ವಾಟ್ಸಾಪ್ (WhatsApp) ಬಳಕೆದಾರರು ತಮ್ಮ ಫಿಂಗರ್‌ಪ್ರಿಂಟ್ ಅಥವಾ ಪಾಸ್‌ಕೋಡ್ ಬಳಸಿಕೊಂಡು ನಿರ್ದಿಷ್ಟ ಚಾಟ್‌ಗಳನ್ನು ಲಾಕ್ ಮಾಡುವ ಬಹುನಿರೀಕ್ಷಿತ ವೈಶಿಷ್ಟ್ಯವು ಇದೀಗ ಬೀಟಾ ಬಳಕೆದಾರರಿಗೆ ಲಭ್ಯವಾಗಿದೆ. ವಾಟ್ಸಾಪ್ "ಲಾಕ್ ಚಾಟ್"(Lock Chat) ಎಂಬ ಹೊಸ ವೈಶಿಷ್ಟ್ಯವನ್ನು ಪರಿಚಯಿಸುತ್ತಿದ್ದು, ಇದು ಗೌಪ್ಯತೆಯನ್ನು ಹೆಚ್ಚಿಸಲು ಬಳಕೆದಾರರಿಗೆ ನಿರ್ದಿಷ್ಟ ಚಾಟ್ ಅನ್ನು ಲಾಕ್ ಮಾಡಲು ಅನುವು ಮಾಡಿಕೊಡುತ್ತದೆ.
ಮೆಟಾದ ಸಂಸ್ಥಾಪಕ, ಅಧ್ಯಕ್ಷ ಮತ್ತು ಸಿಇಒ ಮಾರ್ಕ್ ಜುಕರ್‌ಬರ್ಗ್ ಫೇಸ್‌ಬುಕ್ ಪೋಸ್ಟ್‌ನಲ್ಲಿ ಹೊಸ ವೈಶಿಷ್ಟ್ಯ ಕುರಿತು ಹೇಳಿದ್ದಾರೆ, "ಮೆಸೇಜ್ಗಳನ್ನು ಪಾಸ್‌ವರ್ಡ್ ಸಂರಕ್ಷಿತ ಫೋಲ್ಡರ್‌ನಲ್ಲಿ ಮರೆಮಾಡಲಾಗಿದೆ ಮತ್ತು ಅಧಿಸೂಚನೆಗಳು ಕಳುಹಿಸುವವರ ಅಥವಾ ಸಂದೇಶದ ವಿಷಯವು ಡಿಸ್ಪ್ಲೇ ಆಗುವುದಿಲ್ಲ ಎಂದು ಖಚಿತಪಡಿಸಿದ್ದಾರೆ." ವಾಟ್ಸಾಪ್ ಬಳಕೆದಾರರು "ಚಾಟ್ ಲಾಕ್" ವೈಶಿಷ್ಟ್ಯವನ್ನು ಬಳಸಿಕೊಂಡು ನಿರ್ದಿಷ್ಟ ಚಾಟ್‌ಗಳನ್ನು ಲಾಕ್ ಮಾಡಲು ವಾಟ್ಸಾಪ್ ಕಾಂಟ್ಯಾಕ್ಟ್ ಪ್ರೊಫೈಲ್ ವಿಭಾಗವನ್ನು ತೆರೆಯಬೇಕು.
ಇಲ್ಲಿ ಕೆಳಗೆ ಸ್ಕ್ರಾಲ್ ಮಾಡಿದಾಗ "ಚಾಟ್ ಲಾಕ್" ವೈಶಿಷ್ಟ್ಯವು ಕಾಣಿಸುತ್ತದೆ. ಇದನ್ನು ಟ್ಯಾಪ್ ಮಾಡಿದರೆ "ಲಾಕ್ ದಿಸ್ ಚಾಟ್ ವಿತ್ ಫಿಂಗರ್‌ಪ್ರಿಂಟ್" ಆಯ್ಕೆಯನ್ನು ಸಕ್ರಿಯಗೊಳಿಸಬೇಕು. ಮುಂಬರುವ ವಾರಗಳಲ್ಲಿ ಎಲ್ಲಾ ವಾಟ್ಸಾಪ್ ಬಳಕೆದಾರಿಗೆ ಲಭ್ಯವಾಗಲಿರುವ ಈ ಹೊಸ ಅಪ್‌ಡೇಟ್ ಪರೀಕ್ಷೆಯ ಹಂತದಲ್ಲಿದ್ದು, ಬಳಕೆದಾರರು ಮುಂಚಿತವಾಗಿ ಈ ವೈಶಿಷ್ಟ್ಯವನ್ನು ಪ್ರಯತ್ನಿಸಲು Play Store ನಲ್ಲಿ ವಾಟ್ಸಾಪ್ ಬೀಟಾ ಪ್ರೋಗ್ರಾಂಗೆ ಸೈನ್ ಅಪ್ ಮಾಡಬಹುದು.
“ಯಾವುದೇ ಕಂಪನಿ, ಸರ್ಕಾರ ಅಥವಾ ವ್ಯಕ್ತಿಗೆ ನಿಮ್ಮ ವೈಯಕ್ತಿಕ ಸಂದೇಶಗಳನ್ನು ಓದುವ ಹಕ್ಕು ಇರುವುದಿಲ್ಲ ಮತ್ತು ನಾವು ಎನ್‌ಕ್ರಿಪ್ಶನ್ ಅನ್ನು ರಕ್ಷಿಸುವುದನ್ನು ಮುಂದುವರಿಸುತ್ತೇವೆ ಎಂದು ವಾಟ್ಸಾಪ್ ಮುಖ್ಯಸ್ಥ ವಿಲ್ ಕ್ಯಾತ್‌ಕಾರ್ಟ್ ಮತ್ತು ಸಿಗ್ನಲ್ ಮತ್ತು ವೈರ್ ಸೇರಿದಂತೆ ಇತರ ಸಂದೇಶ ಕಳುಹಿಸುವ ಸೇವೆಗಳ ಮೇಲಧಿಕಾರಿಗಳು ಸಹಿ ಮಾಡಿದ ಪತ್ರದಲ್ಲಿ ಉಲ್ಲೇಖಿಸಲಾಗಿದೆ.