೀಚರ್ ಅನ್ನು ಘೋಷಿಸಿದ್ದರೂ ಈಗ ಅದನ್ನು ಲಭ್ಯವಾಗುವಂತೆ ಮಾಡುತ್ತಿದೆ.
ವಾಟ್ಸಾಪ್ ಬಳಕೆದಾರರ ಬಹುದಿನದ ಬೇಡಿಕೆ ಇದೀಗ ಸಂಪೂರ್ಣವಾಗಿದೆ. ವಾಟ್ಸಾಪ್ ಕಳೆದ ಬಾರಿ ಸ್ಟೇಟಸ್ನಲ್ಲಿ ಇನ್ಮುಂದೆ ವಾಯ್ಸ್ ಮೆಸೇಜ್ ಅನ್ನು ಶೇರ್ ಮಾಡಬಹುದೆಂಬ ಸುದ್ದಿಯನ್ನು ನೀಡಿತ್ತು. ಅದೇ ರೀತಿ ಇದೀಗ ಹೊಸ ಅಪ್ಡೇಟ್ ಅನ್ನು ಬಿಡುಗಡೆ ಮಾಡಿದೆ. ಈ ಮೂಲಕ ವಾಟ್ಸಾಪ್ ಬಳಕೆದಾರರು ಇನ್ಮುಂದೆ ಯಾವುದೇ ವಾಯ್ಸ್ ಮೆಸೇಜ್ ಅನ್ನು ಸ್ಟೇಟಸ್ನಲ್ಲಿ ಶೇರ್ ಮಾಡಿಕೊಳ್ಳಬಹುದಾಗಿದೆ.